Site icon Vistara News

Virat Kohli : ಒಲಿಂಪಿಕ್ಸ್​ಗೆ ಕ್ರಿಕೆಟ್​ ಸೇರ್ಪಡೆಯಾಗಲು ಕೊಹ್ಲಿಯೇ ಕಾರಣವಂತೆ

virat kohli

ನವದೆಹಲಿ: ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ ನಂತರ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್​ಗೆ ಕ್ರಿಕೆಟ್ ಸೇರ್ಪಡೆಗೊಂಡಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸೋಮವಾರ ಅಧಿಕೃತವಾಗಿ ಕ್ರಿಕೆಟ್​ ಅನ್ನು ಅನುಮೋದಿಸಿದೆ. ಪುರುಷರ ಮತ್ತು ಮಹಿಳಾ ಟಿ 20 ಪಂದ್ಯಗಳನ್ನು ಒಳಗೊಂಡಿರುವ ಕ್ರಿಕೆಟ್​​ ಸೇರ್ಪಡೆಯು ಇತಿಹಾಸ ಎನಿಸಿಕೊಳ್ಳಲಿದೆ. 1900 ರ ನಂತರ ಕ್ರಿಕೆಟ್​​ ಮೊದಲ ಬಾರಿ ಒಲಿಂಪಿಕ್ಸ್​ನಲ್ಲಿ ಪ್ರದರ್ಶನಗೊಳ್ಳಲಿದೆ.

ಲಾಸ್​ ಏಂಜಲೀಸ್ ಒಲಿಂಪಿಕ್ಸ್​ ಆಯೋಜಕ ಸಮಿತಿ ಅಧ್ಯಕ್ಷ ನಿಕೊಲೊ ಕ್ಯಾಂಪ್ರಿಯಾನಿ ಯುನೈಟೆಡ್ ಸ್ಟೇಟ್ಸ್​​ನಲ್ಲಿ ಕ್ರಿಕೆಟ್​​ನ ಜನಪ್ರಿಯತೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮುಂದಿನ ವರ್ಷ ಯುಎಸ್ಎ ಮತ್ತು ವೆಸ್ಟ್ ಇಂಡೀಸ್​​ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮತ್ತು ಮೇಜರ್ ಲೀಗ್ ಕ್ರಿಕೆಟ್​ನ ಉದ್ಘಾಟನಾ ಋತುವು ಈ ಮಹತ್ವದ ನಿರ್ಧಾರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲಾಗಿದೆ. ಜತೆಗೆ ಮುಂಬಯಿ ಇಂಡಿಯನ್ಸ್​ ತಂಡದ ಮಾಲಕಿ ಹಾಗೂ ಐಒಸಿ ಸದಸ್ಯರಾಗಿರುವ ನೀತಾ ಅಂಬಾನಿಯೂ ಅದಕ್ಕಾಗಿ ಶ್ರಮಿಸಿದ್ದಾರೆ. ಆದರೆ, ಇವೆಲ್ಲದಕ್ಕಿಂತ ಹೆಚ್ಚಾಗಿ ಟೀಮ್​ ಇಂಡಿಯಾದ ಮಾಜಿ ನಾಯಕ ವಿರಾಟ್​ ಕೊಹ್ಲಿಯೂ (Virat Kohli) ಜನಪ್ರಿಯತೆಯೂ ಎಂದು ಹೇಳಲಾಗುತ್ತಿದೆ.

ಕೊಹ್ಲಿ ಕ್ರಿಕೆಟ್​​ನ ಜಾಗತಿಕ ರಾಯಭಾರಿಯಾಗಿದ್ದಾರೆ. ಮೇ ತಿಂಗಳಲ್ಲಿ ಇನ್​ಸ್ಟಾಗ್ರಾಮ್​ನಲ್ಲಿ 25 ಕೋಟಿ ಫಾಲೋವರ್ಸ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ಸ್ಟಾಗ್ರಾಮ್​​ನಲ್ಲಿ ಫಾಲೋವರ್ಸ್ ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ (58 ಕೋಟಿ ) ಮತ್ತು ಲಿಯೋನೆಲ್ ಮೆಸ್ಸಿ (46 ಕೋಟಿ) ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ವ್ಯಾಪ್ತಿ ಮತ್ತು ಸ್ಟಾರ್​ಡಮ್​ ಪ್ರಪಂಚದಾದ್ಯಂತ ಹರಡಿದೆ. ನಿಕೊಲೊ ಕ್ಯಾಂಪ್ರಿಯಾನಿ ಕೂಡ ಕೊಹ್ಲಿಯ ಬಗ್ಗೆ ತಿಳಿದುಕೊಂಡಿದ್ದಾರೆ.

ಈ ಸುದ್ದಿಗಳನ್ನೂ ಓದಿ:
Pakistan Cricket Team : ಮೈದಾನದಲ್ಲೇ ನಮಾಜ್ ಮಾಡಿದ ರಿಜ್ವಾನ್ ಮೇಲೆ ಬಿತ್ತು ಕೇಸು
Los Angeles Olympics 2028 : ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದ್ದಕ್ಕೆ ನೀತಾ ಅಂಬಾನಿ ಸಂತಸ
ಕ್ರೀಡೆ ಮೇಲೆ ಯುದ್ಧದ ನೆರಳು: ವಿಂಬಲ್‌ಡನ್‌ ಟೂರ್ನಿಯಿಂದ ರಷ್ಯಾ ಆಟಗಾರರು ಬ್ಯಾನ್‌ !

ಡಿಜಿಟಲ್ ವೇದಿಕೆ ಮೂಲಕ ಕ್ರೀಡೆಗಳು ಹೊಸ ಸಮುದಾಯಕ್ಕೆ ಪರಿಚಯವಾಗುತ್ತದೆ. ಕ್ರಿಕೆಟ್​ಗೂ ಅಂಥದ್ದೊಂದು ವೇದಿಕೆ ಲಭಿಸಿದೆ. ಅಂತೆಯೇ ಭಾರತದಲ್ಲಿ ನನ್ನ ಸ್ನೇಹಿತ ವಿರಾಟ್ ಇದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ 25 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿರುವ ವಿಶ್ವದ ಮೂರನೇ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಅಥ್ಲೀಟ್ ಅವರು. ಇದು ಲೆಬ್ರಾನ್ ಜೇಮ್ಸ್, ಟಾಮ್ ಬ್ರಾಡಿ ಮತ್ತು ಟೈಗರ್ ವುಡ್ಸ್ ಅವರಿಗಿಂತಲೂ ಹೆಚ್ಚು . ಇದು ಕೂಡ ಎಲ್ಎ 28ರಲ್ಲಿ ಕ್ರಿಕೆಟ್​ ಸೇರ್ಪಡೆಗೆ ಕಾರಣ ಎಂದು ಕ್ಯಾಂಪ್ರಿಯಾನಿ ಹೇಳಿದ್ದಾರೆ.

ಒಲಿಂಪಿಕ್ಸ್​ನಲ್ಲಿ ಕೊಹ್ಲಿ ಇರುವುದಿಲ್ಲ

ಕೊಹ್ಲಿಯ ಜನಪ್ರಿಯತೆಯ ಕಾರಣಕ್ಕೆ ಕ್ರಿಕೆಟ್​ ಒಲಿಂಪಿಕ್ಸ್ ಪಟ್ಟಿಗೆ ಸೇರ್ಪಡೆಗೊಂಡರೂ ಐದು ವರ್ಷಗಳ ಬಳಿಕ ಕ್ರಿಕೆಟ್ ಒಲಿಂಪಿಕ್ಸ್​ಗೆ ಮರಳುವಾಗ ಕೊಹ್ಲಿ ಕಾಣಿಸಿಕೊಳ್ಳುವುದಿಲ್ಲ. ಈಗಾಗಲೇ ಭಾರತದಿಂದ ಟಿ20 ಪಂದ್ಯಗಳಿಂದ ದೂರ ಉಳಿದಿರುವ ಕೊಹ್ಲಿ, 2028 ರ ಲಾಸ್ ಏಂಜಲೀಸ್ ಕ್ರೀಡಾಕೂಟದ ವೇಳೆಗೆ 39 ಮತ್ತು 40 ರ ಸಮೀಪಕ್ಕೆ ಬರಲಿದ್ದಾರೆ . ಅವರು ನಿವೃತ್ತರಾಗಿರಬಹುದು ಅಥವಾ ವೃತ್ತಿಜೀವನದ ಕೊನೆಯ ಹಂತದಲ್ಲಿರಬಹುದು.

118 ವರ್ಷಗಳ ಬಳಿಕ ಕ್ರಿಕೆಟ್​

1900ರ ಒಲಿಂಪಿಕ್ಸ್​ನಲ್ಲಿ ಕೊನೆಯ ಬಾರಿಗೆ ಕ್ರಿಕೆಟ್ ನಡೆದಾಗ , ಗ್ರೇಟ್ ಬ್ರಿಟನ್ ಒಂದು ಪಂದ್ಯದ ಮುಖಾಮುಖಿಯಲ್ಲಿ ಫ್ರಾನ್ಸ್ ಅನ್ನು ಸೋಲಿಸುವ ಮೂಲಕ ಚಿನ್ನದ ಪದಕವನ್ನು ಗೆದ್ದಿತ್ತು. 2022 ರ ಬರ್ಮಿಂಗ್ಹ್ಯಾಮ್ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಶಂಸನೀಯ ಪ್ರದರ್ಶನವನ್ನು ನೀಡಿತ್ತು. ಆಸ್ಟ್ರೇಲಿಯಾ ವಿರುದ್ಧ ನಿಕಟ ಹೋರಾಟದ ಫೈನಲ್ ನಂತರ ಬೆಳ್ಳಿ ಪದಕವನ್ನು ಗಳಿಸಿತ್ತು. ಕೆಲವು ದಿನಗಳ ಹಿಂದೆ, ಮಹಿಳಾ ಮತ್ತು ಪುರುಷರ ಕ್ರಿಕೆಟ್ ತಂಡಗಳು ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಅದ್ಭುತ ಯಶಸ್ಸನ್ನು ಸಾಧಿಸಿದವು. ಕ್ರಿಕೆಟ್ ಹೊರತುಪಡಿಸಿ, ಬೇಸ್ ಬಾಲ್ / ಸಾಫ್ಟ್ ಬಾಲ್, ಫ್ಲ್ಯಾಗ್ ಫುಟ್ಬಾಲ್, ಲ್ಯಾಕ್ರೋಸ್ ಮತ್ತು ಸ್ಕ್ವಾಷ್ ಒಲಿಂಪಿಕ್ಸ್​​ಗೆ ಸೇರ್ಪಡೆಗೊಂಡಿದ್ದವು.

Exit mobile version