Site icon Vistara News

Gautam Gambhir : ನನ್ನ ಮತ್ತು ಕೊಹ್ಲಿಯ ನಡುವೆ ಗೌರವಯುತ ಸಂಬಂಧವಿದೆ; ಗೌತಮ್ ಗಂಭೀರ್​

Gautam Gambhir

ಬೆಂಗಳೂರು: ಟೀಮ್ ಇಂಡಿಯಾದ ನೂತನ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ (Gautam Gambhir) ನೇಮಕವಾದ ದಿನದಿಂದಲೂ ವಿರಾಟ್ ಕೊಹ್ಲಿ ಮತ್ತು ಅವರ ನಡುವಿನ ಸಂಬಂಧ ಚರ್ಚೆಯ ವಿಚಾರವಾಗಿದೆ. ಕೆಕೆಆರ್ ನಾಯಕನಾಗಿದ್ದಾಗ ಗಂಭೀರ್​, ಕೊಹ್ಲಿ ಅವರೊಂದಿಗೆ ತೀವ್ರ ವಾಗ್ವಾದ ನಡೆಸಿದ್ದರು. , ಐಪಿಎಲ್ 2023 ರಲ್ಲಿ ಇಬ್ಬರು ಕ್ರಿಕೆಟಿಗರ ನಡುವಿನ ಜಗಳ ಉಂಟಾಗಿತ್ತು. ಹೀಗಾಗಿ ಕೊಹ್ಲಿಗೆ ಕೋಚ್ ಆದ ಮೇಲೆ ಅವರಿಬ್ಬರ ಜಗಳ ಮುಂದುವರಿಯಬಹುದು ಎಂದು ಹೇಳಲಾಗಿತ್ತು

ಐಪಿಎಲ್ 2024 ರಲ್ಲಿಯೇ ಸನ್ನಿವೇಶವು ಬದಲಾಗಿತ್ತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕೆಕೆಆರ್ ಮತ್ತು ಆರ್​ಸಿಬಿ ನಡುವಿನ ಪಂದ್ಯದ ವೇಳೆ ಕೊಹ್ಲಿ ಮತ್ತು ಗಂಭೀರ್ ಇಬ್ಬರೂ ಪರಸ್ಪರ ತಬ್ಬಿಕೊಂಡಿದ್ದರು. ಆದಾಗ್ಯೂ ಭಾರತೀಯ ಕ್ರಿಕೆಟ್​​ನ ಸುಧಾರಣೆಗಾಗಿ ಒಟ್ಟಾಗಿ ಕೆಲಸ ಮಾಡಬಹುದೇ ಎಂಬುದು ದೊಡ್ಡ ಪ್ರಶ್ನೆಯೇ ಆಗಿತ್ತು. ಸೋಮವಾರ ಶ್ರೀಲಂಕಾ ಪ್ರವಾಸಕ್ಕೆ ಹೊರಡುವ ಮೊದಲು ಪತ್ರಿಕಾಗೋಷ್ಠಿ ನಡೆಸಿದ ಗಂಭೀರ್​ ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹೇಳಿದ್ದಾರೆ.

ಇದನ್ನೂ ಓದಿ: Gautam Gambhir : ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ 2027ರ ವಿಶ್ವ ಕಪ್​ ತನಕ ಆಡುತ್ತಾರೆ ಎಂದ ಗಂಭೀರ್​

ಕೊಹ್ಲಿ ಅವರೊಂದಿಗಿನ ನನ್ನ ಸಂಬಂಧವು ಮಾಧ್ಯಮಗಳ ಟಿಆರ್​ಪಿಗಾಗಿ ಅಲ್ಲ ಎಂದು ಗಂಭೀರ್ ಸ್ಪಷ್ಟಪಡಿಸಿದ್ದಾರೆ. ನಾಣು ಕೊಹ್ಲಿಯೊಂದಿಗೆ ಅತ್ಯುತ್ತಮ ಸಂಬಂಧವನ್ನು ಹೊಂದಿದ್ದೇನೆ. ಭಾರತದ ಮಾಜಿ ನಾಯಕ ಸಂಪೂರ್ಣ ವೃತ್ತಿಪರ ಮತ್ತು ವಿಶ್ವ ದರ್ಜೆಯ ಕ್ರೀಡಾಪಟು. ಅವರು ತಂಡದ ಪ್ರಮುಖ ಭಾಗವಾಗಿರುವುದರಿಂದ ಉತ್ತಮ ನಿರೀಕ್ಷೆಯಿದೆ ಎಂದು ಅವರು ಹೇಳಿದರು.

ವಿರಾಟ್ ಕೊಹ್ಲಿ ಅವರೊಂದಿಗೆ ಯಾವ ರೀತಿಯ ಸಂಬಂಧವಿದೆ ಎಂಬುದು ಟಿಆರ್​ಪಿ ವಿಷಯವಲ್ಲ. ನಮ್ಮಬ್ಬರ ಸಂಬಂಧ ವಿಷಯ ಬಹಿರಂಗವೂ ಅಲ್ಲ. ಇದು ಇಬ್ಬರು ಪ್ರಬುದ್ಧ ವ್ಯಕ್ತಿಗಳ ನಡುವಿನ ಸಂಬಂಧ. ಮೈದಾನದಲ್ಲಿ, ನಾವು ಒಂದೇ ರೀತಿಯಾಗಿ ಇರಬೇಕು ಎಂದು ನನಗೆ ಖಾತ್ರಿಯಿದೆ. ನಾನು ಅವರೊಂದಿಗೆ ಉತ್ತಮ ಸಂಬಂಧವನ್ನು ಹಂಚಿಕೊಳ್ಳುತ್ತೇನೆ. ನಾನು ಅವರೊಂದಿಗೆ ಸಾಕಷ್ಟು ಚಾಟ್ ಮಾಡಿದ್ದೇನೆ. ಕೆಲವೊಮ್ಮೆ. ನಾವು ಸಂದೇಶಗಳನ್ನು ಹಂಚಿಕೊಂಡಿದ್ದೇವೆ. ನಾವಿಬ್ಬರು ಏನು ಚರ್ಚಿಸಿದ್ದೇವೆ ಎಂಬುದು ಮುಖ್ಯವಲ್ಲ” ಎಂದು ಗಂಭೀರ್ ಹೇಳಿದ್ದಾರೆ.

“ಏಕೆಂದರೆ ನಮಗೆ ಫಲಿತಾಂಶ ಬೇಕು. ಅವರು ಸಂಪೂರ್ಣ ವೃತ್ತಿಪರರು. ಅವರು ವಿಶ್ವ ದರ್ಜೆಯ ಆಟಗಾರ. ನಾವು ನಿಜವಾಗಿಯೂ ಒಟ್ಟಿಗೆ ಕೆಲಸ ಮಾಡಬಹುದು ಎಂದು ಆಶಿಸುತ್ತೇವೆ. ಒಟ್ಟಾಗಿ ದೇಶವನ್ನು ಹೆಮ್ಮೆಪಡುವಂತೆ ಮಾಡುವುದು ನಮ್ಮ ಕೆಲಸ. ನಾವು ಒಂದು ಶತಕೋಟಿ ಜನರನ್ನು ಪ್ರತಿನಿಧಿಸುತ್ತಿದ್ದೇವೆ ಎಂದು ಅವರು ಹೇಳಿದರು.

ಜುಲೈ 22 ರಂದು ಭಾರತ ತಂಡ ಶ್ರೀಲಂಕಾಕ್ಕೆ ಪ್ರಯಾಣ ಬೆಳೆಸಿದೆ. ಮೂರು ಪಂದ್ಯಗಳ ಟಿ 20 ಐ ಸರಣಿಯನ್ನು ಮೊದಲು ಆಡಲಿದೆ.

Exit mobile version