ಟೋಕಿಯೊ : ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್‌ಷಿಪ್ (BWF World Championship) ಟೂರ್ನಿಯ ಪುರುಷರ ಸಿಂಗಲ್ಸ್‌ನ ೧೬ನೇ ಸುತ್ತಿನ ಪಂದ್ಯದಲ್ಲಿ ಭಾರತದವರೇ ಆದ ಎಚ್. ಎಸ್ ಪ್ರಯಣ್ ವಿರುದ್ಧ ಗೆಲುವು ಸಾಧಿಸಿದ ಎಚ್.ಎಸ್ ಪ್ರಣಯ್ ಎಂಟರ ಸುತ್ತಿಗೆ ಪ್ರವೇಶ ಪಡೆದುಕೊಂಡಿದ್ದಾರೆ. ಜಿದ್ದಾಜಿದ್ದಿನ ಹೋರಾಟದಲ್ಲಿ ೧೭-೨೧, ೨೧-೧೬ ಮತ್ತು ೨೧-೧೭ ಗೇಮ್‌ಗಳಿಂದ ಪ್ರಣಯ್ ಜಯ ಸಾಧಿಸಿದರು. ಇದೇ ವೇಳೆ ಭಾರತದ ಪುರುಷರ ಡಬಲ್ಸ್ ಜೋಡಿ ಧ್ರುವ್ ಕಪಿಲ್ ಹಾಗೂ ಎಮ್. ಆರ್ ಅರ್ಜುನ್ ಉತ್ತಮ ಪ್ರದರ್ಶನ ಮುಂದುವರಿಸಿದ್ದು, ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.
೧ ಗಂಟೆ ೧೫ ನಿಮಿಷಗಳ ಕಾಲ ನಡೆದ ಹೋರಾಟದಲ್ಲಿ ಭಾರತದ ಇಬ್ಬರೂ ಆಟಗಾರರು ಗೆಲುವಿಗಾಗಿ ಭರ್ಜರಿ ಹೋರಾಟ ನಡೆಸಿದರು. ಆದರೆ, ಗೆಲುವು ಪ್ರಣಯ್ ಪಾಲಾಯಿತು. ಈ ಇಬ್ಬರು ಆಟಗಾರರಿಗೆ ಇದು ನಾಲ್ಕನೇ ಹಣಾಹಣಿಯಾಗಿದ್ದು, ೨-೨ ಮುಖಾಮುಖಿ ಸಾಧನೆ ಮಾಡಿದಂತಾಗಿದೆ. ಪ್ರಣಯ್ ಅವರು ಮುಂದಿನ ಸುತ್ತಿನಲ್ಲಿ ಚೀನಾದ ಜಾಹೊ ಜುನ್ ಪೆಂಗ್ ವಿರುದ್ಧ ಆಡಬೇಕಾಗಿದೆ.
ಡಬಲ್ಸ್‌ನಲ್ಲಿ ಭಾರತದ ಮತ್ತೊಂದು ಜೋಡಿ ಸಾತ್ವಿಕ್‌ಸಾಯಿರಾಜ್ ರಾಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಕ್ವಾರ್ಟರ್‌ಫೈನಲ್ಸ್‌ಗೇರಿದೆ. ಈ ಜೋಡಿ ತಮ್ಮ ೧೬ನೇ ಸುತ್ತಿನ ಸ್ಪರ್ಧೆಯಲ್ಲಿ ಡೆನ್ಮಾರ್ಕ್‌ನ ಜೆಪ್ಪಾ ಬೆ ಮತ್ತು ಲಸ್ಸೆ ಮೊಲ್ಹೆಡೆ ವಿರುದ್ಧ ೨೧-೧೨, ೨೧-೧೦ ಗೇಮ್‌ಗಳಿಂದ ಗೆಲುವು ಕಂಡರು.
ಸೈನಾಗೆ ಸೋಲು
ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಮತ್ತೆ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ, ಮಹಿಳೆಯರ ಸಿಂಗಲ್ಸ್ ೧೬ ಸುತ್ತಿನಲ್ಲಿ ಸೋತು ನಿರ್ಗಮಿಸಿದ್ದಾರೆ. ಅವರು ಬುಸನಾನ್ ಒಂಗ್‌ಬಮ್ರುಂಗ್‌ಪಾನ್ ವಿರುದ್ಧ ೧೭-೨೧, ೨೧-೧೬, ೧೩-೨೧ ಗೇಮ್‌ಗಳಿಂದ ಸೋಲು ಕಂಡರು.
ಇದನ್ನೂ ಓದಿ | BWF World Championships | ಎರಡನೇ ಶ್ರೇಯಾಂಕದ ಆಟಗಾರನನ್ನು ಮಣಿಸಿದ ಭಾರತದ ಷಟ್ಲರ್