ನವದೆಹಲಿ: ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ 2022 ರಲ್ಲಿ ಆಪ್ತ ಸ್ನೇಹಿತ ಜಸ್ಟಿನ್ ಲ್ಯಾಂಗರ್ ಅವರ ವಿವಾದಾತ್ಮಕ ನಿರ್ಗಮನದ ಬಳಿಕ ರಾಷ್ಟ್ರೀಯ (Australia cricket team) ತಂಡಕ್ಕೆ ಕೋಚ್ ಆಗುವ ಸಾಧ್ಯತೆಯನ್ನು ದೃಢವಾಗಿ ತಿರಸ್ಕರಿಸಿದ್ದಾರೆ. ಲ್ಯಾಂಗರ್ ಅವರ ನಿರ್ಗಮನವು ಆಟಗಾರರು ಮತ್ತು ಮ್ಯಾನೇಜ್ಮೆಂಟ್ ನಡುವಿನ ಬಿರುಕುಗಳಿಗೆ ಕಾರಣವಾಗಿದೆ. ಅಂಥ ಸನ್ನಿವೇಶದಲ್ಲಿ ತಂಡಕ್ಕೆ ಸೇರಲು ಸಾಧ್ಯವಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
2021-22ರ ಕ್ರಿಕೆಟ್ ಋತುವಿನ ನಂತರ ಲ್ಯಾಂಗರ್ ಕೇವಲ ಆರು ತಿಂಗಳ ಒಪ್ಪಂದ ವಿಸ್ತರಣೆಯನ್ನು ಪಡೆದುಕೊಂಡಿದ್ದರು. ಅದನ್ನು ಅವರು ತಿರಸ್ಕರಿಸಿದ್ದರು. ಸ್ಯಾಂಡ್ ಪೇಪರ್-ಗೇಟ್ ನಂತರ ಸವಾಲಿನ ಅವಧಿಯಲ್ಲಿ ಅವರು ತಂಡವನ್ನು ಮುನ್ನಡೆಸಿದ್ದರು. ಇಂಗ್ಲೆಂಡ್ನಲ್ಲಿ ಆಶಸ್ ಗೆಲುವು, ತವರಿನಲ್ಲಿ ಗೆಲುವು ಮತ್ತು ಚೊಚ್ಚಲ ಟಿ20 ವಿಶ್ವಕಪ್ ಗೆಲುವನ್ನು ಖಚಿತಪಡಿಸಿದ್ದರು. ಆದರೂ ಅವರು ಏಕಾಏಕಿ ನಿರ್ಗಮಿಸಿದ್ದರು. ಹೀಗಾಗಿ ಆಸ್ಟ್ರೇಲಿಯಾ ತಂಡಕ್ಕೆ ತರಬೇತಿ ನೀಡುವ ಸಾಧ್ಯತೆಯ ಇಲ್ಲ ಎಂಬುದಾಗಿ 52 ವರ್ಷದ ಹೇಡನ್ ಹೇಳಿದ್ದಾರೆ.
“ನಾನು (ಆಸ್ಟ್ರೇಲಿಯಾ ಕೋಚ್) ಮಾಡುವುದಿಲ್ಲ. ಜಸ್ಟಿನ್ ಮತ್ತು ಅವರ ನಿರ್ಗಮನದ ನಂತರ ಆಸ್ಟ್ರೇಲಿಯಾಕ್ಕೆ ತರಬೇತಿ ನೀಡಲು ಪ್ರಯತ್ನಿಸುವ ಯಾವುದೇ ನಿರ್ಧಾರವನ್ನು ನಾನು ಹೊಂದಿರುವುದಿಲ್ಲ. ಏಕೆಂದರೆ ಅದು ನಾನು ಆನಂದಿಸುವ ವಿಷಯ ಎಲ್ಲ ಎಂದು ಭಾವಿಸುತ್ತೇನೆ. ನಾನು ಆಸ್ಟ್ರೇಲಿಯಾದ ಕ್ರಿಕೆಟ್ ಅನ್ನು ನಿಜವಾಗಿಯೂ ಪ್ರೀತಿಸುತ್ತೇನೆ/ ಪ್ರಸ್ತುತ ಕ್ರಿಕೆಟ್ ತಂಡದಲ್ಲಿ ಪ್ರಸಾರ ವಿಭಾಗದಲ್ಲಿ ಇರುವುದನ್ನೂ ನಾನು ನಿಜವಾಗಿಯೂ ಪ್ರೀತಿಸುತ್ತೇನೆ. ಅವರು ಅದ್ಭುತ ತಂಡ ಎಂದು ನಾನು ಭಾವಿಸುತ್ತೇನೆ ಆದರೆ ಒಂದು ವಿಷಯದಲ್ಲಿ ಹೊಂದಾಣಿಕೆಯಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.
ಉತ್ತಮ ಆರಂಭಿಕ ಬ್ಯಾಟರ್
ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಹೇಡನ್ ಈ ಹಿಂದೆ ಆಸ್ಟ್ರೇಲಿಯಾದಲ್ಲಿ ನಡೆದ ಟಿ 20 ವಿಶ್ವಕಪ್ ಸಮಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು. ಅವರು ಇಂಗ್ಲೆಂಡ್ ವಿರುದ್ಧ ಸೋತರೂ ಸೆಮಿ ಫೈನಲ್ ತಲುಪಲು ಸಹಾಯ ಮಾಡಿದ್ದರು. ಆದಾಗ್ಯೂ, ಆಸ್ಟ್ರೇಲಿಯಾದ ಮಾಜಿ ಆಟಾಗರ ಹೇಳಿಕೆಗಳು ಲ್ಯಾಂಗರ್ ಅವರೊಂದಿಗಿನ ಸ್ನೇಹವನ್ನು ಮೀರಿ ವಿಸ್ತರಿಸಿದ್ದರು. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ರಚನೆಯಲ್ಲಿ ಮಾಜಿ ಕ್ರಿಕೆಟ್ ಚಾಂಪಿಯನ್ ಗಳ ಅನುಪಸ್ಥಿತಿಯ ಬಗ್ಗೆ ಅವರು ಕಳವಳ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ : AUS vs NED: ಬೆಳಕಿನಾಟದ ವಿಚಾರದಲ್ಲಿ ಮ್ಯಾಕ್ಸ್ವೆಲ್-ವಾರ್ನರ್ ಮಧ್ಯೆ ಭಿನ್ನಾಭಿಪ್ರಾಯ
“ಸಾಕಷ್ಟು ಆಸಕ್ತಿದಾಯಕ ಸಂಗತಿಯೆಂದರೆ, ಆಸ್ಟ್ರೇಲಿಯಾ ಕ್ರಿಕೆಟ್ನ ಚುಕ್ಕಾಣಿ ಹಿಡಿದಿರುವ ಒಬ್ಬರಲ್ಲೂ ಮಾಜಿ ಶ್ರೇಷ್ಠ ಆಟಗಾರರಿಲ್ಲ. ಆಯ್ಕೆದಾರರ ಅಧ್ಯಕ್ಷರಾಗಿ ಅಲ್ಲ, ತರಬೇತುದಾರರಾಗಿ ಅಲ್ಲ, ಮಂಡಳಿಯ ನಿರ್ದೇಶಕರಾಗಿ ಅಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ನ ಯಾವುದೇ ವಿಭಾಗದಲ್ಲಿ ಇಲ್ಲ. ಆಸ್ಟ್ರೇಲಿಯಾ ಕ್ರಿಕೆಟ್ ಮೂರು ಶ್ರೇಷ್ಠ ಯುಗಗಳಿಂದ ಹೊರ ಬಂದಿದೆ” ಎಂದು ಹೇಡನ್ ಪ್ರತಿಕ್ರಿಯಿಸಿದ್ದಾರೆ.
ಆಸ್ಟ್ರೇಲಿಯಾ ತಂಡ ಹಾಲಿ ವಿಶ್ವ ಕಪ್ನಲ್ಲಿ ಆಡಿರುವ ಆರು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಎಂಟು ಅಂಕಗಳನ್ನು ಸಂಪಾದಿಸಿಕೊಂಡಿದೆ. ಸೆಮಿಫೈನಲ್ ಹಾದಿಯಲ್ಲಿ ಅದಿನ್ನೂ ಮೂರು ಪಂದ್ಯಗಳನ್ನು ಆಡಬೇಕಾಗಿದೆ. ಸದ್ಯ ಆ ತಂಡ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಹೊಂದಿದೆ.