Site icon Vistara News

INDvsWI : ಪೂಜಾರಗೆ ವಿಶ್ರಾಂತಿ ಎಂದುಕೊಳ್ಳುವೆ; ಬಿಸಿಸಿಐ ವಿರುದ್ಧ ಮಾಜಿ ಸ್ಪಿನ್ನರ್‌ ಪರೋಕ್ಷ ಅಸಮಾಧಾನ

Harbhajan Singh

#image_title

ಮುಂಬಯಿ: ಮುಂದಿನ ತಿಂಗಳು ವೆಸ್ಟ್ ಇಂಡೀಸ್ ಪ್ರವಾಸಕ್ಕಾಗಿ (INDvsWI) ಬಿಸಿಸಿಐ ಶುಕ್ರವಾರ ಟೆಸ್ಟ್ ಮತ್ತು ಏಕದಿನ ತಂಡಗಳನ್ನು ಪ್ರಕಟಿಸಿದೆ. ಯುವ ಮುಖಗಳಿಗೆ ಮನ್ನಡೆ ನೀಡುವ ಗುರಿಯೊಂದಿಗೆ ಸ್ಟಾರ್ ಬ್ಯಾಟರ್‌ ಚೇತೇಶ್ವರ ಪೂಜಾರ ಅವರಿಗೆ ಕೊಕ್‌ ನೀಡಲಾಗಿದೆ. ಇದು ಕ್ರಿಕೆಟ್‌ ಕಾರಿಡಾರ್‌ನಲ್ಲಿ ಚರ್ಚೆಯ ವಿಷಯ ಎನಿಸಿಕೊಂಡಿದೆ. ಹಲವು ವರ್ಷಗಳಿಂದ ಟೆಸ್ಟ್ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರುವ ಪೂಜಾರ ಅವರನ್ನು ಏಕಾಏಕಿ ತಂಡದಿಂದ ಹೊರಗಿಟ್ಟಿರುವ ಬಗ್ಗೆ ಆಕ್ಷೇಪಗಳು ವ್ಯಕ್ತಗೊಂಡಿವೆ.

ಅನೇಕ ಆಟಗಾರರು ಪೂಜಾರ ಅವರ ಅನುಪಸ್ಥಿತಿಯನ್ನು ನಿರೀಕ್ಷೆ ಮಾಡಲಾಗಿತ್ತು. ಹಿಂದಿನ ಡಬ್ಲ್ಯುಟಿಸಿ ಋತುವಿನಲ್ಲಿ (2021-23) ಅವರು 17 ಟೆಸ್ಟ್‌ ಪಂದ್ಯಗಳಲ್ಲಿ 32 ಸರಾಸರಿಯನ್ನು ಹೊಂದಿದ್ದಾರೆ. ಅಲ್ಲದೆ ಕಳೆದ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ತವರಿನ ಸರಣಿಗೆ ಮುಂಚಿತವಾಗಿ ಪೂಜಾರ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಆದರೆ ಕೌಂಟಿ ಚಾಂಪಿಯನ್‌ಷಿಪ್‌ನಲ್ಲಿ ಸಸೆಕ್ಸ್‌ ತಂಡದ ಪ್ರಭಾವಶಾಲಿ ಪ್ರದರ್ಶನದ ಬಳಿಕ ಅವರು ಅದೇ ವರ್ಷದ ಜುಲೈನಲ್ಲಿ ತಂಡಕ್ಕೆ ಮರಳಿದ್ದರು. ಆದಾಗ್ಯೂ, ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಪೂಜಾರ ಅವರನ್ನು ತಂಡದಿಂದ ತೆಗೆದುಹಾಕಿದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಬಯಸುತ್ತೇನೆ ಎಂಬುದಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಕಳೆದ ವರ್ಷದ ಡಬ್ಲ್ಯುಟಿಸಿ ಋತುವಿನಲ್ಲಿ ಭಾರತದ ಇತರ ಬ್ಯಾಟರ್‌ಗಳೂ ಉತ್ತಮ ಪ್ರದರ್ಶನ ನೀಡಿಲ್ಲ. ಹೀಗಾಗಿ ಪೂಜಾರ ಅವರ ಪ್ರದರ್ಶನವನ್ನು ಕಡೆಗಣಿಸುವಂತಿಲ್ಲ. ಹೀಗಾಗಿ 35 ವರ್ಷದ ಪೂಜಾರ ಅವರನ್ನು ಪ್ರತ್ಯೇಕಿಸುವುದು ಅನ್ಯಾಯ ಎಂದು ಅವರು ಹೇಳಿದ್ದಾರೆ.

ಚೇತೇಶ್ವರ ಪೂಜಾರ ಇಲ್ಲದಿರುವುದು ನನ್ನನ್ನು ಚಿಂತೆಗೀಡು ಮಾಡಿದೆ. ಅವರು ಭಾರತ ತಂಡದ ಪ್ರಮುಖ ಆಟಗಾರರಾಗಿದ್ದಾರೆ. ಅವರಿಗೆ ವಿರಾಮ ನೀಡಲಾಗಿದೆ ಮತ್ತು ಕೈಬಿಡಲಾಗಿಲ್ಲ ಎಂದು ಆಶಿಸುತ್ತೇವೆ. ಪೂಜಾರ ಈ ನಮ್ಮ ತಂಡದ ಬೆನ್ನೆಲುಬಾಗಿದ್ದಾರೆ. ನೀವು ಅವರನ್ನು ಕೈಬಿಡುತ್ತಿದ್ದರೆ, ಇತರ ಬ್ಯಾಟ್ಸ್‌ಮನ್‌ಗಳ ಸರಾಸರಿಯೂ ಉತ್ತಮವಾಗಿಲ್ಲ. ನೀವು ಎಷ್ಟೇ ದೊಡ್ಡ ಆಟಗಾರನಾಗಿದ್ದರೂ ಎಲ್ಲಾ ಆಟಗಾರರಿಗೆ ಮಾನದಂಡಗಳು ಒಂದೇ ಆಗಿರಬೇಕು ಎಂದು ಹರ್ಭಜನ್ ತಮ್ಮ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ನೀವು ಪೂಜಾರ ಅವರಂಥ ಪ್ರಮುಖ ಆಟಗಾರ ಎಂದು ಪರಿಗಣಿಸದಿದ್ದರೆ ಹೇಗೆ. ಅದು ಸಮರ್ಥನೆ ಆಗುವುದಿಲ್ಲ. ಅವರ ವೃತ್ತಿಜೀವನದ ಬಗ್ಗೆ ಪ್ರಶ್ನಾರ್ಥಕ ಚಿಹ್ನೆಗಳು ಇರಬಾರದು. ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಉತ್ತಮವಾಗಿ ಆಡಿದೆ ಮತ್ತು ಸರಣಿಗಳನ್ನು ಗೆದ್ದಿದೆ. ಇಂಗ್ಲೆಂಡ್‌ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದೆ. ಭಾರತ ಎಲ್ಲಿ ಉತ್ತಮವಾಗಿ ಆಡಿದೆಯೋ ಅಲ್ಲಿ ಅವರು ಸಮರ್ಥ ಕೊಡುಗೆ ನೀಡಿದ್ದಾರೆ. ಕಳೆದ 1-1.5 ವರ್ಷಗಳಲ್ಲಿ ಅವರು ಸಾಕಷ್ಟು ಸ್ಥಿರ ಪ್ರದರ್ಶನ ನೀಡಿಲ್ಲ. ಆದರೆ ಇತರ ಬ್ಯಾಟರ್‌ಗಳೂ ಚೆನ್ನಾಗಿ ಆಡಿಲ್ಲ ಎಂದು ಮಾಜಿ ಆಫ್‌ ಸ್ಪಿನ್ನರ್‌ ಹೇಳಿದ್ದಾರೆ.

ಇದನ್ನೂ ಓದಿ: INDvsWI : ಸರ್ಫರಾಜ್‌ ಖಾನ್‌ ಆಯ್ಕೆ ಮಾಡುವುದಿಲ್ಲ ಎಂದು ಘೋಷಿಸಲಿ; ಬಿಸಿಸಿಐಗೆ ಮಾಜಿ ಆಟಗಾರನ ಸವಾಲು

ಪೂಜಾರ 100 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ತಂಡದಲ್ಲಿರುವ ಗೌರವಕ್ಕೆ ಅರ್ಹರು. ಹೀಗಾಗಿ ಪೂಜಾರ ಅವನ್ನು ಕೈಬಿಡುವ ಮೊದಲು ಅವರ ಜತೆ ಆಯ್ಕೆಗಾರರು ಸಂವಹನ ನಡೆಸಿದ್ದಾರೆ ಎಂದ ಭಾವಿಸುತ್ತೇನೆ ಎಂದು ಭಜಿ ಹೇಳಿದ್ದಾರೆ. “ಎಂದು ಹರ್ಭಜನ್ ಹೇಳಿದರು.

ಭಾರತವು ವೆಸ್ಟ್ ಇಂಡೀಸ್‌ನಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದ್ದು, ನಂತರ ಮೂರು ಏಕದಿನ ಪಂದ್ಯಗಳನ್ನು ಆಡಲಿದೆ. ಕೆರಿಬಿಯನ್ ತಂಡದ ವಿರುದ್ಧ ಐದು ಟಿ20 ಪಂದ್ಯಗಳನ್ನು ಆಡಲು ತಂಡ ನಿಗದಿಯಾಗಿದೆ, ಆದರೆ ಅದಕ್ಕಾಗಿ ತಂಡಗಳನ್ನು ನಂತರದ ದಿನಾಂಕದಲ್ಲಿ ಘೋಷಿಸಲಾಗುವುದು ಎಂದು ಬಿಸಿಸಿಐ ಹೇಳಿದೆ.

Exit mobile version