ತಿರುವನಂತಪುರ : ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಎಚ್ ಎಸ್ ಪ್ರಣಯ್ ಅವರು ತಮ್ಮ ದೀರ್ಘ ಕಾಲದ ಗೆಳತಿ ಶ್ವೇತಾ ರಾಶೆಲ್ ಥಾಮಸ್ ಅವರನ್ನು ಬುಧವಾರ ವಿವಾಹವಾಗಿದ್ದಾರೆ. ಬೆಂಗಳೂರಿನಲ್ಲಿ ಫ್ಯಾಶನ್ ಕಂಟೆಂಟ್ ಕ್ರಿಯೇಟರ್ ಆಗಿ ಕೆಲಸ ಮಾಡುತ್ತಿರುವ ಶ್ವೇತಾ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಚಿತ್ರಗಳನ್ನು ಅವರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.
ಭಿನ್ನ ಧರ್ಮದವರಾಗಿರುವ ಅವರು ವಿವಾಹ ನೋಂದಣಾಧಿಕಾರಿ ಕಚೇರಿಯಲ್ಲಿ ಸರಳ ವಿವಾಹ ಆಗಿದ್ದಾರೆ. ಕೇರಳ ಮೂಲದವರಾಗಿರುವ ಶ್ವೇತಾ ಅವರು ಕುವೈಟ್‌ನಲ್ಲಿ ಜನಿಸಿದ್ದರೂ, ವೃತ್ತಿಗಾಗಿ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ತಿರುವನಂತಪುರದವರಾಗಿರುವ ಹಸೀನಾ ಸುನೀಲ್ ಪ್ರಣಯ್ ಅವರು ಹೈದರಾಬಾದ್‌ನ ಪುಲ್ಲೆಲ ಗೋಪಿಚಂದ್ ಬ್ಯಾಡ್ಮಿಂಟನ್ ಅಕಾಡೆಮಿ ಮೂಲಕ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಪ್ರವೇಶ ಪಡೆದುಕೊಂಡವರು.
ಮಂಗಳವಾರವಷ್ಟೇ ಪ್ರಣಯ್ ಅವರು ಡಬ್ಲ್ಯುಟಿಎ rank ಪಟ್ಟಿಯಲ್ಲಿ ಎರಡು ಸ್ಥಾನ ಬಡ್ತಿ ಪಡೆದುಕೊಂಡು ೧೬ನೇ ಶ್ರೇಯಾಂಕಕ್ಕೆ ತಲುಪಿದ್ದರು. ಅಂತೆಯೇ ಅವರು ಕಳೆದ ಎರಡು ಪ್ರತಿಷ್ಠಿತ ಟೂರ್ನಿಗಳಾದ ವಿಶ್ವ ಚಾಂಪಿಯನ್‌ಷಿಪ್ ಹಾಗೂ ಜಪಾನ್ ಓಪನ್ ೭೫೦ಯಲ್ಲಿ ಕ್ವಾರ್ಟರ್‌ಫೈನಲ್ಸ್‌ಗೇರಿದ್ದರು. ಅಲ್ಲದೆ, ೩೩ ಟೂರ್ನಮೆಂಟ್‌ಗಳಲ್ಲಿ ಪಾಲ್ಗೊಂಡು ೬೪,೩೦ ಅಂಕಗಳನ್ನು ಸಂಪಾದಿಸಿದ್ದಾರೆ.
ಇದನ್ನೂ ಓದಿ |BWF Ranking | ಎಚ್ ಎಸ್ ಪ್ರಣಯ್‌ಗೆ 16ನೇ ಸ್ಥಾನ