ದುಬೈ : ಶಹೀನ್ ಅಫ್ರಿದಿ ಪಾಕಿಸ್ತಾನ ತಂಡದಲ್ಲಿ ಇಲ್ಲದಿರುವುದರಿಂದ ಭಾರತಕ್ಕೆ ಹೆಚ್ಚು ಲಾಭವಾಗಲಿದೆ ಎಂದ ಜನಾಭಿಪ್ರಾಯವನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ನಿರಾಕರಿಸಿದ್ದಾರೆ. ಒಬ್ಬ ಆಟಗಾರನಿಂದ ಯಾವುದೇ ತಂಡ ಗೆಲ್ಲುತ್ತದೆ ಎಂಬುದು ಸುಳ್ಳು. ಎಲ್ಲರ ಪ್ರಯತ್ನದಿಂದ ಮಾತ್ರ ಜಯ ಗಳಿಸಲು ಸಾಧ್ಯ ಎಂದ ಹೇಳಿದ್ದಾರೆ.
ಶಹೀನ್ ಶಾ ಅಫ್ರಿದಿ ಎಡಗಾಲು ನೋವಿನ ಸಮಸ್ಯೆಗೆ ಒಳಗಾಗಿರುವ ಕಾರಣ ಏಷ್ಯಾ ಕಪ್‌ನಲ್ಲಿ ಆಡುತ್ತಿಲ್ಲ. ಇದರಿಂದಾಗಿ ಭಾರತ ತಂಡಕ್ಕೆ ಅನುಕೂಲವಾಗಲಿದೆ ಎಂದು ಬಿಂಬಿಸಲಾಗುತ್ತದೆ. ಕಳೆದ ವರ್ಷ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಅವರು ಭಾರತದ ಬ್ಯಾಟಿಂಗ್ ವಿಭಾಗವನ್ನು ಅಸ್ಥಿರಗೊಳಿಸಿರುವುದೇ ಇದಕ್ಕೆ ಉತ್ತಮ ಉದಾಹರಣೆ. ಆದರೆ ಅದೊಂದೇ ಪ್ರದರ್ಶನವನ್ನು ಮುಂದಿಟ್ಟುಕೊಂಡು ಭಾರತಕ್ಕೆ ಲಾಭವಾಗಲಿದೆ ಎಂದು ಹೇಳುವುದು ತಪ್ಪು ಎಂಬುದು ಸೌರವ್ ಗಂಗೂಲಿಯವರ ಅಭಿಪ್ರಾಯ.
“ಒಬ್ಬರಿಂದಲೇ ತಂಡವೊಂದು ಗೆಲ್ಲುತ್ತದೆ ಎಂದು ಹೇಳುವುದು ಸರಿಯಲ್ಲ. ಅದೊಂದು ಟೀಮ್ ವರ್ಕ್. ನಮ್ಮ ತಂಡದಲ್ಲೂ ಜಸ್‌ಪ್ರಿತ್ ಬುಮ್ರಾ ಅವರಿಲ್ಲ. ಹಾಗೆಂದು ತಂಡ ದುರ್ಬಲವಾಗಿದೆ ಎಂದಲ್ಲ. ಪ್ರತಿಯೊಬ್ಬರ ಕೊಡುಗೆಯೂ ಅದಕ್ಕೆ ಅಗತ್ಯ,” ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ಹಾರ್ದಿಕ್ ಪಾಂಡ್ಯ ತಂಡ ಸೇರಿರುವ ಕಾರಣ ಭಾರತ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ,” ಎಂದು ಗಂಗೂಲಿ ಹೇಳಿದರು. ಕಳೆದ ವರ್ಷ ಪಾಂಡ್ಯ ಬೌಲಿಂಗ್ ಮಾಡಲು ಫಿಟ್ ಆಗಿರಲಿಲ್ಲ. ಆದರೆ, ಈ ಬಾರಿ ಅವರು ಫಿಟ್ ಎನಿಸಿಕೊಂಡಿರುವುದರಿಂದ ಟೀಮ್ ಇಂಡಿಯಾಗೆ ಅನುಕೂಲವಾಗಲಿದೆ,” ಎಂದು ಹೇಳಿದರು.
ಟಿ20ಯಲ್ಲಿ ಯಾವ ತಂಡವೂ ಪೇವರಿಟ್ ಅಲ್ಲ
ಟಿ೨೦ ಮಾದರಿಯಲ್ಲಿ ಯಾವುದೇ ತಂಡವನ್ನು ಬಲಿಷ್ಠ ಅಥವಾ ಕನಿಷ್ಠ ಎಂದು ಹೇಳುವುದಕ್ಕೆ ಸಾಧ್ಯವಿಲ್ಲ. ಕಳೆದ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟನ್ಸ್ ತಂಡ ಚಾಂಪಿಯನ್ ಆಗಿದೆ. ಆ ತಂಡ ಚಾಂಪಿಯನ್ ಅಗುತ್ತದೆ ಎಂದು ಯಾರೂ ಭಾವಿಸಿರಲಿಲ್ಲ ಎಂಬುದಾಗಿ ಅವರು ಹೇಳಿದರು.
ಇದನ್ನೂ ಓದಿ | Virat kohli | ಕೊಹ್ಲಿ ಭಾರತಕ್ಕಾಗಿ ಮಾತ್ರವಲ್ಲ, ತಮಗಾಗಿಯೂ ರನ್ ಗಳಿಸಲೇಬೇಕು ಎಂದ ದಾದಾ