ಧರ್ಮಶಾಲಾ: ನ್ಯೂಜಿಲ್ಯಾಂಡ್ ವಿರುದ್ಧ ಭಾನುವಾರ ನಡೆದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರು 95 ರನ್ಗೆ ವಿಕೆಟ್ ಕೈಚೆಲ್ಲಿ ನವರ್ಸ್ 90 ಆದರು. ಕೇವಲ 5 ರನ್‌ಗಳಿಂದ ಶತಕ ಕಳೆದುಕೊಂಡ ಅವರು ಸಚಿನ್ ತೆಂಡೂಲ್ಕರ್ ಶತಕದ ದಾಖಲೆ ಸರಿಗಟ್ಟುವ ಅವಕಾಶ ಕೈಚೆಲ್ಲಿದರು. ವಿರಾಟ್ ಕೊಹ್ಲಿ ಎಷ್ಟು ಬಾರಿ ನರ್ವಸ್ 90 ಆಗಿದ್ದಾರೆ(virat kohli 90 narvas) ಎಂಬ ಮಾಹಿತಿ ಇಲ್ಲಿದೆ.
ಕೊಹ್ಲಿಯ 90 ನರ್ವಸ್…
ವಿರಾಟ್ ಕೊಹ್ಲಿ ಇದುವರೆಗೆ 286 ಏಕದಿನ ಪಂದ್ಯಗಳನ್ನು ಆಡಿ 13437 ರನ್ ಬಾರಿಸಿದ್ದಾರೆ. 48 ಶತಕ ಒಳಗೊಂಡಿದೆ. ಒಟ್ಟಾರೆ ಅವರು ಏಕದಿನ ಕ್ರಿಕೆಟ್ನಲ್ಲಿ 7 ಬಾರಿ ನರ್ವಸ್ 90ಗೆ ಔಟ್ ಆಗಿದ್ದಾರೆ. ವಿರಾಟ್ ಕೊಹ್ಲಿ ಅವರು ಮೊದಲ ಬಾರಿ 90 ನರ್ವಸ್ ಆದದ್ದು 2010ರಲ್ಲಿ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ 91 ರನ್ಗೆ ಔಟಾಗಿದ್ದರು. ಅವರ ವಿಕೆಟ್ ಶಬೀಕ್ ಅಲ್ ಹಸನ್ ಪಡೆದಿದ್ದರು. ಇದಾದ ಬಳಿಕ 2011ರಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ 94 ರನ್ಗೆ ರನೌಟ್ ಆಗಿದ್ದರು. 2013ರಲ್ಲಿ ಮತ್ತೆ ವಿಂಡೀಸ್ ವಿರುದ್ಧ 99 ರನ್ಗೆ ವಿಕೆಟ್ ಕೈಚೆಲ್ಲಿ ಒಂದು ರನ್ ಅಂತರದಿಂದ ಶತಕ ವಂಚಿತರಾಗಿದ್ದರು. 2016 ಮತ್ತು 2017ರಲ್ಲಿ ಆಸ್ಟ್ರೇಲಿಯಾ ವಿರುದ್ಧ ಕ್ರಮವಾಗಿ 91 ಹಾಗೂ 92 ರನ್ಗೆ ಔಟಾಗಿದ್ದರು.
ಎಡಗೈ ಬ್ಯಾಟರ್ ಶಿಖರ್ ಧವನ್ ಕೂಡ ಏಕದಿನ ಕ್ರಿಕೆಟ್ನಲ್ಲಿ ಒಟ್ಟು 7 ಬಾರಿ ನರ್ವಸ್ 90 ಆಗಿದ್ದಾರೆ. ಮಾಜಿ ನಾಯಕ ಹಾಗೂ ಆಟಗಾರ ಮೊಹಮ್ಮದ್ ಅಜರುದ್ದೀನ್ ಕೂಡ 7 ಬಾರಿ 90 ರಿಂದ 99ರನ್ಗೆ ವಿಕೆಟ್ ಒಪ್ಪಿಸಿದ್ದಾರೆ. ಕೊಹ್ಲಿ ಅವರು ಕಿವೀಸ್ ವಿರುದ್ಧ 104 ಎಸೆತ ಎದುರಿಸಿ 8 ಬೌಂಡರಿ ಮತ್ತು 2 ಸಿಕ್ಸರ್ ನೆರವಿನಿಂದ 95 ರನ್ ಗಳಿಸಿ ಮ್ಯಾಟ್ ಹೆನ್ರಿಗೆ ವಿಕೆಟ್ ಒಪ್ಪಿಸಿದರು.
ಇದನ್ನೂ ಓದಿ IND vs NZ: 2 ಕ್ಯಾಚ್ ಹಿಡಿದು ದಾಖಲೆ ಬರೆದ ಕಿಂಗ್ ಕೊಹ್ಲಿ; ದಿಗ್ಗಜ ಆಟಗಾರನ ದಾಖಲೆ ಉಡೀಸ್
ಸಚಿನ್ಗೆ ಅಗ್ರಸ್ಥಾನ
ಅತಿ ಹೆಚ್ಚು ಬಾರಿ ನರ್ವಸ್ 90 ಆದ ದಾಖಲೆ ಟೀಮ್ ಇಂಡಿಯಾದ ಮಾಜಿ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿದೆ. ಸಚಿನ್ ತೆಂಡೂಲ್ಕರ್ ಅವರು ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಒಟ್ಟು 28 ಬಾರಿ 90–99 ರನ್ಗೆ ವಿಕೆಟ್ ಕೈಚೆಲ್ಲಿದ್ದಾರೆ. ಇದರಲ್ಲಿ 18 ಬಾರಿ ಏಕದಿನ ಕ್ರಿಕೆಟ್ನಲ್ಲಿ ಮತ್ತು 10 ಬಾರಿ ಟೆಸ್ಟ್ ಕ್ರಿಕೆಟ್ನಲ್ಲಿ ನರ್ವಸ್ 90 ಆಗಿ ವಿಕೆಟ್ ಕೈಚೆಲ್ಲಿದ್ದಾರೆ. ಸಚಿನ್ ಬಳಿಕ ವಿಶ್ವ ಕ್ರಿಕೆಟ್ನಲ್ಲಿ ಈ ಕೆಟ್ಟ ದಾಖಲೆ ಹೊಂದಿರುವ ಆಟಗಾರನೆಂದರೆ ಜಿಂಬಾಬ್ವೆಯ ಗ್ರಾಂಟ್ ಫ್ಲವರ್. ಅವರು 9 ಬಾರಿ 90ರ ಗಡಿಯಲ್ಲಿ ಔಟ್ ಆಗಿದ್ದಾರೆ.
ಇದನ್ನೂ ಓದಿ Virat Kohli: ರನ್ ಗಳಿಕೆಯಲ್ಲೂ ದಾಖಲೆ ಬರೆದ ವಿರಾಟ್ ಕೊಹ್ಲಿ
ರನ್ ಗಳಿಕೆಯಲ್ಲಿ ದಾಖಲೆ ಬರೆದ ಕೊಹ್ಲಿ
ಕೊಹ್ಲಿ ಅವರು 95 ರನ್ ಗಳಿಸುವ ಮೂಲಕ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ರನ್(Most runs in ODIs) ಸಿಡಿಸಿದ ವಿಶ್ವದ 4ನೇ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಹಿಂದೆ ನಾಲ್ಕನೇ ಸ್ಥಾನದಲ್ಲಿದ್ದ ಶ್ರೀಲಂಕಾದ ಸನತ್ ಜಯಸೂರ್ಯ ಇದೀಗ 5ನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಯಸೂರ್ಯ 13430 ರನ್ ಸಿಡಿಸಿದ್ದರು. ಇದೀಗ ಕೊಹ್ಲಿ ಸದ್ಯ 13437* ರನ್ ಸಿಡಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಅವರು ಈ ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಸಚಿನ್ 18426 ರನ್ ಸಿಡಿಸಿದ್ದಾರೆ. 14234 ರನ್ ಬಾರಿಸಿರುವ ಲಂಕಾದ ಕುಮಾರ ಸಂಗಕ್ಕಾರ ದ್ವಿತೀಯ ಸ್ಥಾನದಲ್ಲಿದ್ದಾರೆ. 13704 ರನ್ ಬಾರಿಸಿರುವ ಆಸ್ಟ್ರೇಲಿಯಾದ 2 ವಿಶ್ವಕಪ್ ವಿಜೇತ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್ ಮೂರನೇ ಸ್ಥಾನದಲ್ಲಿದ್ದಾರೆ.