Site icon Vistara News

Asian Games : ಕಂಚಿನ ಪದಕ ಗೆದ್ದು 41 ವರ್ಷದ ಬಳಿಕ ದಾಖಲೆ ಬರೆದ ಷಟ್ಲರ್​ ಪ್ರಣಯ್​

HS Panoy

ಹ್ಯಾಂಗ್ಝೌ: ಹ್ಯಾಂಗ್ಝೌನಲ್ಲಿ ಶುಕ್ರವಾರ ನಡೆದ ಸೆಮಿಫೈನಲ್​​ನಲ್ಲಿ ಹಾಲಿ ಆಲ್ ಇಂಗ್ಲೆಂಡ್ ಚಾಂಪಿಯನ್ ಚೀನಾದ ಲಿ ಶಿ ಫೆಂಗ್ ವಿರುದ್ಧ ನೇರ ಗೇಮ್​ಗಳಿಂದ ಸೋತ ಎಚ್.ಎಸ್.ಪ್ರಣಯ್ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಅವರು 41 ವರ್ಷಗಳ ನಂತರ ಏಷ್ಯನ್ ಗೇಮ್ಸ್​ನ (Asian Games) ಪುರುಷರ ಸಿಂಗಲ್ಸ್​​ನಲ್ಲಿ ಭಾರತದ ಮೊದಲ ಪದಕ ತಂದುಕೊಟ್ಟಿದ್ದಾರೆ. ಬೆನ್ನುನೋವಿನಿಂದ ಬಳಲುತ್ತಿರುವ ವಿಶ್ವದ 7ನೇ ಶ್ರೇಯಾಂಕಿತ ಆಟಗಾರ 51 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ತವರಿನ ಫೇವರಿಟ್ ಹಾಗೂ ವಿಶ್ವದ 8ನೇ ಶ್ರೇಯಾಂಕಿತ ಲಿ ವಿರುದ್ಧ 16-21, 9-21 ಅಂತರದ ಸೋಲನುಭವಿಸಿದರು. 1982ರಲ್ಲಿ ನವದೆಹಲಿಯಲ್ಲಿ ನಡೆದ ಕೂಟದಲ್ಲಿ ಸೈಯದ್ ಮೋದಿ ಅವರು ಕಂಚಿನ ಪದಕ ಗೆದ್ದ ಬಳಿಕ ಪುರುಷರ ಸಿಂಗಲ್ಸ್ ನಲ್ಲಿ ಭಾರತಕ್ಕೆ ಲಭಿಸಿದ ಎರಡನೇ ಪದಕ ಇದಾಗಿದೆ.

ಪ್ರಣಯ್ ಕಳೆದ ವಾರ ಬೆಳ್ಳಿ ಪದಕ ಗೆದ್ದ ಭಾರತೀಯ ಪುರುಷರ ತಂಡದ ಭಾಗವಾಗಿದ್ದರು. ತಿರುವನಂತಪುರಂನ 31 ವರ್ಷದ ಆಟಗಾರ ಉತ್ತಮ ಆರಂಭವನ್ನು ಪಡೆದರು. ಆದರೆ ಪಂದ್ಯದ ಮಧ್ಯದಲ್ಲಿ ಸಾರ ಕಳೆದುಕೊಂಡರು. ಮುಖ್ಯವಾಗಿ ಅವರು ತಮ್ಮ ಮರಳುವಿಕೆಯಲ್ಲಿ ನಿಖರತೆ ಹುಡುಕುವಾಗ ಮಾಡಿದ ತಪ್ಪುಗಳಿಂದಾಗಿ ಹಿನ್ನಡೆ ಅನುಭವಿಸಿದರು.

ಪ್ರಣಯ್ ತಮ್ಮ ರ್ಯಾಲಿಗಳನ್ನು ಹೆಚ್ಚಿಸುವತ್ತ ಗಮನ ಹರಿಸಿದರು. ತಮ್ಮ ಡ್ರಾಪ್​​ ಶಾಟ್​ಗಳನ್ನು ಉತ್ತಮವಾಗಿ ಬಳಸಿಕೊಂಡು 3-1 ಮುನ್ನಡೆ ಸಾಧಿಸಿದರು. ಅವರು ತಮ್ಮ ಸ್ಮ್ಹಾಶ್​​ಗಳನ್ನು ಹೆಚ್ಚಾಗಿ ಬಳಸಲಿಲ್ಲ ಹಾಗೂ ಎದುರಾಳಿಯನ್ನು ಬೇಸ್ ಲೈನ್ ಕಳುಹಿಸಲು ಪ್ರಯತ್ನಿಸಿದರು. ಲೀ ವೇಗವನ್ನು ಹೆಚ್ಚಿಸಲು ಪ್ರಯತ್ನಿಸಿದರು ಮತ್ತು 5-5 ರಿಂದ ಸಮಬಲ ಸಾಧಿಸಿದರು. ನಂತರ ಭಾರತೀಯರು ತಮ್ಮ ಸ್ಮಾಶ್ ಬಳಸಿ ಒಂದು ಪಾಯಿಂಟ್ ಪಡೆದರು ಮತ್ತು ಶೀಘ್ರದಲ್ಲೇ 8-5 ಕ್ಕೆ ಮುಂದುವರಿದರು.

ಇದನ್ನೂ ಓದಿ : Asian Games : ಕ್ರಿಕೆಟ್​ನಲ್ಲಿ ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ ಭರ್ಜರಿ ವಿಜಯ; ಫೈನಲ್​ಗೆ ಎಂಟ್ರಿ

ಆದರೆ ನಿಖರತೆಯನ್ನು ಪಡೆಯಲು ಯತ್ನಿಸಿದ ಪ್ರಣರ್​ ಚೀನೀ ಆಟಗಾರನಿಗೆ ಚೇತರಿಸಿಕೊಳ್ಳಲು ಅನುವು ಮಾಡಿಕೊಟ್ಟರು. ಲೀ 10-10ರ ಸಮಬಲ ಸಾಧಿಸಿದರು. ಪ್ರಣಯ್ ತಪ್ಪೆಸಗಿದ ಕಾರಣ ಲೀ 15-14ರಿಂದ ಮುನ್ನಡೆ ಸಾಧಿಸಿದರು. ಚೀನೀ ಆಟಗಾರ 17-14 ಕ್ಕೆ ಏರಿ ಅಂತಿಮವಾಗಿ ಗೇಮ್ ತಮ್ಮದಾಗಿಸಿಕೊಂಡರು.

ಎರಡನೇ ಗೇಮ್ ಕೂಡ ಆರಂಭದಲ್ಲಿ ಜಿದ್ದಾಜಿದ್ದಿನಿಂದ ಕೂಡಿತ್ತು. ಇವರಿಬ್ಬರು 4-4 ರವರೆಗೆ ಸಮಬಲದ ಹೋರಾಟ ನಡೆಸಿದರು. ಆದರೆ ಲಿ ತಮ್ಮ ಆಕ್ರಮಣಕಾರಿ ಆಟ ಬಳಸಿಕೊಂಡು ರ್ಯಾಲಿಗಳಲ್ಲಿ ಪ್ರಾಬಲ್ಯ ಸಾಧಿಸಲು ಪ್ರಾರಂಭಿಸಿದರು. ವಿರಾಮದ ವೇಳೆಗೆ ಲೀ ಐದು ಅಂಕಗಳ ಮುನ್ನಡೆ ಸಾಧಿಸಿದರು.

ಪ್ರಣಯ್ ತನ್ನ ತಪ್ಪುಗಳನ್ನು ಕಡಿಮೆ ಮಅಡಲು ಕಷ್ಟಪಡುತ್ತಿದ್ದರಿಂದ, ಲೀ 14-6 ಕ್ಕೆ ಏರುತ್ತಿದ್ದಂತೆ ಅಂಕಗಳು ವೇಗವಾಗಿ ಬರುತ್ತಲೇ ಇದ್ದವು. ಕೊನೆಯಲ್ಲಿ ನಿರಾಯಸ ಗೆಲುವು ಕಂಡರು.

Exit mobile version