ಮೆಲ್ಬೋರ್ನ್ : ಭಾರತ ಹಾಗೂ ಪಾಕಿಸ್ತಾನ (IND vs PAKIND vs PAK) ನಡುವಿನ ಟಿ೨೦ ವಿಶ್ವ ಕಪ್ ಪಂದ್ಯ ಭಾನುವಾರ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆಯಲಿದ್ದು, ಕ್ರಿಕೆಟ್ ಕಾರಿಡಾರ್‌ನಲ್ಲಿ ಸೋಲು- ಗೆಲುವಿನ ಚರ್ಚೆ ಜೋರಾಗಿ ನಡೆಯುತ್ತಿದೆ. ಅಂತೆಯೇ, ಪಂದ್ಯವನ್ನು ನೇರ ವೀಕ್ಷಣೆ ಮಾಡಲು ಬಯಸುತ್ತಿರುವ ಅಭಿಮಾನಿಗಳು ಶನಿವಾರವೇ ಮೆಲ್ಬೋರ್ನ್ ನಗರ ಸೇರಿಕೊಂಡಿದ್ದಾರೆ. ಏತನ್ಮಧ್ಯೆ, ಹೈವೋಲ್ಟೇಜ್ ಪಂದ್ಯ ವೀಕ್ಷಣೆ ಮಾಡಲು ಸಾವಿರಾರು ಮಂದಿ ಏಕಾಏಕಿ ಮೆಲ್ಬೋರ್ನ್ ನಗರಕ್ಕೆ ಹೋಗಿರುವ ಕಾರಣ ಅಲ್ಲಿ ಉಳಿದುಕೊಳ್ಳುವುದಕ್ಕೆ ಹೋಟೆಲ್‌ಗಳೇ ಸಿಗುತ್ತಿಲ್ಲ ಎಂಬುದಾಗಿ ವರದಿಯಾಗಿದೆ.
ಎಮ್‌ಸಿಜಿ ಕ್ರಿಕೆಟ್ ಮೈದಾನದಲ್ಲಿ ೧೯೮೦ರ ಬಳಿಕ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಮುಖಾಮುಖಿಯಾಗುತ್ತಿವೆ. ಹೀಗಾಗಿ ಸ್ಥಳೀಯ ಕ್ರಿಕೆಟ್ ಅಭಿಮಾನಿಗಳು ಈ ಜಿದ್ದಾಜಿದ್ದಿನ ಹಣಾಹಣಿಯನ್ನು ವೀಕ್ಷಿಸಲು ಕಾತರರಾಗಿದ್ದಾರೆ. ಜತೆಗೆ ಕ್ರಿಕೆಟ್ ಆಡುವ ದೇಶಗಳ ಸಾವಿರಾರು ಅಭಿಮಾನಿಗಳು ಮೆಲ್ಬೋರ್ನ್‌ಗೆ ತೆರಳಿದ್ದಾರೆ. ಟಿಕೆಟ್ ಪಡೆದುಕೊಂಡಿರುವ ಅಭಿಮಾನಿಗಳೆಲ್ಲರೂ ನೇರವಾಗಿ ಮೆಲ್ಬೋರ್ನ್‌ಗೆ ಹೋಗಿದ್ದು ಅಲ್ಲಿ ಹೋಟೆಲ್ ಬುಕ್ ಮಾಡಲು ಹುಡುಕಾಟ ನಡೆಸುತ್ತಿದ್ದಾರೆ. ಮೊದಲ ಬಂದವರಿಗೆ ಈಗಾಗಲೇ ಹೋಟೆಲ್‌ಗಳಲ್ಲಿ ರೂಮ್‌ಗಳು ಸಿಕ್ಕವೆ. ಅದರೆ, ತಡವಾಗಿ ಬಂದವರಿಗೆ ಸಿಗುತ್ತಿಲ್ಲ ಎನ್ನಲಾಗಿದೆ.
ಮೆಲ್ಬೋರ್ನ್ ನಗರ ಹಲವರು ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆತಿಥ್ಯ ವಹಿಸುತ್ತದೆ. ಪ್ರಮುಖವಾಗಿ ಅಸ್ಟ್ರೇಲಿಯಾ ಓಪನ್ ಗ್ರ್ಯಾನ್ ಸ್ಲಾಮ್ ಹಾಗೂ ಬಾಕ್ಸಿಂಗ್ ಟೇ ಟೆಸ್ಟ್ ಪಂದ್ಯ ನಡೆಯುವುದು ಇಲ್ಲೇ. ಹೀಗಾಗಿ ವರ್ಷದ ಬಹುತೇಕ ಸಂದರ್ಭದಲ್ಲಿ ಕ್ರೀಡಾಭಿಮಾನಿಗಳು ಇಲ್ಲಿಗೆ ಬರುತ್ತಾರೆ. ಹೀಗಾಗಿ ಹೋಟೆಲ್ ರೂಮ್‌ಗಳು ಸದಾ ಬುಕ್ ಆಗಿರುತ್ತವೆ. ಆದಾಗ್ಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಕ್ರಿಕೆಟ್ ಪಂದ್ಯವಾಗಿರುವ ಕಾರಣ ಮಿತಿ ಮೀರಿ ಅಭಿಮಾನಿಗಳು ಬಂದಿದ್ದಾರೆ.’
ಇದನ್ನೂ ಓದಿ | T20 World Cup | ಭಾರತ-ಪಾಕ್ ಪಂದ್ಯಕ್ಕೆ ಮಳೆ ಬಂದರೆ ಫಲಿತಾಂಶ ನಿರ್ಧಾರ ಹೇಗೆ?