ಬೆಂಗಳೂರು: ಬಿಸಿಸಿಐ (BCCI) ಆತಿಥ್ಯದಲ್ಲಿ ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ನಡೆಯಲಿರುವ ಪುರುಷರ ಏಕದಿನ ವಿಶ್ವಕಪ್ 2023ರ (World Cup 2023) ವೇಳಾಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಂಗಳವಾರ ಮುಂಬಯಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಕಟಿಸಿದೆ. ಭಾರತದಾದ್ಯಂತ 10 ಸ್ಥಳಗಳಲ್ಲಿ ಈ ಟೂರ್ನಿ ನಡೆಯಲಿದ್ದು. ಇದುವರೆಗಿನ ಅತಿದೊಡ್ಡ ಏಕ ದಿನ ವಿಶ್ವ ಕಪ್ ಎನಿಸಿಕೊಳ್ಳಲಿದೆ. ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟೂರ್ನಿಯ ಆರಂಭಿಕ ಹಾಗೂ ಕೊನೇ ಪಂದ್ಯ ನಡೆಯಲಿದೆ. ಮುಂಬಯಿ ಹಾಗೂ ಕೋಲ್ಕೊತಾದಲ್ಲಿ ಸೆಮಿಫೈನಲ್ ಹಣಾಹಣಿಗಳು ಆಯೋಜನೆಗೊಂಡಿವೆ. ಒಟ್ಟು 46 ದಿನಗಳಲ್ಲಿ 48 ಹಣಾಹಣಿಗಳು ಆಯೋಜನೆಗೊಂಡಿವೆ.
World Cup 2023 Matches in M Chinnaswamy Stadium, Bengaluru#ICC #WorldCup2023 #TeamIndia #Cricket #WorldCup #CricketNews #News #BCCI #CricketTwitter #INDvsPAK #Cricketlovers pic.twitter.com/o1hcLu75rh
— CricInformer (@CricInformer) June 27, 2023
ಬಹುನಿರೀಕ್ಷಿತ ವಿಶ್ವಕಪ್ ವೇಳಾಪಟ್ಟಿಯನ್ನು ಪಂದ್ಯಾವಳಿಗೆ 100 ದಿನಗಳು ಬಾಕಿ ಇರುವಾಗ ಘೋಷಿಸಲಾಗಿದೆ. ಬಿಸಿಸಿಐ ಸಿದ್ಧತೆ ಈಗಾಗಲೇ ಆರಂಭಗೊಂಡಿದೆ. ಆದರೆ, ವೇಳಾಪಟ್ಟಿ ಪ್ರಕಟಗೊಳ್ಳುವುದಕ್ಕೆ ಅಡಚಣೆಗಳು ಉಂಟಾಗಿದ್ದವು. ಪ್ರಮುಖವಾಗಿ ಪಾಕಿಸ್ತಾನ ತಂಡದ ಭಾರತ ಪ್ರವಾಸ ಇನ್ನೂ ನಿರ್ಧಾರವಾಗಿಲ್ಲ. ಎಲ್ಲವೂ ಅಲ್ಲಿನ ಸರಕಾರದ ಸೂಚನೆಯನ್ನು ಆಧರಿಸಿರುತ್ತದೆ. ಜತೆಗೆ ಪಿಸಿಬಿ ಕೆಲವು ತಾಣಗಳ ಬದಲಾವಣೆಗೆ ಬಲವಾಗಿ ಮನವಿ ಸಲ್ಲಿಕೆ ಮಾಡಿದೆ. ಉಳಿದಂತೆ 10 ತಾಣಗಳಲ್ಲಿ ಪಂದ್ಯಗಳು ಆಯೋಜನೆಗೊಂಡಿವೆ. ಇದರಲ್ಲಿ ಭಾರತ 9 ತಾಣಗಳಲ್ಲಿ ಆಡಲಿದ್ದು, ಪಾಕಿಸ್ತಾನಕ್ಕೆ ಐದು ನಗರಗಳನ್ನು ನಿಗದಿ ಪಡಿಸಲಾಗಿದೆ. ಬೆಂಗಳೂರು, ಚೆನ್ನೈ, ದೆಹಲಿ, ಧರ್ಮಶಾಲಾ, ಹೈದರಾಬಾದ್, ಕೋಲ್ಕತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಉಳಿದ ಪಂದ್ಯಗಳು ನಡೆಯಲಿವೆ. ಏತನ್ಮಧ್ಯೆ, ಹೈದರಾಬಾದ್ ಜೊತೆಗೆ ಗುವಾಹಟಿ ಮತ್ತು ತಿರುವನಂತಪುರಂ ಅಭ್ಯಾಸ ಪಂದ್ಯಗಳಿಗೆ ತಾಣಗಳಾಗಿವೆ. ಇದರಲ್ಲಿ ಪಾಕಿಸ್ತಾನ ತಂಡ ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕೊತಾ ಮತ್ತು ಅಹಮದಾಬಾದ್ನಲ್ಲಿ ಮಾತ್ರ ಆಡಲಿದೆ.
ಇದನ್ನೂ ಓದಿ : World Cup 2023 : ಭಾರತ, ಪಾಕ್ ಸೆಮಿಫೈನಲ್ಗೇರಿದರೆ ಮತ್ತೆ ಪಂದ್ಯದ ತಾಣ ಬದಲಾಗೋದು ಖಚಿತ! ಯಾಕೆ ಗೊತ್ತೇ?
ಇವೆಲ್ಲದರ ನಡುವೆ ವಿಶ್ವ ಕಪ್ನ ಎಷ್ಟು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ ಎಂಬುದಾಗಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಚರ್ಚೆ ಆರಂಭಿಸಿದ್ದಾರೆ. ವೇಳಾಪಟ್ಟಿ ಪ್ರಕಾರ ಬೆಂಗಳೂರಿನಲ್ಲಿ ಐದು ಪಂದ್ಯಗಳು ಮಾತ್ರ ನಿಗದಿಯಾಗಿದೆ. ಆದರೆ, ಪಾಕಿಸ್ತಾನ ತಂಡ ಸೆಮಿಫೈನಲ್ಗೇರಿದರೆ ಅದು ಮುಂಬಯಿಯಲ್ಲಿ ಆಡಲು ಒಪ್ಪುವುದಿಲ್ಲ. ಅಂಥ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಆಡುವುದಾಗಿ ಬೇಡಿಕೆ ಇಟ್ಟರೆ ಒಂದು ಪಂದ್ಯ ಹೆಚ್ಚುವರಿಯಾಗಿ ಸಿಗಬಹುದು. ಅಲ್ಲದಿದ್ದರೆ ಪಾಕ್ ಪಂದ್ಯ ಕೋಲ್ಕೊತಾದಲ್ಲಿ ಆಯೋಜನೆಗೊಳ್ಳಲಿದೆ.
ಭಾರತಕ್ಕೆ ಒಂದೇ ಪಂದ್ಯ
ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಟೂರ್ನಿಯಲ್ಲಿ 9 ಲೀಗ್ ಪಂದ್ಯಗಳಲ್ಲಿ ಆಡಬೇಕಾಗಿದೆ. ಅದದಲ್ಲಿ ಹೈದಾರಾಬಾದ್ ಒಂದು ಬಿಟ್ಟರೆ ಮಿಕ್ಕೆಲ್ಲ ಕಡೆಯೂ ಆಡಬೇಕಾಗಿದೆ. ಲೀಗ್ ಹಂತದ ಅಭಿಯಾನವನ್ನು ಭಾರತ ತಂಡ ಬೆಂಗಳೂರಿನಲ್ಲಿ ಮುಗಿಸಲಿದೆ. ಕ್ವಾಲಿಫೈಯ್ 1 ತಂಡದ ವಿರುದ್ಧ ಈ ಹಣಾಹಣಿಯಲ್ಲಿ ಸೆಣಸಬೇಕಾಗಿದೆ. ವೆಸ್ಟ್ ಇಂಡೀಸ್ ಅಥವಾ ಶ್ರೀಲಂಕಾ ತಂಡ ಕ್ವಾಲಿಫೈಯರ್ ಒಂದು ಅಥವಾ ಎರಡನೇ ಸ್ಥಾನವನ್ನು ಪಡೆಯುವ ಸಾಧ್ಯತೆಗಳಿವೆ. ಹೀಗಾಗಿ ಬೆಂಗಳೂರು ಅಭಿಮಾನಿಗಳ ಪಾಲಿಗೆ ಇದು ಥ್ರಿಲ್ಲಿಂಗ್ ಪಂದ್ಯ ಎನಿಸದು. ಆದಾಗ್ಯೂ ಭಾರತ ತಂಡಕ್ಕೆ ಇದು ಕೊನೇ ಪಂದ್ಯವಾಗಿರುವ ಕಾರಣ ಸೆಮಿಫೈನಲ್ಗೇರಲು ನಿರ್ಣಾಯಕ ಪಂದ್ಯ ಎನಿಸಿಕೊಂಡರೆ ಜಿದ್ದು ಗ್ಯಾರಂಟಿ.
ಉಳಿದಂತೆ ಪಾಕಿಸ್ತಾನ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಇಲ್ಲಿ ತಲಾ ಎರಡು ಪಂದ್ಯಗಳಲ್ಲಿ ಆಡಿದರೆ ಇಂಗ್ಲೆಂಡ್ ಒಂದು ಪಂದ್ಯದಲ್ಲಿ ಅಡಲಿದೆ. ಅಕ್ಟೋಬರ್ 20ರಂದು ಆಸ್ಟ್ರೇಲಿಯಾ ತಂಡದ ವಿರುದ್ದ ಪಾಕಿಸ್ತಾನ ತಂಡ ಆಡಲಿದೆ. ಅಕ್ಟೋಬರ್ 26ರಂದು ಇಂಗ್ಲೆಂಡ್ ತಂಡ ಕ್ವಾಲಿಫೈಯರ್ 2 ತಂಡದ ವಿರುದ್ಧದ ಪಂದ್ಯದಲ್ಲಿ ಭಾಗಿಯಾಗಲಿದೆ. ನವೆಂಬರ್ 4ರಂದು ಪಾಕಿಸ್ತಾನ ತಂಡ ನ್ಯೂಜಿಲ್ಯಾಂಡ್ ತಂಡವನ್ನು ಎದುರಿಸಲಿದ್ದರೆ ನವೆಂಬರ್ 9ರಂದು ನ್ಯೂಜಿಲ್ಯಾಂಡ್ ತಂಡ ಕ್ಯಾಲಿಫೈಯರ್ 2 ತಂಡವನ್ನು ಎದುರಿಸಲಿದೆ. ನವೆಂಬರ್ 11ರಂದು ಭಾರತ ಮತ್ತು ಕ್ವಾಲಿಫೈಯರ್ 1ರ ನಡುವೆ ಪಂದ್ಯ ಆಯೋಜನೆಗೊಂಡಿದೆ.
ಬೆಂಗಳೂರಿನ ಪಂದ್ಯಗಳ ವಿವರ ಇಂತಿದೆ
- ಪಾಕಿಸ್ತಾನ ಆಸ್ಟ್ರೇಲಿಯಾ: ಅಕ್ಟೋಬರ್ 20
- ಇಂಗ್ಲೆಂಡ್ ಕ್ವಾಲಿಫೈಯರ್ 1, ಅಕ್ಟೋಬರ್ 26
- ನ್ಯೂಜಿಲ್ಯಾಂಡ್ ಪಾಕಿಸ್ತಾನ 2: ನವೆಂಬರ್ 4
- ನ್ಯೂಜಿಲ್ಯಾಂಡ್ ಕ್ವಾಲಿಫೈಯರ್ 2: ನವೆಂಬರ್ 9
- ಭಾರತ ಕ್ವಾಲಿಫೈಯರ್ 1: ನವೆಂಬರ್ 11