ನವದೆಹಲಿ: ಜೂನ್ 7ರಂದು ಲಂಡನ್ನ ಓವಲ್ನಲ್ಲಿ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ 2023ರ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) (WTC Final 2023) ಫೈನಲ್ ಪಂದ್ಯದಲ್ಲಿ ಗೆಲ್ಲಲು ಭಾರತಕ್ಕೆ ಹೆಚ್ಚಿನ ಅವಕಾಶವಿದೆ ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್ಸಿಬಿ ಸ್ಫೋಟಕ ಬ್ಯಾಟರ್ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡವು ತಮ್ಮ ಮೊದಲ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ ಫೈನಲ್ ಪಂದದಲ್ಲಿ ಆಡುತ್ತಿದೆ. ಉದ್ಘಾಟನಾ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಸೋತ ನಂತರ ಭಾರತ ತಂಡಕ್ಕೆ ಇದು ಎರಡನೇ ಫೈನಲ್ ಪಂದ್ಯವಾಗಿದೆ.
ಡಬ್ಲ್ಯುಟಿಸಿ ಫೈನಲ್ಗೆ ನೆಚ್ಚಿನ ಆಟಗಾರನನ್ನು ಆಯ್ಕೆ ಮಾಡುವುದು ತನಗೆ ಸಾಕಷ್ಟು ಕಷ್ಟ ಎಂದು ಡಿವಿಲಿಯರ್ಸ್ ಹೇಳಿದ್ದಾರೆ. ಭಾರತ ಮತ್ತು ಆಸ್ಟ್ರೇಲಿಯಾ ಎರಡೂ ತಂಡಗಳು ಇತ್ತೀಚಿನ ದಿನಗಳಲ್ಲಿ ದೀರ್ಘ ಅವಧಿಯ ಕ್ರಿಕೆಟ್ನಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ. ಆದರೆ ಭಾರತವು ಹಿಂದಿನ ಬಾರಿ ಆಸ್ಟ್ರೇಲಿಯಾಗೆ ಪ್ರವಾಸ ಬಂದಿದ್ದಾಗ ಪ್ರಬಲ ಇಂಗ್ಲೆಂಡ್ ತಂಡವನ್ನು ಸೋಲಿಸಿದ್ದರಿಂದ ಮತ್ತೆ ಗೆಲ್ಲುವ ಹೆಚ್ಚಿನ ಅವಕಾಶ ಹೊಂದಿದೆ ಎಂದು ಹೇಳಿದರು.
ಏಕೈಕ ಟೆಸ್ಟ್ ಪಂದ್ಯದ ಐದನೇ ದಿನದಂದು ಭಾರತ ತಂಡವು ಮೇಲುಗೈ ಸಾದಿಸಲಿದೆ ಎಂಬುದಾಗಿಯೂ ಲೆಜೆಂಡರಿ ವಿಕೆಟ್ಕೀಪರ್ ವಿಲಿಯರ್ಸ್ ಹೇಳಿದ್ದಾಋಎ. ಪಂದ್ಯದ ಕೊನೆಯ ಹಂತಗಳಲ್ಲಿ ಭಾರತೀಯ ಸ್ಪಿನ್ನರ್ಗಳು ನಿರ್ಣಾಯಕವಾಗುತ್ತಾರೆ ಎಂದು 39 ವರ್ಷದ ಆಟಗಾರ ಅಭಿಪ್ರಾಯಪಟ್ಟಿದ್ದಾರೆ.
“ಟೆಸ್ಟ್ ಪಂದ್ಯದ ಐದನೇ ದಿನದಂದು ಭಾರತವು ಅಗ್ರಸ್ಥಾನವನ್ನು ಪಡೆಯುತ್ತದೆ ಎಂದು ನಾನು ಭಾವಿಸುತ್ತೇನೆ. ಇದು ಎಲ್ಲಾ ರೀತಿಯಲ್ಲಿ ಭಾರತಕ್ಕೆ ಅನುಕೂಲಕರ ಎಂದುನಾನು ಭಾವಿಸುತ್ತೇನೆ. ಇದು ಬ್ಯಾಟಿಂಗ್ ಮಾಡಲು ಉತ್ತಮ ಪಿಚ್. ಆದರೆ ಟೆಸ್ಟ್ ಪಂದ್ಯದ ಕೊನೆಯ ಹಂತಗಳಲ್ಲಿ ಭಾರತೀಯ ಸ್ಪಿನ್ನರ್ಗಳು ಪ್ರಭಾವ ಬೀರುತ್ತಾರೆ ಎಂದು ನಾನು ಭಾವಿಸುತ್ತೇನೆ,” ಎಂದು ಮಾಜಿ ಮಾಜಿ ಆರ್ಸಿಬಿ ಆಟಗಾರ ಹೇಳಿದ್ದಾರೆ.
ಕೊಹ್ಲಿಯೇ ಸ್ಟಾರ್
ಪಂದ್ಯದಲ್ಲಿ ಪ್ರಭಾವ ಬೀರಬಹುದಾದ ಭಾರತೀಯ ಬ್ಯಾಟ್ಸ್ಮನ್ ಅನ್ನು ಆಯ್ಕೆ ಮಾಡುವಂತೆ ಕೇಳಿದಾಗ, ವಿಲಿಯರ್ಸ್ ವಿರಾಟ್ ಕೊಹ್ಲಿಯ ಹೆಸರು ಹೇಳಿದರು. ವಿರಾಟ್ ಎಲ್ಲೇ ಆಡಿದರೂ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಾರೆ ಎಂದು ಅವರು ಹೇಳಿದರು. ತಮ್ಮ ಆಪ್ತ ಸ್ನೇಹಿತ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ಸಹ ಆಟಗಾರ ಇಂಗ್ಲೆಂಡ್ನಲ್ಲಿ ಉತ್ತಮ ಪ್ರದರ್ಶನ ನೀಡುವುದನ್ನು ನಾನು ಎದುರು ನೋಡುತ್ತಿದ್ದೇನೆ ಎಂಬುದಾಗಿ ವಿಲಿಯರ್ಸ್ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಸೇರಿದಂತೆ ಎಲ್ಲ ಪಿಚ್ಗಳಲ್ಲಿ ಮಿಂಚಬಲ್ಲವರು ವಿರಾಟ್ ಕೊಹ್ಲಿ. ಅವರು ಕ್ರಿಕೆಟ್ ಆಟವನ್ನು ಆನಂದಿಸುವುದನ್ನು ನೋಡುವದೇ ಅದ್ಭುತ. ಅವರು ಮತ್ತೆ ಇಂಗ್ಲೆಂಡ್ನಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡುವುದರಲ್ಲಿ ಅನುಮಾನವೇ ಇಲ್ಲ ಎಂದ ಬಲಗೈ ಬ್ಯಾಟರ್ ಅಭಿಮಾನದಿಂದ ಹೇಳಿದರು.
ಇದನ್ನೂ ಓದಿ : WTC Final 2023: ಭಾರತ ತಂಡಕ್ಕೆ ಆಘಾತ; ಸ್ಟಾರ್ ಆಟಗಾರನಿಗೆ ಗಾಯ, ಫೈನಲ್ಗೆ ಅನುಮಾನ
ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ದೊಡ್ಡ ನಷ್ಟವಾಗಿದೆ ಎಂದೂ ಅವರು ಹೇಳಿದ್ದಾರೆ. ಆದರೆ ಏಕೈಕ್ ಟೆಸ್ಟ್ನಲ್ಲಿ ಭಾರತದ ಬೌಲಿಂಗ್ ದಾಳಿಯಲ್ಲಿ ಮೊಹಮ್ಮದ್ ಸಿರಾಜ್ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬುಮ್ರಾ ಅಲಭ್ಯತೆ ಭಾರತೀಯ ಬೌಲಿಂಗ್ ವಿಭಾಗಕ್ಕೆ ದೊಡ್ಡ ನಷ್ಟ. ಮೊಹಮ್ಮದ್ ಸಿರಾಜ್ ಕೊರತೆ ನಿಭಾಯಿಸಲಿದ್ದಾರೆ ಎಂದು ನಾನು ಭಾವಿಸುತ್ತೇನೆ. ಅವರು ಉತ್ತಮ ಫಾರ್ಮ್ನಲ್ಲಿದ್ದಾರೆ. ಅವರು ಹೆಚ್ಚುವರಿ ವೇಗದ ದಾಳಿಯ ಹೊಣೆಯನ್ನು ವಹಿಸಲಿದ್ದಾರೆ. ಭಾರತದ ಬೌಲಿಂಗ್ ದಾಳಿಗೆ ಅವರು ಉತ್ತಮ ಆಸ್ತಿ ಎಂಬುದಾಗಿ ವಿಲಿಯರ್ಸ್ ಹೇಳಿದ್ದಾರೆ.