ಮೆಲ್ಬೋರ್ನ್ : ಏಷ್ಯಾ ಕಪ್ ಪಂದ್ಯದ ವೇಳೆ ಭಾರತ ತಂಡದ (Team India) ನಾಯಕ ರೋಹಿತ್ ಶರ್ಮ ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಪರಸ್ಪರ ಕೈ ಕುಲುಕಿ ಮಾತನಾಡಿದ್ದ ವಿಡಿಯೊ ವೈರಲ್ ಅಗಿತ್ತು. ವೈರಿ ರಾಷ್ಟ್ರಗಳ ಕ್ರಿಕೆಟ್ ತಂಡದ ನಾಯಕರು ಏನು ಮಾತನಾಡಿರಬಹುದು ಎಂಬ ಕುತೂಹಲ ಸೃಷ್ಟಿಯಾಗಿತ್ತು. ಆ ಪ್ರಶ್ನೆಗೆ ಉತ್ತರ ಹೇಳಿದ್ದಾರೆ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮ.
ಏಷ್ಯಾ ಕಪ್ ವೇಳೆ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಜತೆ ಮಾತನಾಡಿದ್ದೆ. ಆದರೆ ಕ್ರಿಕೆಟ್ ಬಗ್ಗೆ ಮಾತನಾಡಿರಲಿಲ್ಲ. ಕುಟುಂಬದ ಬಗ್ಗೆ ವಿಚಾರಿಸಿದ್ದೆ. ಪ್ರಮುಖವಾಗಿ ಹೊಸ ಕಾರು ಏನಾದರೂ ಖರೀದಿಸಿದ್ದೀರಾ ಎಂದು ಕೇಳಿದ್ದೆ,” ಎಂಬುದಾಗಿ ಅವರು ರೋಹಿತ್ ಶರ್ಮ ಮೆಲ್ಬೋರ್ನ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದಾರೆ.
“ಪಾಕಿಸ್ತಾನ ವಿರುದ್ಧದ ಪಂದ್ಯದ ಪ್ರಾಮುಖ್ಯತೆ ಬಗ್ಗೆ ನಮಗೆ ಅರಿವಿದೆ. ಆದರೆ ನಾವು ಪರಸ್ಪರ ಎದುರಾದಾಗ ಅದನ್ನೇ ಮಾತನಾಡಿಕೊಂಡು ಕೂರುವುದಿಲ್ಲ. ಪರಸ್ಪರ ಆರೋಗ್ಯ ವಿಚಾರಿಸುತ್ತೇವೆ. ಅಂತೆಯೇ ಅವರ ಮನೆಯಲ್ಲಿ ಇರುವ ಕಾರುಗಳ ಬಗ್ಗೆ ವಿಚಾರಿಸುತ್ತೇವೆ,” ಎಂಬುದಾಗಿ ಅವರು ಹೇಳಿದರು.
ಇದೇ ವೇಳೆ ಅವರು ಭಾರತ ತಂಡದ ಗಾಯದ ಸಮಸ್ಯೆ ಕುರಿತೂ ಮಾತನಾಡಿದರು. ಗಾಯದ ಸಮಸ್ಯೆಯಿಂದಾಗಿ ಭಾರತ ತಂಡದ ಪ್ರದರ್ಶನಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ. ಗಾಯದ ಸಮಸ್ಯೆ ಬಗ್ಗೆ ಯೋಚನೆ ಮಾಡಿಕೊಂಡು ಕುಳಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಪಾಕಿಸ್ತಾನ ವಿರುದ್ಧ ಆಡುವ ಕಾರಣ ಸಂಪೂರ್ಣ ಸಜ್ಜಾಗಿಬೇಕಾಗುತ್ತದೆ.” ಎಂಬುದಾಗಿಯೂ ಅವರು ಹೇಳಿದ್ದಾರೆ.
ಸೂರ್ಯಕುಮಾರ್ ಅವರ ಬ್ಯಾಟಿಂಗ್ ವೈಖರಿಯನ್ನೂ ನಾಯಕ ರೋಹಿತ್ ಶರ್ಮ ಇದೇ ವೇಳೆ ಮೆಚ್ಚಿದರು. ಅತಿ ವೇಗದಲ್ಲಿ ಟಿ೨೦ ಮಾದರಿಯಲ್ಲಿ ಸಾವಿರ ರನ್‌ಗಳ ಮೈಲುಗಲ್ಲು ದಾಟಿದ ಅವರು ತಂಡದ ಗೆಲುವಿನ ಪ್ರಧಾನ ಅಸ್ತ್ರವಾಗಲಿದ್ದಾರೆ ಎಂಬುದಾಗಿ ನುಡಿದರು.
ಇದನ್ನೂ ಓದಿ | T20 World Cup | ವಿಶ್ವ ಕಪ್‌ಗೆ ಆಡುವ 11ರ ಬಳಗ ಸಿದ್ಧಗೊಂಡಿದೆ ಎಂದ ನಾಯಕ ರೋಹಿತ್ ಶರ್ಮ