Site icon Vistara News

Ram Mandir: ಆಪ್​ ನಿರ್ಧಾರ ಧಿಕ್ಕರಿಸಿ ರಾಮಮಂದಿರಕ್ಕೆ ಹೊರಟ ಸಂಸದ ಹರ್ಭಜನ್​ ಸಿಂಗ್​

Harbhajan Singh

ಮುಂಬಯಿ: ಅಯೋಧ್ಯೆ(Ram Mandir) ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೆ ವಿರೋಧ ಪಕ್ಷಗಳು ಆಹ್ವಾನ ನಿರಾಕರಿಸಿರುವ ಕುರಿತು ಮಾಜಿ ಕ್ರಿಕೆಟಿಗ ಮತ್ತು ರಾಜ್ಯಸಭಾ ಸಂಸದ ಹರ್ಭಜನ್ ಸಿಂಗ್ ಮುಕ್ತವಾಗಿ ಮಾತನಾಡಿದ್ದಾರೆ.

“ಈ ಸಮಯದಲ್ಲಿ ಈ ದೇವಾಲಯವನ್ನು ನಿರ್ಮಿಸುತ್ತಿರುವುದು ನಮ್ಮ ಅದೃಷ್ಟ, ಆದ್ದರಿಂದ ನಾವೆಲ್ಲರೂ ಹೋಗಿ ಆಶೀರ್ವಾದ ಪಡೆಯಬೇಕು. ಯಾರು ಹೋದರೂ ಹೋಗದಿದ್ದರೂ ನಾನು ಖಂಡಿತ ಹೋಗುತ್ತೇನೆ. ಯಾವ ಪಕ್ಷ ಹೋದರೂ, ಹೋಗದಿದ್ದರೂ ನಾನು ಹೋಗುತ್ತೇನೆ. ನಾನು ರಾಮಮಂದಿರಕ್ಕೆ ಹೋಗುವುದರಿಂದ ಯಾರಿಗಾದರೂ ತೊಂದರೆಯಾದರೆ ನಾನಂತು ಹೋಗುವೆ” ಎಂದು ಆಮ್ ಆದ್ಮಿ ಪಕ್ಷದ ಹರ್ಭಜನ್​ ಸಿಂಗ್​ ಎಎನ್​ಐ ಜತೆ ಹೇಳಿದ್ದಾರೆ.

ದೇವಾಲಯದ ಟ್ರಸ್ಟ್ ಪ್ರಕಾರ, ಅಯೋಧ್ಯೆಯಲ್ಲಿ ನಡೆಯುವ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ರಾಜಕಾರಣಿಗಳು, ಸೆಲೆಬ್ರಿಟಿಗಳು, ಕೈಗಾರಿಕೋದ್ಯಮಿಗಳು, ಸಂತರು ಮತ್ತು ವಿವಿಧ ದೇಶಗಳ ಸುಮಾರು 100 ಪ್ರತಿನಿಧಿಗಳು ಸೇರಿದಂತೆ 7,000 ಕ್ಕೂ ಹೆಚ್ಚು ಜನರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದೆ.

ಮೈಸೂರಿನ ಹೆಮ್ಮೆಯ ಶಿಲ್ಪಿ ಅರುಣ್‌ ಯೋಗಿರಾಜ್‌ (Arun Yogiraj) ಕೆತ್ತಿದ ರಾಮಲಲ್ಲಾನ ಮೂರ್ತಿಯು (Ram Lalla Idol) ಅಯೋಧ್ಯೆಯ ರಾಮಮಂದಿರದ (Ram Mandir) ಗರ್ಭಗುಡಿ ಪ್ರವೇಶಿಸಿದೆ. ಪ್ರಾಣಪ್ರತಿಷ್ಠಾಪನೆಗೂ ಮುಂಚಿನ ವಿಧಿವಿಧಾನಗಳ ಭಾಗವಾಗಿ ಗರ್ಭಗುಡಿಯಲ್ಲಿ ರಾಮಲಲ್ಲಾನ ಮೂರ್ತಿಯನ್ನು ಇರಿಸಲಾಗಿದೆ. ಈಗ ಇದೇ ಮೊದಲ ಬಾರಿಗೆ ರಾಮಲಲ್ಲಾ ಮೂರ್ತಿಯ ಚಿತ್ರವನ್ನು ಬಿಡುಗಡೆ ಮಾಡಲಾಗಿದೆ. ರಾಮಲಲ್ಲಾನ ಮೂರ್ತಿಯನ್ನು ನೋಡಿದ ಭಕ್ತರು ಪುಳಕಿತರಾಗಿದ್ದಾರೆ.

ಇದನ್ನೂ ಓದಿ Ram Mandir: ಬಾಬರ್‌ ರಸ್ತೆಗೆ ಅಯೋಧ್ಯೆ ಮಾರ್ಗ ಎಂದು ಹೆಸರಿಟ್ಟ ಹಿಂದು ಕಾರ್ಯಕರ್ತರು!

ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ಭವ್ಯ ರಾಮಮಂದಿರದ (Ram Mandir) ಲೋಕಾರ್ಪಣೆ, ರಾಮಲಲ್ಲಾನಿಗೆ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು 11 ದಿನಗಳ ಕಠಿಣ ವ್ರತ ಕೈಗೊಂಡಿದ್ದಾರೆ. ಅನುಷ್ಠಾನದ ಭಾಗವಾಗಿ ನರೇಂದ್ರ ಮೋದಿ (PM Modi Anushthaan) ಅವರು ನೆಲದ ಮೇಲೆಯೇ ಮಲಗುತ್ತಾರೆ. ಅವರ ಆಹಾರ ಪದ್ಧತಿಯೂ ಬದಲಾಗಿದೆ. ಅಷ್ಟೇ ಅಲ್ಲ, ಮೋದಿ ಅವರು ನಿತ್ಯ 1 ಗಂಟೆ 11 ನಿಮಿಷ ವಿಶೇಷ ಮಂತ್ರವನ್ನೂ ಪಠಿಸುತ್ತಾರೆ ಎಂದು ತಿಳಿದುಬಂದಿದೆ.

ಜನವರಿ 12ರಂದು ಮೋದಿ ಅವರು ನಾಸಿಕ್‌ನ ಪಂಚವಟಿ ಪ್ರದೇಶದ ಗೋದಾವರಿ ತಟದಲ್ಲಿರುವ ಶ್ರೀ ಕಾಲ ರಾಮ್ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸುವ ಮೂಲಕ ತಮ್ಮ ಅನುಷ್ಠಾನ ಪ್ರಾರಂಭಿಸಿದರು. ಅಲ್ಲದೆ ಅವರು ಕೇರಳದ ಗುರುವಾಯೂರು ದೇವಸ್ಥಾನ ಮತ್ತು ಆಂಧ್ರ ಪ್ರದೇಶದ ವೀರಭದ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಈ ವಾರಾಂತ್ಯದಲ್ಲಿ ಮೋದಿ ತಮಿಳುನಾಡಿನ ಸರಣಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಜನವರಿ 22ರಂದು ರಾಮಮಂದಿರದಲ್ಲಿ ನರೇಂದ್ರ ಮೋದಿ ಅವರು ರಾಮಲಲ್ಲಾನಿಗೆ ಪ್ರಾಣಪ್ರತಿಷ್ಠಾಪನೆ ನೆರವೇರಿಸಲಿದ್ದಾರೆ. ಇದಕ್ಕಾಗಿ ಅಯೋಧ್ಯೆಯಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ. ಬಿಗಿ ಬಂದೋಬಸ್ತ್‌ ಕೂಡ ಏರ್ಪಡಿಸಲಾಗಿದೆ.

Exit mobile version