ದುಬೈ: 2022ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಉದಯೋನ್ಮುಖ ಆಟಗಾರನ್ನು ಗುರುತಿಸುವ ಐಸಿಸಿ ಪ್ರಶಸ್ತಿ(ICC Awards) ಪಟ್ಟಿ ಪ್ರಕಟಗೊಂಡಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ನಾಮನಿರ್ದೇಶನಗೊಂಡಿದ್ದು ಭಾರತದ ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಸ್ಥಾನ ಪಡೆದಿದ್ದಾರೆ.
ಬುಧವಾರ ಪ್ರಕಟಗೊಂಡ ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ವೇಗಿ ಮಾರ್ಕೊ ಜಾನ್ಸೆನ್, ನ್ಯೂಜಿಲ್ಯಾಂಡ್ ತಂಡದ ಫಿನ್ ಅಲೆನ್ ಮತ್ತು ಅಫಘಾನಿಸ್ತಾನ ತಂಡದ ಇಬ್ರಾಹಿಂ ಜದ್ರಾನ್ ಅವರೊಂದಿಗೆ ಅರ್ಶ್‌ದೀಪ್ ಸಿಂಗ್ ನಾಮನಿರ್ದೇಶನಗೊಂಡಿದ್ದಾರೆ. ಈ ಪ್ರಶಸ್ತಿಗಾಗಿ ಮತದಾನ ಜನವರಿಯಲ್ಲಿ ಆರಂಭವಾಗಲಿದೆ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.
23 ವರ್ಷದ ಅರ್ಶ್‌ದೀಪ್ ಅವರು ಭಾರತ ಪರ 21 ಟಿ20 ಪಂದ್ಯಗಳಲ್ಲಿ 33 ವಿಕೆಟ್‌ಗಳನ್ನು ಪಡೆಯುವ ಮೂಲಕ ಟೀಮ್ ಇಂಡಿಯಾದಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾರೆ. ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವ ಕಪ್ನಲ್ಲಿ ಪಾಕ್ ವಿರುದ್ಧದ ಪಂದ್ಯದಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ಅರ್ಶ್‌ದೀಪ್ ಗಮನ ಸೆಳೆದಿದ್ದರು. ಇದೀಗ ಅವರು ಐಸಿಸಿ ಉದಯೋನ್ಮುಖ ಪ್ರಶಸ್ತಿ ರೇಸ್ನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ | ICC Test Ranking | ಟೆಸ್ಟ್ ರ‍್ಯಾಂಕಿಂಗ್; ಪ್ರಗತಿ ಕಂಡ ಅಯ್ಯರ್, ಅಶ್ವಿನ್; ಕುಸಿತ ಕಂಡ ವಿರಾಟ್