Site icon Vistara News

Women’s FTP | 3 ವರ್ಷದಲ್ಲಿ ಎಷ್ಟು ಪಂದ್ಯ ಆಡಲಿದೆ ಭಾರತ ಮಹಿಳೆಯರ ಕ್ರಿಕೆಟ್‌ ತಂಡ, ಇಲ್ಲಿದೆ ಮಾಹಿತಿ

Women Cricket

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ)ಯು ೨೦೨೨ರಿಂದ ೨೦೨೫ರ ಅವಧಿಯಲ್ಲಿ ಆಯೋಜಿಸುವ ಫ್ಯೂಚರ್‌ ಟೂರ್ಸ್‌ & ಪ್ರೋಗ್ರಾಮ್ಸ್‌ (Women’s FTP) ಭಾಗವಾಗಿ ಭಾರತದ ಮಹಿಳಾ ಕ್ರಿಕೆಟ್‌ ತಂಡವು ೬೫ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಲಿದೆ. ೨೦೨೨ರ ಮೇ ತಿಂಗಳಿಂದ ೨೦೨೫ರ ಏಪ್ರಿಲ್‌ ಅವಧಿಯಲ್ಲಿ ಕ್ರಿಕೆಟ್‌ ಪಂದ್ಯಗಳು ನಡೆಯಲಿವೆ.

ಭಾರತದ ಮಹಿಳಾ ಕ್ರಿಕೆಟ್‌ ತಂಡವು ಮೂರು ವರ್ಷಗಳಲ್ಲಿ ಎರಡು ಟೆಸ್ಟ್‌, ೨೭ ಏಕದಿನ ಹಾಗೂ ೩೬ ಟಿ-20 ಪಂದ್ಯಗಳನ್ನು ಆಡಲಿದೆ. ಎರಡು ಟೆಸ್ಟ್‌ ಪಂದ್ಯಗಳು ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ ವಿರುದ್ಧ ನಡೆಯಲಿವೆ. ಭಾರತದಲ್ಲಿಯೇ ನಡೆಯುವ ಪಂದ್ಯಗಳಲ್ಲಿ ನ್ಯೂಜಿಲೆಂಡ್‌, ದಕ್ಷಿಣ ಆಫ್ರಿಕಾ, ವೆಸ್ಟ್‌ ಇಂಡೀಸ್‌ ಹಾಗೂ ಐರ್ಲೆಂಡ್‌ ವಿರುದ್ಧ ಸೆಣಸಾಟ ನಡೆಯಲಿದೆ. ವಿದೇಶದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌, ಶ್ರೀಲಂಕಾ (ಈಗಾಗಲೇ ಪಂದ್ಯ ಮುಗಿದಿವೆ) ಹಾಗೂ ಬಾಂಗ್ಲಾದೇಶ ವಿರುದ್ಧ ಆಡಲಿದೆ.

ಎಫ್‌ಟಿಪಿ ಪಂದ್ಯಗಳ ಭಾಗವಾಗಿ ಒಟ್ಟು ಏಳು ಟೆಸ್ಟ್‌, ೧೩೫ ಏಕದಿನ ಹಾಗೂ ೧೫೯ ಟಿ-20 ಸೇರಿ ಒಟ್ಟು ೩೦೧ ಪಂದ್ಯಗಳು ನಡೆಯಲಿವೆ. ಭಾರತ ಈಗಾಗಲೇ ಮೂರು ಏಕದಿನ ಹಾಗೂ ಮೂರು ಟಿ-೨೦ ಪಂದ್ಯಗಳನ್ನು ಆಡಿದೆ. ಒಟ್ಟು ೧೦ ತಂಡಗಳು ಭಾಗವಹಿಸುತ್ತಿವೆ.

ಇದನ್ನೂ ಓದಿ | ಮಹಿಳಾ ಬೌಲರ್​ ಎಸೆತಕ್ಕೆ K L Rahul​ ಅಭ್ಯಾಸ

Exit mobile version