Site icon Vistara News

IBA Threatens IOC: ಪ್ಯಾರಿಸ್​ ಒಲಿಂಪಿಕ್ಸ್​ ವಿಚಾರದಲ್ಲಿ ಐಬಿಎ ಮತ್ತು ಐಒಸಿ ತಿಕ್ಕಾಟ

IBA Threatens IOC: IBA and IOC clash over Paris Olympics

IBA Threatens IOC: IBA and IOC clash over Paris Olympics

ನವದೆಹಲಿ: ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC)ಯ ಮೇಲೆ ಅಂತಾರಾಷ್ಟ್ರೀಯ ಬಾಕ್ಸಿಂಗ್ (IBA) ಒಕ್ಕೂಟ ಗಂಭೀರ ಆರೋಪವೊಂದನ್ನು(IBA Threatens IOC) ಮಾಡಿದೆ. 2024ರಲ್ಲಿ ನಡೆಯುವ ಪ್ಯಾರಿಸ್ ಒಲಿಂಪಿಕ್ಸ್ ಅರ್ಹತಾ ಪ್ರಕ್ರಿಯೆಗೆ ಬಾಕ್ಸಿಂಗ್ ಅಧಿಕಾರಿಗಳನ್ನು ಆಹ್ವಾನಿಸುವ ವಿಚಾರವಾಗಿ ಒಲಿಂಪಿಕ್‌ ಸಮಿತಿ ಪಾರದರ್ಶಕತೆ ತೋರಿಲ್ಲ ಎಂದು ಆರೋಪಿಸಿದೆ.

“ಒಲಿಂಪಿಕ್‌ ಸಮಿತಿಯಲ್ಲಿ ಪಾರದರ್ಶಕತೆಯ ಕೊರತೆ ಎದ್ದು ಕಾಣುತ್ತಿದೆ. ಇದೊಂದು ಕಾನೂನು ಬಾಹಿರ ನಡವಳಿಕೆ” ಎಂದು ಐಬಿಎ ಆರೋಪಿಸಿದೆ. ಜತೆಗೆ ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ನ್ಯಾಯಾಲಯದ ಮೊರೆ ಹೋಗುವುದಾಗಿ ತಿಳಿಸಿದೆ.

ಇಂದು ನಡೆಯಲಿರುವ(ಮಂಗಳವಾರ ಮಾರ್ಚ್ 28) ಜಾಗತಿಕ ಕ್ರೀಡಾ ಸಂಸ್ಥೆಯ ಕಾರ್ಯಕಾರಿ ಮಂಡಳಿಯ ಸಭೆಗೂ ಮುನ್ನ, ಒಲಿಂಪಿಕ್ಸ್‌ ಸಮಿತಿಯ ಅಧ್ಯಕ್ಷ ಥಾಮಸ್‌ ಬಾಕ್‌(Thomas Bach) ಅವರು ಐಬಿಎ ಕಳುಹಿಸಿದ ಪತ್ರವನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿದ ಥಾಮಸ್‌ ಬಾಕ್‌. “ಐಬಿಎ ಯಾವುದೇ ಪೂರ್ವಾನುಮತಿ ಅಥವಾ ಸಂವಹನ ನಡೆಸದೆ ಈ ಆರೋಪವನ್ನು ಮಾಡಿದೆ” ಎಂದು ಹೇಳಿದ್ದಾರೆ.

ಬಾಕ್ಸಿಂಗ್ ಸಂಸ್ಥೆಯ ಆಡಳಿತ, ಆರ್ಥಿಕ ಪಾರದರ್ಶಕತೆ, ಸುಸ್ಥಿರತೆ ಮತ್ತು ತೀರ್ಪುಗಾರರ ಮತ್ತು ತೀರ್ಪು ನೀಡುವ ಪ್ರಕ್ರಿಯೆ ಸೇರಿದಂತೆ ಹಲವು ವಿಚಾರವಾಗಿ ಬಾಕ್ಸಿಂಗ್ ಸಂಸ್ಥೆಯ ಮೇಲೆ ಒಲಿಂಪಿಕ್‌ ಅಸೋಸಿಯೇಷನ್ ಹೇರಿದ ನಿಷೇಧ ಈ ಎಲ್ಲ ಸಮಸ್ಯೆಗೆ ಮೂಲ ಕಾರಣವಾಗಿದೆ.

ಇದನ್ನೂ ಓದಿ Women’s Boxing Championship: ಭಾರತಕ್ಕೆ ನಾಲ್ಕನೇ ಚಿನ್ನದ ಪದಕ; 75 ಕೆಜಿ ವಿಭಾಗದಲ್ಲಿ ಸ್ವರ್ಣ ಗೆದ್ದ ಲವ್ಲಿನಾ ಬೊರ್ಗೊಹೈನ್

ಕಳೆದ ಟೋಕಿಯೊ ಒಲಿಂಪಿಕ್ಸ್​ಗೆ ಆಯ್ಕೆ ಮಾಡಿದ ಮಾನದಂಡದಲ್ಲೇ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ಗೂ ಮುಂಚಿತವಾಗಿ ಬಾಕ್ಸಿಂಗ್ ಅರ್ಹತಾ ಪಂದ್ಯಗಳನ್ನು ನಡೆಸುವುದಾಗಿ ಐಒಸಿಯು ಐಬಿಎಗೆ ತಿಳಿಸಿತ್ತು. ಆದರೆ ಐಒಸಿಯ ಸೂಚನೆಗಳ ಹೊರತಾಗಿಯೂ ಬಾಕ್ಸಿಂಗ್ ಸಂಸ್ಥೆಯು ಭಾರತದಲ್ಲಿ ಕಳೆದ ವಾರ ಮುಕ್ತಾಯಕಂಡ ಮಹಿಳಾ ವಿಶ್ವ ಬಾಕ್ಸಿಂಗ್​ ಚಾಂಪಿಯನ್‌ಶಿಪ್‌(women’s world boxing championship) ಪಂದ್ಯಗಳೇ 2024ರ ಪ್ಯಾರಿಸ್‌ಗೆ ಮುಖ್ಯ ಅರ್ಹತಾ ಪಂದ್ಯವಾಗಿದೆ ಎಂದು ಘೋಷಿಸಿದೆ. ಇದು ಉಭಯ ಸಂಸ್ಯೆಗಳ ತಿಕ್ಕಾಟಕ್ಕೆ ಪ್ರಮುಖ ಕಾರಣವಾಗಿದೆ. ಒಟ್ಟಾರೆ ಇಂದು ನಡೆಯುವ ಸಭೆಯಲ್ಲಿ ಏನು ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ.

Exit mobile version