ನವ ದೆಹಲಿ : ಭಾರತ ಬಾಕ್ಸಿಂಗ್ ಕ್ಷೇತ್ರ ದಿನದಿಂದ ದಿನಕ್ಕೆ ಪ್ರಗತಿಯ ಹಾದಿಯಲ್ಲಿದೆ. ಅಂತೆಯೇ ಅಂತಾರಾಷ್ಟ್ರೀಯ ಶ್ರೇಯಾಂಕದಲ್ಲೂ (Boxing Ranking) ಭರ್ಜರಿ ಮುನ್ನಡೆ ಪಡೆದುಕೊಂಡಿದ್ದು, ಇದೀಗ ಮೂರನೇ ಸ್ಥಾನದಲ್ಲಿದೆ. ಭಾರತದ ಬಾಕ್ಸರ್ಗಳ ಅದ್ಭುತ ಪ್ರದರ್ಶನ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಕ್ಸಿಂಗ್ ಸಂಸ್ಥೆ (ಐಬಿಎ) ಬಿಡುಗಡೆ ಮಾಡಿರುವ ಶ್ರೇಯಾಂಕ ಪಟ್ಟಿಯಲ್ಲಿ ಒಟ್ಟು 36300 ಅಂಕಗಳನ್ನು ಗಳಿಸಿದೆ. ಈ ಮೂಲಕ ಕಜಕಸ್ತಾನ (48100 ಅಂಕ) ಹಾಗೂ ಉಜ್ಬೇಕಿಸ್ತಾನದ (37,600 ಅಂಕ) ಹಿಂದಿನ ಸ್ಥಾನದಲ್ಲಿದೆ.
ಭಾರತ ಬಾಕ್ಸಿಂಗ್ ಕ್ಷೇತ್ರವೀಗ ಈ ವಿಭಾಗದ ದೈತ್ಯ ಶಕ್ತಿ ಎನಿಸಿಕೊಡಿದ್ದ ಅಮೆರಿಕ (ನಾಲ್ಕನೇ ಸ್ಥಾನ) ಹಾಗೂ ಕ್ಯೂಬಾ (9ನೇ ಸ್ಥಾನ) ದೇಶವನ್ನು ಹಿಂದಿಕ್ಕಿದೆ. ಭಾರತ ಇತ್ತೀಚಿನ ದಿನಗಳಲ್ಲಿ ಬಾಕ್ಸಿಂಗ್ನಲ್ಲಿ ದೊಡ್ಡ ಮಟ್ಟದ ಪ್ರಗತಿ ಸಾಧಿಸುತ್ತಿದೆ. ವಿಶ್ವ ಚಾಂಪಿಯನ್ಷಿಪ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಗರಿಷ್ಠ ಪದಕಗಳನ್ನು ಗೆದ್ದಿವೆ.
ಇದನ್ನೂ ಓದಿ : Boxing | ಯೂತ್ ಬಾಕ್ಸಿಂಗ್ ಚಾಂಪಿಯನ್ಶಿಪ್: ಚಿನ್ನಕ್ಕೆ ಪಂಚ್ ನೀಡಿದ ವಿಶ್ವನಾಥ್, ದೇವಿಕಾ, ವಂಶಜ್
2008ರ ಬಳಿಕ ಭಾರತದ ಬಾಕ್ಸರ್ಗಳು ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಒಟ್ಟಾರೆ 140 ಪದಕಗಳನ್ನು ಗೆದ್ದಿದೆ. ಈ ಕಾರಣದಿಂದ ವರ್ಷದಿಂದ ವರ್ಷಕ್ಕೆ ಶ್ರೇಯಾಂಕ ಹೆಚ್ಚಳ ಮಾಡಿಕೊಂಡು ಇದೀಗ ಮೂರನೇ ಸ್ಥಾನಕ್ಕೇರಿದೆ.