Site icon Vistara News

Babar Azam: ಭಾರತದಿಂದ ಅಪಾರವಾದ ಪ್ರೀತಿ ಸಿಕ್ಕಿದೆ ಎಂದ ಪಾಕ್‌ ನಾಯಕ ಬಾಬರ್‌ ಅಜಂ

Pakistan Captain Babar Azam

ಕೋಲ್ಕೊತಾ: ತಮ್ಮ ವಿರುದ್ಧ ಮತ್ತು ತಂಡದ ವಿರುದ್ಧ ಟೀಕೆ ವ್ಯಕ್ತಪಡಿಸಿದ್ದವರಿಗೆ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(Babar Azam) ಇದೇ ಮೊದಲ ಬಾರಿಗೆ ತಿರುಗೇಟು ನೀಡಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಪಂದ್ಯಕ್ಕೂ ಮುನ್ನ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಟಿ.ವಿ. ಚರ್ಚೆಯಲ್ಲಿ ಕುಳಿತು ಸಲಹೆ ಕೊಡುವುದು ಸುಲಭ’ ಎಂದು ತಕ್ಕ ಉತ್ತರ ನೀಡಿದ್ದಾರೆ. ಇದೇ ವೇಳೆ ಭಾರತದ ಆತಿಥ್ಯವನ್ನು ಕೊಂಡಾಡಿದ್ದಾರೆ.

ಭಾರತದಲ್ಲಿ ಉತ್ತಮ ಬೆಂಬಲ ಸಿಕ್ಕಿದೆ

“ನಾವು ಮೊದಲ ಬಾರಿಗೆ ಭಾರತಕ್ಕೆ ಬಂದಿದ್ದೇವೆ. ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಹಾಗೂ ತಂಡಕ್ಕೆ ಭಾರತದಿಂದ ಅಪಾರವಾದ ಪ್ರೀತಿ ಮತ್ತು ಬೆಂಬಲ ಸಿಕ್ಕಿದೆ. ನಾವು ಆಡಿದ ಎಲ್ಲ ಪಂದ್ಯದ ವೇಳೆಯೂ ನಮಗೆ ಭಾರತೀಯರು ಚಿಯರ್​ ಅಪ್ ಮಾಡಿ ಬೆಂಬಲಿಸಿದ್ದಾರೆ. ಯಾವುದೇ ಬೇಧಭಾವ ತೋರದೆ ನಮಗೆ ಪ್ರೀತಿ ತೋರಿದ್ದಾರೆ. ಅವರ ಪ್ರೀತಿಗೆ ಸದಾ ಚಿರಋಣಿ” ಎಂದು ಬಾಬರ್‌ ಹೇಳಿದರು.

287 ರನ್‌ ಅಂತರದ ಗೆಲುವು ಅಗತ್ಯ

ಪಾಕಿಸ್ತಾನ ತಂಡ ಸೆಮಿಫೈನಲ್​ ಪ್ರವೇಶ ಪಡೆಯಬೇಕಿದ್ದರೆ ಇಂದು ನಡೆಯುವ ಇಂಗ್ಲೆಂಡ್​ ವಿರುದ್ಧದ ಪಂದ್ಯದಲ್ಲಿ 287 ರನ್‌ಗಳ ಅಂತರದ ಗೆಲುವು ಅತ್ಯಗತ್ಯ. ಇದು ಅಸಾಧ್ಯವಾದ ಕಾರಣ ಪವಾಡ ಸಂಭವಿಸಿದರೆ ಮಾತ್ರ ಪಾಕ್​ ಸೆಮಿ ಫೈನಲ್​ ಪ್ರವೇಶ ಪಡೆಯಬಹುದು. ಬಹುತೇಕ ಟೂರ್ನಿಯಿಂದ ಹೊರ ಬಿದ್ದಿರುವ ಪಾಕ್​ ತಂಡದ ಮತ್ತು ನಾಯಕನ ವಿರುದ್ಧ ಈ ಬಾರಿಯ ವಿಶ್ವಕಪ್​ ಟೂರ್ನಿ ಆರಂಭದಿಂದಲೂ ಪಾಕ್​ ಮಾಜಿ ಆಟಗಾರರು ಟೀಕೆಯನ್ನು ವ್ಯಕ್ತಪಡಿಸುತ್ತಲೇ ಬಂದಿದ್ದರು. ಆದರೆ ನಾಯಕ ಬಾಬರ್​ ಇದುವರೆಗೂ ತುಟಿ ಬಿಚ್ಚಿರಲಿಲ್ಲ. ಇದೀಗ ಸರಿಯಾಗಿಯೇ ತಿರುಗೇಟು ನೀಡಿದ್ದಾರೆ.

‘ವಿಶ್ವಕಪ್‌ನಲ್ಲಿ ನನ್ನ ಮೇಲಿಟ್ಟ ನಿರೀಕ್ಷೆಗೆ ತಕ್ಕಂತೆ ನಾನು ಆಡಿಲ್ಲ. ಹೀಗಾಗಿ ನಾನು ಒತ್ತಡದಲ್ಲಿದ್ದೇನೆಂದು ಹೇಳುತ್ತಾರೆ. ಆದರೆ ಹಾಗೇನೂ ಇಲ್ಲ. ನಮ್ಮ ತಂಡ ಉತ್ತಮ ಪ್ರದರ್ಶನವನ್ನೇ ತೋರಿದೆ. ಸೋಲು ಮತ್ತು ಗೆಲುವು ಆಟದ ಒಂದು ಭಾಗ. ಟಿವಿಯಲ್ಲಿ ಕುಳಿತು ಮಾತನಾಡಿದಷ್ಟು ಸಲಭವಲ್ಲ. ಈ ಹಿಂದೆ ನೀವು ಕೂಡ ಆಡಿದ್ದೀರಿ ಆಗ ನೀವು ಸೋಲು ಕಂಡಿಲ್ಲವೇ? ಎಂದು ಬಾಬರ್​ ಸರಿಯಾಗಿ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ ICC World Cup: ಸಚಿನ್ ವಿಶ್ವಕಪ್​​ ದಾಖಲೆ ಮುರಿಯಲಿದ್ದಾರಾ ಡಿ ಕಾಕ್?

“ನನ್ನ ಫೋನ್ ನಂಬರ್ ಎಲ್ಲರ ಬಳಿಯೂ ಇದೆ. ಹೀಗಾಗಿ ಯಾರಾದರೂ ಸಲಹೆ ನೀಡಲು ಬಯಸಿದರೆ, ನೇರವಾಗಿ ಕರೆ ಮಾಡಿ” ಎಂದು ಬಾಬರ್​ ಪರೋಕ್ಷವಾಗಿ ಪಾಕ್​ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರಿಗೆ ಟಾಂಗ್​ ನೀಡಿದ್ದಾರೆ.

ಬಾಬರ್​ ಚಾಟ್​ ಲೀಸ್ಟ್‌ ಸೋರಿಕೆ ಮಾಡಿದ್ದ ಝಾಕಾ ಅಶ್ರಫ್

ಪಾಕ್‌ ಕ್ರಿಕೆಟ್‌ ಮಂಡಳಿಯ ಅಧ್ಯಕ್ಷ ಝಾಕಾ ಅಶ್ರಫ್ ಅವರು ಕೆಳ ದಿನಗಳ ಹಿಂದೆ ನಾಯಕ ಬಾಬರ್‌ ಅಜಂ ಅವರ ವಾಟ್ಸಪ್‌ ಚಾಟ್‌ ಸೋರಿಕೆ ಮಾಡಿದ್ದರು. ಅವರು ಬಹಿರಂಗಪಡಿಸಿರುವ ಬಾಬರ್​ ಮತ್ತು ಪಿಸಿಬಿ ಸಿಒಒ ಸಲ್ಮಾನ್ ನಸೀರ್ ನಡುವಿನ ಚಾಟ್​ನಲ್ಲಿ ‘ಬಾಬರ್ ನೀವು ಫೋನ್ ಮಾಡಿದರೂ, ಮೆಸೇಜ್ ಮಾಡಿದರೂ ಅಶ್ರಫ್ ಅವರು ನಿಮಗೆ ಸ್ಪಂದಿಸುತ್ತಿಲ್ಲ ಎಂದು ಟಿವಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ವರದಿಯಾಗಿದೆ. ಇದು ನಿಜವೇ? ಎಂದು ನಾಸಿರ್ ಅವರು ಬಾಬರ್​ಗೆ ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ಬಾಬರ್, ‘ಸಲ್ಮಾನ್ ಭಾಯ್, ನಾನು ಅಶ್ರಫ್ ಅವರಿಗೆ ಕರೆ ಮಾಡಿಲ್ಲ’ ಎಂದು ಉತ್ತರಿಸಿದ್ದಾರೆ ಎನ್ನಲಾಗಿರುವ ಚಾಟ್​ ವೈರಲ್​ ಆಗಿತ್ತು.ಸ

Exit mobile version