Site icon Vistara News

IND vs SA | ತಿರುವನಂತಪುರ ಕ್ರೀಡಾಂಗಣದಲ್ಲಿ ಭಾರತ ತಂಡ ಎಷ್ಟು ಬಾರಿ ಗೆದ್ದಿದೆ? ಪಿಚ್ ಸ್ಥಿತಿ ಹೇಗಿದೆ?

ind vs aus

ತಿರುನಂತಪುರ : ಕೇರಳದ ರಾಜಧಾನಿ ತಿರುವನಂತಪುರದ ಗ್ರೀನ್‌ಫೀಲ್ಡ್‌ ಸ್ಟೇಡಿಯಮ್‌ನಲ್ಲಿ ಬುಧವಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಟಿ೨೦ ಸರಣಿಯ ಮೊದಲ ಪಂದ್ಯ ನಡೆಯಲಿದೆ. ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯಲ್ಲಿ ಶುಭಾರಂಭ ಮಾಡುವುದು ಭಾರತ ತಂಡದ ಅಭಿಲಾಷೆಯಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ ಈ ಸರಣಿಯನ್ನೂ ವಶಪಡಿಸಿಕೊಳ್ಳುವ ಹುಮ್ಮಸ್ಸಿನಲ್ಲಿದೆ ಹಾಗಾದರೆ ಪಂದ್ಯ ನಡೆಯವ ಕ್ರೀಡಾಂಗಣದಲ್ಲಿ ಭಾರತದ ಜಯಾಪಜಯಗಳ ಲೆಕ್ಕಾಚಾರವನ್ನು ನೋಡೋಣ.

ಗ್ರೀನ್‌ ಫೀಲ್ಡ್‌ ಸ್ಟೇಡಿಯಮ್‌ ನಿರ್ಮಾಣಗೊಂಡಿದ್ದು ೨೦೧೫ರಲ್ಲಿ. ಹೀಗಾಗಿ ಹೆಚ್ಚು ವರ್ಷಗಳು ಆಗಿಲ್ಲ. ಹೀಗಾಗಿ ಒಟ್ಟಾರೆ ಮೂರು ಅಂತಾರಾಷ್ಟ್ರೀಯ ಪಂದ್ಯಗಳು ನಡೆದಿವೆ. ಎರಡು ಏಕ ದಿನ ಪಂದ್ಯ ಹಾಗೂ ಒಂದು ಏಕ ದಿನ ಪಂದ್ಯ. ಎರಡರಲ್ಲಿ ಭಾರತ ತಂಡ ಗೆಲುವು ಸಾಧಿಸಿದ್ದು, ಒಂದರಲ್ಲಿ ಪರಾಜಯ ಎದುರಿಸಿದೆ.

೨೦೧೭ರಲ್ಲಿ ಮೊದಲ ಟಿ೨೦ ಪಂದ್ಯ ನಡೆದಿತ್ತು. ಭಾರತಕ್ಕೆ ನ್ಯೂಜಿಲೆಂಡ್‌ ಎದುರಾಳಿ. ಮಳೆಯ ಕಾರಣಕ್ಕೆ ಪಂದ್ಯವನ್ನು ೮ ಓವರ್‌ಗಳಿಗೆ ಕುಂಠಿತಗೊಳಿಸಲಾಗಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರತ ೫ ವಿಕೆಟ್‌ಗೆ ೬೭ ರನ್‌ ಬಾರಿಸಿದ್ದರೆ, ಪ್ರವಾಸಿ ನ್ಯೂಜಿಲೆಂಡ್‌ ತಂಡ ೬೧ ರನ್‌ ಗಳಿಸಿ ಸೋಲೊಪ್ಪಿಕೊಂಡಿತ್ತು.

೨೦೧೮ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಏಕ ದಿನ ಪಂದ್ಯ ಆಯೋಜನೆಗೊಂಡಿತ್ತು. ಮೊದಲು ಬ್ಯಾಟ್‌ ಮಾಡಿದ ಪ್ರವಾಸಿ ತಂಡ ೧೦೪ ರನ್‌ಗಳಿಗೆ ಆಲ್‌ಔಟ್ ಆಗಿದ್ದರೆ, ಭಾರತ ೯ ವಿಕೆಟ್‌ಗಳಿಂದ ಗೆಲುವು ಸಾಧಿಸಿತ್ತು.

೨೦೧೯ರಲ್ಲಿ ಕೊನೇ ಟಿ೨೦ ಪಂದ್ಯ ನಡೆದಿತ್ತು. ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ೧೭೧ ರನ್‌ ಬಾರಿಸಿತು. ಅದರೆ, ವಿಂಡೀಸ್‌ ಗುರಿ ಭೇದಿಸಿ ಭಾರತಕ್ಕೆ ೮ ವಿಕೆಟ್‌ಗಳ ಸೋಲಿನ ಕಹಿ ಉಣಿಸಿತ್ತು.

ಗ್ರೀನ್‌ ಫೀಲ್ಡ್‌ ಪಿಚ್‌ ಬ್ಯಾಟಿಂಗ್‌ಗೆ ಸಹಕಾರಿ. ಆರಂಭದಲ್ಲಿ ಬೌಲರ್‌ಗಳಿಗೆ ನೆರವಾಗಿ ಬಳಿಕ ಬ್ಯಾಟರ್‌ಗಳಿಗೆ ಪೂರಕವಾಗುತ್ತದೆ.

ಇದನ್ನೂ ಓದಿ | Team India | ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭಾರತಕ್ಕೆ ಅನುಕೂಲವಾಗಬಲ್ಲ 3 ಸಂಗತಿಗಳು ಇಲ್ಲಿವೆ

Exit mobile version