Site icon Vistara News

Smriti Mandhaona | ದೇಶಕ್ಕಾಗಿ ಆಡುವೆ, ಲೀಗ್‌ ಸದ್ಯಕ್ಕೆ ಬೇಡ ಎಂದ ಭಾರತದ ಮಹಿಳಾ ಕ್ರಿಕೆಟರ್‌

smriti mandhana

ಮುಂಬಯಿ : ಬಿಸಿಸಿಐ ಜತೆ ಒಪ್ಪಂದ ಮಾಡಿಕೊಂಡಿರುವ ಮಹಿಳಾ ಕ್ರಿಕೆಟರ್‌ಗಳಿಗೆ ವಿದೇಶದ ಕ್ರಿಕೆಟ್‌ ಲೀಗ್‌ಗಳಲ್ಲಿ ಆಡಲು ಯಾವುದೇ ನಿರ್ಬಂಧಗಳು ಇಲ್ಲ. ಹೀಗಾಗಿ ಭಾರತದ ಕೆಲವು ಸ್ಟಾರ್ ಆಟಗಾರರು ಆಸ್ಟ್ರೇಲಿಯಾದ ಮಹಿಳೆಯರ ಬಿಗ್‌ ಬ್ಯಾಷ್‌ ಲೀಗ್‌ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಆದರೆ, ಭಾರತ ಮಹಿಳೆಯರ ತಂಡ ಉಪನಾಯಕಿ ಹಾಗೂ ಸ್ಟಾರ್‌ ಬ್ಯಾಟರ್‌ ಸ್ಮೃತಿ ಮಂಧಾನಾ (Smriti Mandhana) ಬಿಗ್‌ ಬ್ಯಾಷ್‌ ಲೀಗ್‌ನಿಂದ ಅವಕಾಶ ಒದಗಿ ಬಂದಿದ್ದರೂ ಅದನ್ನು ತಿರಸ್ಕರಿಸಿದ್ದಾರೆ. ಭಾರತ ತಂಡಕ್ಕಾಗಿ ಹೆಚ್ಚೆಚ್ಚು ಕ್ರಿಕೆಟ್‌ ಪಂದ್ಯಗಳನ್ನು ಆಡುವೆ ಲೀಗ್ ಸದ್ಯಕ್ಕೆ ಬೇಡ ಎಂದು ಹೇಳಿದ್ದಾರೆ.

oಸ್ಮೃತಿ ಮಂಧಾನಾ ಅವರು ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ಕ್ರಿಕೆಟ್‌ ಆಡುತ್ತಿದ್ದಾರೆ. ನ್ಯೂಜಿಲೆಂಡ್‌ ವಿರುದ್ಧ ದ್ವಿಪಕ್ಷೀಯ ಸರಣಿ, ಐಸಿಸಿ ಮಹಿಳೆಯರ ವಿಶ್ವ ಕಪ್‌, ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಪಾಲ್ಗೊಂಡಿದ್ದಾರೆ. ಇದೀಗ ಅವರು ಇಂಗ್ಲೆಂಡ್‌ ಪ್ರವಾಸದಲ್ಲಿದ್ದು, ಮೂರು ಟಿ೨೦ ಹಾಗೂ ಅಷ್ಟೇ ಸಂಖ್ಯೆಯ ಏಕ ದಿನ ಪಂದ್ಯಗಳಲ್ಲಿ ಆಡಲಿದ್ದಾರೆ. ಏತನ್ಮಧ್ಯೆ, ಮಹಿಳೆಯರ ಬಿಗ್‌ಬ್ಯಾಷ್‌ ಲೀಗ್ ಅಕ್ಟೋಬರ್‌ ೧೩ರಂದು ಆರಂಭಗೊಳ್ಳಲಿದೆ. ಈ ಟೂರ್ನಿಯಲ್ಲಿ ಆಡಲು ಅವರಿಗೆ ಅವಕಾಶ ಒದಗಿ ಬಂದಿದ್ದು, ಅದನ್ನವರು ತಿರಸ್ಕರಿಸಿದ್ದಾರೆ.

ಕಾರಣವೇನು?

ಲೀಗ್‌ಗಳಲ್ಲಿ ಆಡುವಾಗ ಗಾಯದ ಸಮಸ್ಯೆ ಉಂಟಾಗುವ ಸಾಧ್ಯತೆಗಳಿವೆ. ಅದರಿಂದ ಭಾರತ ತಂಡದ ಪರ ಆಡುವ ಅವಕಾಶ ನಷ್ಟವಾಗಬಹುದು. ಕೋವಿಡ್‌-೧೯ ಲಾಕ್‌ಡೌನ್‌ ಕಾರಣಕ್ಕೆ ಸಾಕಷ್ಟು ಪಂದ್ಯಗಳನ್ನು ಆಡುವ ಅವಕಾಶದಿಂದ ವಂಚಿತರಾಗಿದ್ದೇವೆ. ಹೀಗಾಗಿ ಭಾರತ ತಂಡದ ಪರವಾಗಿ ಆಡಬೇಕಾಗಿದೆ,” ಎಂದು ಅವರು ಹೇಳಿದ್ದಾರೆ.

“ನಾನು ಹೆಚ್ಚೆಚ್ಚು ಕ್ರಿಕೆಟ್‌ಗಳನ್ನು ಆಡಲು ಬಯಸುತ್ತೇನೆ. ಅಂತೆಯೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಶೇ.೧೦೦ರಷ್ಟು ಬದ್ಧಳಾಗುವುದಕ್ಕೆ ಬಯಸಿದ್ದೇನೆ. ಹೀಗಾಗಿ ಲೀಗ್‌ ಆಡುವ ವೇಳೆ ಉಂಟಾಗುವ ಅಪಾಯಗಳನ್ನು ಗಮನದಲ್ಲಿ ಇಟ್ಟುಕೊಂಡು ಭಾರತ ತಂಡದ ಪರವಾಗಿ ಆಡುವುದೇ ನನ್ನ ಗುರಿಯಾಗಿದೆ,” ಅವರು ಹೇಳಿದ್ದಾರೆ.

Exit mobile version