ಬೆಂಗಳೂರು: ಪಾಕಿಸ್ತಾನ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದ ಬಳಿಕ ವಿಶ್ವ ಕಪ್ನ (ICC World Cup 2023) ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ ಉಂಟಾಗಿದೆ. ಅಗ್ರ ಸ್ಥಾನದಲ್ಲಿದ್ದ ಭಾರತ ತಂಡವನ್ನು ಕೆಳಕ್ಕೆ ತಳ್ಳಿದ ತೆಂಬಾ ಬವುಮಾ ನೇತೃತ್ವದ ಹರಿಣಗಳ ಪಡೆ ಮೊದಲ ಸ್ಥಾನ ಪಡೆದುಕೊಂಡಿದೆ. ದಕ್ಷಿಣ ಆಫ್ರಿಕಾ ಬಳಗ ಇದುವರೆಗೆ ಆರು ಪಂದ್ಯಗಳನ್ನು ಆಡಿದ್ದ ಐದರಲ್ಲಿ ಗೆದ್ದು 10 ಅಂಕಗಳನ್ನು ಸಂಪಾದಿಸಿದೆ. ಭಾರತವೂ ಐದು ಪಂದ್ಯಗಳಲ್ಲಿ ಐದರಲ್ಲಿಯೂ ಗೆದ್ದು 10 ಅಂಕಗಳನ್ನು ಸಂಪಾದಿಸಿದೆ. ಆದರೆ, ಭಾರತಕ್ಕಿಂತ (1.353) ಹೆಚ್ಚಿನ ನೆಟ್ರನ್ ಹೊಂದಿರುವ ದಕ್ಷಿಣ ಆಫ್ರಿಕಾ (2.032) ತಂಡ ಮೊದಲ ಸ್ಥಾನ ಪಡೆದುಕೊಂಡಿದೆ.
South Africa reclaims their top spot in the update points table.🔥 pic.twitter.com/W1XXclc60v
— CricTracker (@Cricketracker) October 27, 2023
ನಾಲ್ಕನೇ ಸೋಲಿನ ಹೊರತಾಗಿಯೂ ಪಾಕಿಸ್ತಾನ ತಂಡ 6ನೇ ಸ್ಥಾನಕ ಕಳೆದುಕೊಂಡಿಲ್ಲ. ಆಡಿರುವ 6 ಪಂದ್ಯಗಳಲ್ಲಿ ಎರಡರಲ್ಲಿ ಗೆದ್ದು ನಾಲ್ಕರಲ್ಲಿ ಸೋತು ಕೇವಲ ನಾಲ್ಕು ಅಂಕ ಸಂಪಾದಿಸಿದೆ. ಈ ಮೂಲಕ -0.387 ನೆಟ್ರನ್ರೇಟ್ ಪಡೆದು ಆರನೇ ಸ್ಥಾನದಲ್ಲಿದೆ. ಹಾಲಿ ಆವೃತ್ತಿಯಲ್ಲಿ ದುರ್ಬಲ ತಂಡ ಎನಿಸಿಕೊಂಡಿದ್ದ ಶ್ರೀಲಂಕಾ ಅದಕ್ಕಿಂತ ಮೇಲಿನ ಸ್ಥಾನದಲ್ಲಿರುವುದೇ ಅಚ್ಚರಿ.
ಈ ಸುದ್ದಿಯನ್ನೂ ಓದಿ : ICC World Cup 2023 : ದ. ಆಫ್ರಿಕಾದ ʼಮಹಾರಾಜʼನಿಗೆ ತಲೆ ಬಾಗಿದ ಪಾಕಿಸ್ತಾನಕ್ಕೆ ಮತ್ತೊಂದು ಸೋಲು
ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನದಲ್ಲಿದೆ. ಲಂಕಾಗೆ ಐದನೇ ಸ್ಥಾನವಿದ್ದರೆ, ಬಾಂಗ್ಲಾದೇಶಕ್ಕೆ ಏಳನೇ ಸ್ಥಾನ. ಎಂಟನೇ ಸ್ಥಾನ ಅಫಘಾನಿಸ್ತಾನದ ಪಾಲಾಗಿದ್ದು, ಹಾಲಿ ಚಾಂಪಿಯನ್ ಇಂಗ್ಲೆಂಡ್ಗೆ 9ನೇ ಸ್ಥಾನ ಎಂಬುದೇ ಅಚ್ಚರಿ. 10ನೇ ಸ್ಥಾನವನ್ನು ಅರ್ಹತಾ ಸುತ್ತಿನ ಮೂಲಕ ಪ್ರವೇಶ ಪಡೆದ ನೆದರ್ಲ್ಯಾಂಡ್ಸ್ ತಂಡ ಹೊಂದಿದೆ.
ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ದಕ್ಷಿಣ ಆಫ್ರಿಕಾ | 6 | 5 | 1 | 10 | 2.032 |
ಭಾರತ | 5 | 5 | 0 | 10 | 1.353 |
ನ್ಯೂಜಿಲ್ಯಾಂಡ್ | 5 | 4 | 1 | 8 | 1.481 |
ಆಸ್ಟ್ರೇಲಿಯಾ | 5 | 3 | 2 | 6 | 1.142 |
ಶ್ರೀಲಂಕಾ | 5 | 2 | 3 | 4 | -0.205 |
ಪಾಕಿಸ್ತಾನ | 6 | 2 | 4 | 4 | -0.387 |
ಅಫಘಾನಿಸ್ತಾನ | 5 | 2 | 3 | 4 | -0.969 |
ಬಾಂಗ್ಲಾದೇಶ | 5 | 1 | 4 | 2 | -1.253 |
ಇಂಗ್ಲೆಂಡ್ | 5 | 1 | 4 | 2 | -1.634 |
ನೆದರ್ಲ್ಯಾಂಡ್ಸ್ | 5 | 1 | 4 | 2 | -1.902 |
ಶನಿವಾರ ಅಂದರೆ ಅಕ್ಟೋಬರ್ 28ರಂದು ಎರಡು ಪಂದ್ಯಗಳು ನಿಗದಿಯಾಗಿವೆ. ನ್ಯೂಜಿಲ್ಯಾಂಡ್ ವಿರುದ್ದ ಆಸ್ಟ್ರೇಲಿಯಾ ತಂಡ ಆಡಿದರೆ ಬಾಂಗ್ಲಾದೇಶ ವಿರುದ್ಧ ನೆದರ್ಲ್ಯಾಂಡ್ಸ್ ತಂಡ ಸೆಣಸಲಿದೆ. ಮೊದಲ ಪಂದ್ಯ ಹಿಮಾಚಲ ಪ್ರದೇಶದಲ್ಲಿ ಆಯೋಜನೆಗೊಂಡಿದ್ದರೆ ಎರಡನೇ ಪಂದ್ಯ ಕೋಲ್ಕೊತಾದ ಈಡನ್ ಗಾರ್ಡನ್ಸ್ನಲ್ಲಿ ನಡೆಯಲಿದೆ. ಇದು ಈಡನ್ ಗಾರ್ಡನ್ಸ್ನಲ್ಲಿ ಹಾಲಿ ಅವೃತ್ತಿಯ ಮೊದಲ ಪಂದ್ಯವಾಗಿದೆ.