ಧರ್ಮಶಾಲ: ಸತತ ನಾಲ್ಕು ಪಂದ್ಯಗಳನ್ನು ಗೆದ್ದು ಅಜೇಯ ಓಟ ಕಾಯ್ದುಕೊಂಡಿರುವ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು(India vs New Zealand) ಭಾನುವಾರದ ವಿಶ್ವಕಪ್ ಲೀಗ್(ICC Cricket World Cup 2023) ಪಂದ್ಯದಲ್ಲಿ ಕಾದಾಟ ನಡೆಸಲಿದೆ. ಆದರೆ ಇದಕ್ಕೂ ಮುನ್ನ ಸ್ವಾರಸ್ಯಕರ ವಿಚಾರವೊಂದಿದೆ. ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ವಿಶ್ವಕಪ್ ಟೂರ್ನಿಯಲ್ಲಿ ಕೊನೆಯ ಬಾರಿ ಗೆಲುವು ಸಾಧಿಸಿದಾಗ ರೋಹಿತ್ ಶರ್ಮ(Rohit Sharma) ಮತ್ತು ವಿರಾಟ್ ಕೊಹ್ಲಿ(Virat Kohli) ಶಾಲಾ ವಿದ್ಯಾರ್ಥಿಗಳಾಗಿದ್ದರು. ಆಗ ಅವರಿಗೆ ಎಷ್ಟು ವಯಸ್ಸಾಗಿತ್ತು ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ಇಲ್ಲಿದೆ ಉತ್ತರ.
ಕೊಹ್ಲಿಗೆ 14, ರೋಹಿತ್ಗೆ 16 ವಯಸ್ಸು
ಭಾರತ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಬಾರಿ ವಿಶ್ವಕಪ್ ಟೂರ್ನಿಯಲ್ಲಿ ಗೆಲುವು ಸಾಧಿಸಿತ್ತು. 2003ರಲ್ಲಿ. ಸೌರವ್ ಗಂಗೂಲಿ ನಾಯಕತ್ವದಲ್ಲಿ ಕಣಕ್ಕಿಳಿದಿದ್ದ ಭಾರತ 7 ವಿಕೆಟ್ಗಳ ಗೆಲುವು ಸಾಧಿಸಿತ್ತು. 4 ವಿಕೆಟ್ ಕಿತ್ತ ಜಹೀರ್ ಖಾನ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಈ ಪಂದ್ಯದ ಬಳಿಕ ಭಾರತ ಕಿವೀಸ್ ವಿರುದ್ಧ ಆಡಿದ ಎಲ್ಲ ವಿಶ್ವಕಪ್ ಟೂರ್ನಿಗಳಲ್ಲಿಯೂ ಸೋಲು ಕಂಡಿದೆ.
ಭಾರತ 2003ರ ವಿಶ್ವಕಪ್ನಲ್ಲಿ(ICC Cricket World Cup 2003) ಕಿವೀಸ್ ವಿರುದ್ಧ ಗೆದ್ದಾಗ ಇಂದು ಭಾರತ ತಂಡದಲ್ಲಿರುವ ನಾಯಕ ರೋಹಿತ್ ಶರ್ಮ 16 ವರ್ಷದವರಾಗಿದ್ದರು. ವಿರಾಟ್ ಕೊಹ್ಲಿಗೆ 15 ವರ್ಷವಾಗಿತ್ತು. ಇಬ್ಬರು ಕೂಡ ಶಾಲಾ ವಿದ್ಯಾರ್ಥಿಗಳಾಗಿದ್ದರು. 20 ವರ್ಷಗಳಲ್ಲಿ ಆಡಿದ ಎಲ್ಲ ಮಹತ್ವದ ಐಸಿಸಿ ಟೂರ್ನಿಗಳಲ್ಲಿ ಕಿವೀಸ್ ವಿರುದ್ಧ ಸೋಲು ಕಂಡಿರುವ ಭಾರತಕ್ಕೆ ಈ ಪಂದ್ಯದಲ್ಲಿ ಉಭಯ ಆಟಗಾರರು ಗೆಲುವು ತಂದು ಕೊಟ್ಟು ಸೋಲಿನ ದಾಖಲೆಯನ್ನು ಮುರಿಯುವಲ್ಲಿ ಪ್ರಮುಖ ಪಾತ್ರವಹಿಸಲಿದ್ದಾರಾ ಎಂದು ನೋಡಬೇಕಿದೆ.
ಕೊಹ್ಲಿ ಅವರು ನಾಯಕನಾಗಿ ವಿಶ್ವಕಪ್ನಲ್ಲಿ ಆಡಿದ್ದರೂ ಕಿವೀಸ್ ವಿರುದ್ಧ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಟಿ20, ಏಕದಿನ ಮತ್ತು ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಕೊಹ್ಲಿ ಸಾರಥ್ಯದಲ್ಲಿ ಭಾರತ ತಂಡ ಮಂಡಿಯೂರಿತ್ತು. ರೋಹಿತ್ ಅವರು ನಾಯಕನಾಗಿ ಕಿವೀಸ್ ವಿರುದ್ಧ ವಿಶ್ವಕಪ್ನಲ್ಲಿ ಮೊದಲ ಬಾರಿ ಕಣಕ್ಕಿಳಿಯುತ್ತಿದ್ದಾರೆ. ಇವರ ನಾಯಕತ್ವದಲ್ಲಾದರೂ ಭಾರತ ಸೋಲಿನ ಕೊಂಡಿಯನ್ನು ಕಡಿದುಕೊಳ್ಳಲಿದೆಯಾ ಎನ್ನುವುದಕ್ಕೆ ಭಾನನುವಾರ ಹಿಮಾಲಯದ ತಪ್ಪಲಿನಲ್ಲಿರುವ ಧರ್ಮಶಾದಲ್ಲಿ ಉತ್ತರ ಸಿಗಲಿದೆ.
ಇದನ್ನೂ ಓದಿ IND vs NZ: ನ್ಯೂಜಿಲ್ಯಾಂಡ್ ಪಂದ್ಯಕ್ಕೆ ಟೀಮ್ ಇಂಡಿಯಾದಲ್ಲಿ 2 ಬದಲಾವಣೆ
ವಿಶ್ವಕಪ್ ಮುಖಾಮುಖಿ
ಇತ್ತಂಡಗಳು ವಿಶ್ವಕಪ್ ಟೂರ್ನಿಯಲ್ಲಿ ಒಟ್ಟು 9 ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಭಾರತ ಗೆದ್ದಿದ್ದು ಕೇವಲ ಮೂರು ಪಂದ್ಯಗಳು ಉಳಿದ 5 ಪಂದ್ಯಗಳಲ್ಲಿ ಕಿವೀಸ್ ಗೆದ್ದು ಬೀಗಿದೆ. 2019 ವಿಶ್ವಕಪ್ನಲ್ಲಿ ಲೀಗ್ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಆದರೆ ಸೆಮಿಫೈನಲ್ನಲ್ಲಿ ಭಾರತ ಸೋಲು ಕಂಡಿತ್ತು. ಇದಾದ ಬಳಿಕ ಟೆಸ್ಟ್ ವಿಶ್ವಕಪ್ ಫೈನಲ್ನಲ್ಲಿಯೂ ಭಾರತ ಕಿವೀಸ್ ವಿರುದ್ಧ ಮಂಡಿಯೂರಿತ್ತು. 2016ರ ಟಿ20 ವಿಶ್ವಕಪ್ನಲ್ಲಿಯೂ ಭಾರತ ಸೋಲು ಕಂಡಿತ್ತು. ಒಟ್ಟಾರೆ ಭಾರತ 2007ರ ಬಳಿಕ ಆಡಿದ ಎಲ್ಲ ಐಸಿಸಿ ಮಹತ್ವದ ಟೂರ್ನಿಯಲ್ಲೂ ಸೋಲು ಕಂಡಿದೆ.
ಕಳೆದ ಬಾರಿ ಅಂದರೆ 2019ರ ವಿಶ್ವಕಪ್ನ ಸೆಮಿಫೈನಲ್ನಲ್ಲಿ ಭಾರತ ಇನ್ನೇನು ಗೆಲ್ಲಲಿದೆ ಎನ್ನುವಷ್ಟರಲ್ಲಿ ಧೋನಿ ಅವರನ್ನು ಗಪ್ಟಿಲ್ ರನೌಟ್ ಮಾಡಿ ಭಾರತದ ವಿಶ್ವಕಪ್ ಕನಸನ್ನು ಭಗ್ನಗೊಳಿಸಿದ್ದರು. ಈ ಸೋಲಿಗೆ ಭಾರತ ಭಾನುವಾರ ಸೇಡು ತೀರಿಸಿಕೊಳ್ಳಬೇಕಿದೆ.