ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ICC) ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿದ್ದು, ಐಸಿಸಿ ಈವೆಂಟ್‌ಗಳಲ್ಲಿ ಪುರುಷ ಮತ್ತು ಮಹಿಳಾ ತಂಡಗಳಿಗೆ ಸಮಾನ ಬಹುಮಾನವನ್ನು(equal prize money) ನೀಡುವುದಾಗಿ ಘೋಷಿಸಿದೆ. ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಐಸಿಸಿ ವಾರ್ಷಿಕ ಸಮ್ಮೇಳನದಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಈ ಮಹತ್ವದ ನಿರ್ಧಾರದ ಬಳಿಕ ಮಾತನಾಡಿದ ಐಸಿಸಿ ಅಧ್ಯಕ್ಷ ಗ್ರೆಗ್ ಬಾರ್ಕ್ಲೇ, “ಇದು ನಮ್ಮ ಕ್ರೀಡಾ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ. ಐಸಿಸಿ ಜಾಗತಿಕ ಈವೆಂಟ್‌ಗಳಲ್ಲಿ ಸ್ಪರ್ಧಿಸುವ ಪುರುಷ ಮತ್ತು ಮಹಿಳಾ ಕ್ರಿಕೆಟಿಗರಿಗೆ ಯಾವುದೇ ತಾರತ್ಯಮವಿಲ್ಲದೆ ಸಮಾನವಾಗಿ ಬಹುಮಾನ ನೀಡುವುದಕ್ಕೆ ನಾನು ಸಂತಸಪಡುತ್ತೇನೆ” ಎಂದು ಹೇಳಿದರು.
“2017 ರಿಂದಲೂ ಮಹಿಳಾ ಕ್ರಿಕೆಟ್ ಈವೆಂಟ್ನಲ್ಲಿ ಬಹುಮಾನದ ಮೊತ್ತವನ್ನು ಏರಿಸುತ್ತಲೇ ಬಂದಿದ್ದೆವು. ಇನ್ನು ಮುಂದೆ ಪುರುಷರಷ್ಟೇ ಸಮಾನ ಬಹುಮಾನ ಮೊತ್ತ ನೀಡಲು ನಿರ್ಧರಿಸಲಾಗಿದೆ. ಇದು ಎಲ್ಲ ಐಸಿಸಿ ಈವೆಂಟ್ ಮತ್ತು ವಿಶ್ವಕಪ್ಗೂ ಅನ್ವಯವಾಗಲಿದೆ” ಎಂದು ಐಸಿಸಿ ತಿಳಿಸಿದೆ.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್ ಟೂರ್ನಿಯ ಪೋಸ್ಟರ್ ರಿಲೀಸ್ ಮಾಡಿದ ಐಸಿಸಿ
ಜೈ ಶಾ ಮೆಚ್ಚುಗೆ
ಕಳೆದ ವರ್ಷವೇ ಭಾರತದಲ್ಲಿ ಬಿಸಿಸಿ ಮಹಿಳಾ ಮತ್ತು ಪುರುಷ ಕ್ರಿಕೆಟ್ ಆಟಗಾರರಿಗೆ ಸಮಾನ ವೇತನ ಪದ್ದತಿ ಜಾರಿಗೆ ತಂದಿತ್ತು. ಇದೀಗ ಐಸಿಸಿಯೂ ಬಹುಮಾನ ಮೊತ್ತವನ್ನು ಸಮಾನವಾಗಿ ಮಾಡಿದ್ದಕ್ಕೆ ಬಿಸಿಸಿಐ ಕಾರ್ಯದರ್ಶಿ ಜೈ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
BCCI Secretary Jay Shah announces, "The prize money at all ICC events will be the same for men and women." pic.twitter.com/qcBTAwysze
— ANI (@ANI) July 13, 2023
“ಸಮಾನತೆ ಮತ್ತು ಸಬಲೀಕರಣದ ಹೊಸ ಯುಗ ಆರಂಭವಾಗಿದೆ. ಲಿಂಗ ಸಮಾನತೆ ಕಡೆಗೆ ಒಂದು ಪ್ರಮುಖ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಘೋಷಿಸಲು ನಾನು ರೋಮಾಂಚನಗೊಂಡಿದ್ದೇನೆ. ಐಸಿಸಿಯ ಎಲ್ಲ ಟೂರ್ನಿಗಳಲ್ಲಿ ಬಹುಮಾನದ ಹಣ ಪುರುಷರು ಮತ್ತು ಮಹಿಳೆಯರಿಗೆ ಒಂದೇ ಆಗಿರುತ್ತವೆ” ಎಂದು ಟ್ವಿಟ್ ಮೂಲಕ ತೀಳಿಸಿದ್ದಾರೆ.