ದುಬೈ: ಇಂಗ್ಲೆಂಡ್ ತಂಡದ ಯುವ ಬ್ಯಾಟ್ಸ್‌ಮನ್ ಹ್ಯಾರಿ ಬ್ರೂಕ್ ಅವರು ಡಿಸೆಂಬರ್ 2022ರ (ICC Awards) ಪುರುಷರ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ವಿಜೇತರಾಗಿದ್ದಾರೆ. ಪಾಕಿಸ್ತಾನ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮೂರು ಶತಕ ಬಾರಿಸಿ ಮಿಂಚಿದ ಯುವ ಆಟಗಾರ ಇದೇ ಮೊದಲ ಬಾರಿ ಪ್ರತಿಷ್ಠಿತ ಐಸಿಸಿ ಪ್ರಶಸ್ತಿ ಪಡೆದಿದ್ದಾರೆ.
ಈ ಸ್ಪರ್ಧೆಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಂ ಮತ್ತು ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಟ್ರಾವಿಸ್ ಹೆಡ್ ಕಾಣಿಸಿಕೊಂಡಿದ್ದರು. ಆದರೆ ಅವರನ್ನು ಹ್ಯಾರಿ ಬ್ರೂಕ್ ಹಿಂದಿಕ್ಕಿದ್ದಾರೆ.
ಹ್ಯಾರಿ ಬ್ರೂಕ್ ಕೇವಲ ಒಂದು ಟೆಸ್ಟ್ ಪಂದ್ಯದ ಅನುಭವದ ಆಧಾರದಲ್ಲಿ 3 ಪಂದ್ಯಗಳ ಟೆಸ್ಟ್ ಸರಣಿಗಾಗಿ ಪಾಕಿಸ್ತಾನ ಪ್ರವಾಸಕ್ಕೆ ಆಯ್ಕೆಯಾಗಿದ್ದರು. ಸಿಕ್ಕ ಅವಕಾಶವನ್ನು ಉಪಯುತ್ತವಾಗಿ ಬಳಿಸಿಕೊಂಡ ಅವರು ಮೂರು ಶತಕ ಸಿಡಿಸಿ ಮೆರೆದಾಡಿದರು. ಒಟ್ಟಾರೆ ಅವರು ಆಡಿದ 4 ಟೆಸ್ಟ್ ಪಂದ್ಯಗಳಲ್ಲಿ 480 ರನ್ ಪೇರಿಸಿದ್ದಾರೆ.
ಇದೇ ವೇಳೆ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟರ್ ಆಶ್ಲೀಗ್ ಗಾರ್ಡ್ನರ್ ಐಸಿಸಿ ಮಹಿಳಾ ಆಟಗಾರ್ತಿಯ ಡಿಸೆಂಬರ್ ತಿಂಗಳ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಭಾರತ ವಿರುದ್ಧ ಟಿ20 ಸರಣಿಯ ಆಲ್ರೌಂಡರ್ ಪ್ರದರ್ಶನ ತೋರುವ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ಐಸಿಸಿ ಪ್ರಶಸ್ತಿ ನೀಡಿದೆ.
ಇದನ್ನೂ ಓದಿ | ICC World Cup | ಏಕ ದಿನ ವಿಶ್ವಕಪ್ ತಂಡದಲ್ಲಿ ಅಶ್ವಿನ್ಗೆ ಸ್ಥಾನ ನೀಡಿ; ಅಜಯ್ ಜಡೇಜಾ ಸಲಹೆ!