ನವ ದೆಹಲಿ: ಪಾಕಿಸ್ತಾನ ಕ್ರಿಕೆಟರ್ ಶೋಯೆಬ್ ಮಲಿಕ್ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಗಡಿ ಮೀರಿದ ದಾಂಪತ್ಯ ಆಗಾಗ ಸುದ್ದಿಯಲ್ಲಿರುತ್ತದೆ. ಪತಿ ಮತ್ತು ಪತ್ನಿ ಇಬ್ಬರಿಗೂ ತಮ್ಮ ಸಂಬಂಧದ ಜತೆಗೆ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧದ ಕುರಿತು ಆಗಾಗ ಪ್ರಶ್ನೆಗಳು ಎದುರಾಗುತ್ತಿರುತ್ತವೆ. ಅಂತೆಯೇ ಶೋಯೆಬ್ ಮಲಿಕ್ಗೂ ಇತ್ತೀಚಿನ ಸಂದರ್ಶನವೊಂದರಲ್ಲಿ ಇಂಡೋ-ಪಾಕ್ ಕ್ರಿಕೆಟ್ ಸಂಬಂಧದ ಕುರಿತು ಪ್ರಶ್ನೆ ಎದುರಾಗಿತ್ತು. ಅದಕ್ಕೆ ಅವರು ನೀಡಿದ ಉತ್ತರ ಸಂದರ್ಶನಕಾರನಿಗೆ ನಗು ತರಿಸಿತ್ತು. ಅಲ್ಲದೆ, ಸಾನಿಯಾ- ಮಲಿಕ್ ಜೋಡಿಯ ದಾಂಪತ್ಯದ ಬಗ್ಗೆಯೂ ಪ್ರಶ್ನೆಗಳು ಏಳುವಂತೆ ಮಾಡಿದೆ.
ಜಿಯೋ ಸ್ಪೋರ್ಡ್ಸ್ ಸಂದರ್ಶನದಲ್ಲಿ ಸಂದರ್ಶನಕಾರ, ”ನೀವಿಬ್ಬರು ಗಡಿ ಮೀರಿ ಮದುವೆಯಾಗಿದ್ದೀರಿ. ಆದರೆ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಸಂಬಂಧ ಚೆನ್ನಾಗಿಲ್ಲ. ಸಾನಿಯಾ ಮಿರ್ಜಾ ಈ ಸಂಬಂಧ ಸರಿಪಡಲು ನೆರವಾಗುವರೇ,” ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿದ ಮಲಿಕ್, ಜತೆಯಾಗಿ ಇರುವುದಕ್ಕೆ ನಮಗೆ ಬೇಕಾದಷ್ಟು ಸಮಯ ಸಿಗುವುದಿಲ್ಲ. ಇನ್ನು ಭಾರತ ಪಾಕಿಸ್ತಾನವನ್ನು ಜೋಡಿಸುವ ಕೆಲಸ ಮಾಡುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳು ಮತ್ತೆ ಆಡಿದರೆ ಎರಡೂ ತಂಡಗಳಿಗೆ ಲಾಭವಾಗುತ್ತದೆ. ಅಂಥ ದಿನಗಳು ಯಾವಾಗ ಬರಬಹುದು ಎಂಬುದಾಗಿಯೂ ಸಂದರ್ಶನಕಾರ ಮಾಡಿದ ಪ್ರಶ್ನೆಗೆ ಉತ್ತರಿಸಿದ ಶೋಯೆಬ್, ಕ್ರಿಕೆಟ್ ಮಾತ್ರ ಕ್ರೀಡೆಯಲ್ಲ. ಅವಕಾಶ ಸಿಕ್ಕಾಗ ನಾವು ಎರಡೂ ದೇಶಗಳೀಗೆ ಹೋಗಿ ಬರಬಹುದು. ನೆರೆಹೊರೆಯ ದೇಶಗಳಿಗೆ ಪರಸ್ಪರ ಹೋಗಿ ಬರುವ ಅವಕಾಶಗಳು ಇದ್ದೇ ಇರುತ್ತವೆ. ಭಾರತ ಮತ್ತು ಪಾಕಿಸ್ತಾನ ನೆರೆಯ ದೇಶಗಳು. ಈ ಎರಡೂ ದೇಶಗಳ ಕ್ರೀಡಾ ಸಂಬಂಧ ಸುಧಾರಣೆಯಾಗಲಿ ಎಂದು ನಾನು ಪ್ರಾರ್ಥಿಸುತ್ತೇನೆ ಎಂದು ಅವರು ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಐಸಿಸಿಐ ದೊಡ್ಡ ಆಟ. ಭಾರತ ಮತ್ತು ಪಾಕಿಸ್ತಾನದ ಅಭಿಮಾನಿಗಳು ಮಾತ್ರವಲ್ಲದೆ, ವಿಶ್ವದ ಕ್ರಿಕೆಟ್ ಪ್ರೇಮಿಗಳೆಲ್ಲರೂ ಈ ಪಂದ್ಯವನ್ನು ವೀಕ್ಷಿಸುತ್ತಾರೆ. ಇದರಿಂದ ಕ್ರಿಕೆಟ್ಗೆ ಒಳ್ಳೆಯದಾಗುತ್ತದೆ ಎಂದು ಮಲಿಕ್ ಅಭಿಪ್ರಾಯಪಟ್ಟರು.
ಇದನ್ನೂ ಓದಿ : Sania Mirza: ಸಾನಿಯಾ ಮಿರ್ಜಾ ಭಾರತದ ಚಾಂಪಿಯನ್; ಪ್ರಧಾನಿ ಮೋದಿ ಪ್ರಶಂಸೆ
ಮುಂಬರುವ ಏಷ್ಯಾ ಕಪ್ನಲ್ಲಿ ಪಾಲ್ಗೊಳ್ಳಲು ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹೇಳಿದೆ. ಹೀಗಾಗಿ ಹೈಬ್ರಿಡ್ ಮಾದರಿಯ ಮೊರೆ ಹೋಗಲಾಗಿದೆ. ಭಾರತ ತಂಡ ಒಂದನ್ನು ಬಿಟ್ಟು ಮಿಕ್ಕ ತಂಡ ಪಾಕಿಸ್ತಾನಕ್ಕೆ ಹೋಗುತ್ತವೆ. ಭಾರತದ ಪಂದ್ಯಗಳು ತಟಸ್ಥ ತಾಣದಲ್ಲಿ ನಡೆಸಲಾಗುತ್ತದೆ. ಆದರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಅಧ್ಯಕ್ಷ ನಜಮ್ ಸೇಥಿ ಕೂಡ ವಿಶ್ವ ಕಪ್ ಟೂರ್ನಿಯನ್ನೂ ಇದೇ ರೀತಿ ನಡೆಸುವಂತೆ ಹೇಳಿದೆ. ಪಾಕಿಸ್ತಾನ ತಂಡ ಭಾರತಕ್ಕೆ ಹೋಗುವುದಿಲ್ಲ. ತಟಸ್ಥ ತಾಣದಲ್ಲಿ ಅವರಿಗೆ ಪಂದ್ಯವನ್ನು ಏರ್ಪಡಿಸಬೇಕು ಎಂದು ಕೋರಿದೆ.