ಪರ್ತ್ : ವಿರಾಟ್ ಕೊಹ್ಲಿಯ ಹೋಟೆಲ್ ರೂಮ್ಗೆ ನುಗ್ಗಿದ್ದು ಅಭಿಮಾನಿಯಲ್ಲ. ಹೋಟೆಲ್ ಸಿಬ್ಬಂದಿ. ಘಟನೆ ಕುರಿತು ವಿಷಾದ ಕೋರಿರುವ ಹೋಟೆಲ್ ಮ್ಯಾನೇಜ್ಮೆಂಟ್ ಆ ಸಿಬ್ಬಂದಿಯನ್ನು ಕೆಲಸದಿಂದ ಕಿತ್ತು ಹಾಕಿದೆ. “ವಿರಾಟ್ ಕೊಹ್ಲಿಯ ಕೊಠಡಿಗೆ ನುಗ್ಗಿದ ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ. ಅಂತೆಯೇ ಅವರು ಪೋಸ್ಟ್ ಮಾಡಿರುವ ವಿಡಿಯೊವನ್ನು ಸಾಮಾಜಿಕ ಜಾಲತಾಣದಿಂದ ತೆಗೆದು ಹಾಕುವ ಕೆಲಸ ಮಾಡಲಾಗುತ್ತಿದೆ. ಈ ಕುರಿತು ತನಿಖೆಯೂ ನಡೆಸಲಾಗುತ್ತಿದೆ ಎಂಬುದಾಗಿ ಹೋಟೆಲ್ ಪ್ರಕಟಣೆ ಹೊರಡಿಸಿದೆ.
ಭಾನುವಾರ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಬ್ಯುಸಿಯಾಗಿದ್ದ ವೇಳೆ ಹೋಟೆಲ್ ಸಿಬ್ಬಂದಿ, ವಿರಾಟ್ ಕೊಹ್ಲಿಯ ಕೊಠಡಿಗೆ ನುಗ್ಗಿ ವಿಡಿಯೊ ಮಾಡಿದ್ದರು. ಅವರ ಖಾಸಗಿ ಬಳಕೆಯ ವಸ್ತುಗಳನ್ನು ಚಿತ್ರೀಕರಣ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರು. ಘಟನೆಯಿಂದ ವಿರಾಟ್ ಕೊಹ್ಲಿ ಕೋಪಗೊಂಡು ಸಾಮಾಜಿಕ ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದರು.
ಘಟನೆ ಬಗ್ಗೆ ಹಲವಾರು ಸೆಲೆಬ್ರಿಟಿಗಳು ವಿಷಾದ ವ್ಯಕ್ತಪಡಿಸಿದ್ದರು. ಆಯೋಜಕರ ಮೇಲೆಯೂ ಒತ್ತಡ ಸೃಷ್ಟಿಯಾಗಿತ್ತು. ಹೀಗಾಗಿ ತಕ್ಷಣ ಪ್ರತಿಕ್ರಿಯೆ ಕೊಟ್ಟ ಹೋಟೆಲ್, ಸಿಬ್ಬಂದಿಯನ್ನು ಕೆಲಸದಿಂದ ತೆಗೆದು ಹಾಕಿ ತನಿಖೆ ನಡೆಸುವುದಾಗಿ ಹೇಳಿದೆ.
ಇದನ್ನೂ ಓದಿ | Virat Kohli | ದಕ್ಷಣ ಆಫ್ರಿಕಾ ವಿರುದ್ಧ 12 ರನ್ ಗಳಿಸಿದರೂ ವಿಶ್ವ ದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ