Site icon Vistara News

ICC Awards | ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿ ಭಾರತದ ಒಬ್ಬರೂ ಆಟಗಾರರಿಲ್ಲ!

Sikandar Raza

ದುಬೈ: ಐಸಿಸಿ 2022ರ ಏಕ ದಿನ ಕ್ರಿಕೆಟಿಗರ ಪ್ರಶಸ್ತಿಗೆ(ICC Awards) ನಾಮನಿರ್ದೇಶಿತಗೊಂಡ ಆಟಗಾರರ ಪಟ್ಟಿ ಪ್ರಕಟಗೊಂಡಿದೆ. ವಿಪರ್ಯಾಸವೆಂದರೆ ಭಾರತದ ಯಾವುದೇ ಆಟಗಾರ ಈ ಬಾರಿಯ ಏಕ ದಿನ ಪ್ರಶಸ್ತಿಗೆ ಆಯ್ಕೆಯಾಗಿಲ್ಲ.

ಈ ಪಟ್ಟಿಯಲ್ಲಿರುವ ಆಟಗಾರರೆಂದರೆ ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ, ಆಸ್ಟ್ರೇಲಿಯಾದ ಸ್ಪಿನ್ನರ್​ ಆ್ಯಡಂ ಝಂಪಾ, ಜಿಂಬಾಬ್ವೆ ತಂಡದ ಆಲ್​ರೌಂಡರ್​ ಸಿಕಂದರ್ ರಾಜಾ, ವೆಸ್ಟ್​ ಇಂಡಿಸ್​ ತಂಡದ ಶೈ ಹೋಪ್‌ ಐಸಿಸಿ ವರ್ಷದ ಏಕದಿನ ಕ್ರಿಕೆಟಿಗ ಪ್ರಶಸ್ತಿ ರೇಸ್​ನಲ್ಲಿದ್ದಾರೆ.

ವಿಶೇಷ ಎಂದರೆ ಜಿಂಬಾಬ್ವೆ ತಂಡದ ಸ್ಟಾರ್ ಆಲ್​ರೌಂಡರ್ ಸಿಕಂದರ್ ರಾಜಾ​ ವರ್ಷದ ಏಕ ದಿನ ಹಾಗೂ ಟಿ20 ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತರಾಗಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಎರಡು ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಆಟಗಾರನಾಗಿದ್ದಾರೆ. ಒಟ್ಟು 15 ಏಕ ದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸಿಕಂದರ್ ರಾಜಾ 3 ಭರ್ಜರಿ ಶತಕಗಳೊಂದಿಗೆ 645 ರನ್ ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ ವರ್ಷ ಟಿ20 ಯಲ್ಲೂ 735 ರನ್​ ಬಾರಿಸಿದ್ದಾರೆ.

ಇದನ್ನೂ ಓದಿ | ICC Awards | ಐಸಿಸಿ ಟಿ20 ವರ್ಷದ ಕ್ರಿಕೆಟಿಗ ಪ್ರಶಸ್ತಿ; ಸೂರ್ಯಕುಮಾರ್, ಸ್ಮೃತಿ ಮಂಧಾನಾ ನಾಮನಿರ್ದೇಶನ

Exit mobile version