Site icon Vistara News

ಮೋಸಗಾರ cricket umpire ಈಗ ಸೆಕೆಂಡ್ ಹ್ಯಾಂಡ್‌ ವಸ್ತುಗಳ ಮಾರಾಟಗಾರ!

cricket umpire

ನವ ದೆಹಲಿ: ಇವರು ಪಾಕಿಸ್ತಾನ ದೇಶೀ ಕ್ರಿಕೆಟ್‌ ತಂಡದ ಪರ ೧೭೦ ಪಂದ್ಯಗಳನ್ನಾಡಿದ ಆಟಗಾರ. ೨೦೦೦ದಿಂದ ೨೦೧೩ರವರೆಗೆ ಐಸಿಸಿ ಎಲೈಟ್‌ ಅಂಪೈರ್‌ಗಳ ಪ್ಯಾನೆಲ್‌ ಸದಸ್ಯರಾಗಿದ್ದು, ನೂರಾರು ಪಂದ್ಯಗಳಿಗೆ cricket umpire ಕಾರ್ಯ ಮಾಡಿದವರು. ಇಂಥವರು ಈಗ ಲಾಹೋರ್‌ನ ಬೀದಿಯಲ್ಲಿ ಸೆಕೆಂಡ್‌ ಹ್ಯಾಂಡ್‌ ವಸ್ತುಗಳನ್ನು ಮಾರುತ್ತಿದ್ದಾರೆ.

ಅವರೇ ಅಸಾದ್‌ ರವೂಫ್‌. ಇವರ ಕಥೆ ಕೇಳಿ ಕನಿಕರ ತೋರಿಸಬೇಕಾ, ಬೇಡವಾ ಎಂಬುದು ಸದ್ಯದ ಪ್ರಶ್ನೆ. ಆದರೆ, ಅವರ ಈ ಸ್ಥಿತಿಗೆ ಮೋಸದಾಟವೇ ಕಾರಣ ಎಂಬುದು ಗೊತ್ತಾದರೆ ಯಾರೂ ಕೂಡ ಅವರ ಪರ ನಿಲ್ಲಲಾರರು. ಆದರೆ, ಒಬ್ಬ ಉತ್ತಮ ಕ್ರಿಕೆಟಿಗನಾಗಿದ್ದ ಅವರಿಗೆ ಈ ಸ್ಥಿತಿ ಬರಬಾರದಿತ್ತು ಎಂದೂ ಮರುಗುವವರು ಸಾಕಷ್ಟಿದ್ದಾರೆ.

ಅಸಾದ್ ೧೯೭೭ರಿಂದ ೧೯೯೧ರವರೆಗೆ ಲಾಹೋರ್‌ ಯೂನಿವರ್ಸಿಟಿ , ಪಾಕಿಸ್ತಾನ ನ್ಯಾಷನಲ್‌ ಬ್ಯಾಂಕ್‌, ಪಾಕಿಸ್ತಾನ್‌ ರೈಲ್ವೇಸ್‌ ತಂಡದ ಪರ ಆಡಿದ್ದರು. ೭೧ ಪ್ರಥಮ ದರ್ಜೆ ಹಾಗೂ ೪೦ ಲಿಸ್ಟ್‌ ಎ ಪಂದ್ಯಗಳಲ್ಲಿ ಆಡಿದ ಅನುಭವ ಅವರಿಗೆ ಇದೆ. ಅಂತೆಯೇ ೨೦೦೩ರಿಂದ ಐಸಿಸಿಯ ಎಲೈಟ್‌ ಅಂಪೈರ್‌ ಪ್ಯಾನೆಲ್‌ಗೆ ಆಯ್ಕೆಯಾಗಿದ್ದರು. ಆದರೆ, ೨೦೧೩ರಲ್ಲಿ ಅವರು ಐಪಿಎಲ್‌ಗೆ ಅಂಪೈರಿಂಗ್‌ ಮಾಡುವಾಗ ಬುಕ್ಕಿಗಳ ಜತೆ ಸಂಪರ್ಕ ಸಾಧಿಸಿ ಮೋಸದಾಟಕ್ಕೆ ನೆರವು ಕೊಟ್ಟಿದ್ದರು. ಅದು ಬಯಲಾದ ಬಳಿಕ ಬಿಸಿಸಿಐ 2016ರಲ್ಲಿ ಅಸಾದ್‌ಗೆ ನಿಷೇಧ ಹೇರಿತ್ತು. ಈ ಬಗ್ಗೆ ಐಸಿಸಿಯಲ್ಲೂ ದೂರು ದಾಖಲಿಸಿತ್ತು. ತನಿಖೆ ನಡೆಸಿದ ಐಸಿಸಿ ಮೋಸದಾಟ ಸಾಬೀತಾದ ಹಿನ್ನೆಲೆಯಲ್ಲಿ ಅಸಾದ್‌ ಅವರನ್ನು ಅಂಪೈರ್‌ ಪ್ಯಾನೆಲ್‌ನಿಂದ ತೆಗೆದು ಹಾಕಿತ್ತು. ಈ ರೀತಿಯಾಗಿ ಆಮಿಷಕ್ಕೆ ಒಳಗಾಗಿ ಸಿಕ್ಕಿ ಬಿದ್ದ ಅಸಾದ್‌ ರವೂಫ್‌ ಕ್ರಿಕೆಟ್‌ ಕ್ಷೇತ್ರದ ಗೌರವಯುತ ಹುದ್ದೆಯನ್ನು ಕಳೆದುಕೊಂಡಿದ್ದರು.

ಲಾಹೋರ್ ಮೂಲದ ಈ ಆಟಗಾರನಿಗೆ ಅಂಪೈರ್‌ ವೃತ್ತಿ ನಷ್ಟ ಮಾಡಿಕೊಂಡ ಬಳಿಕ ಜೀವನೋಪಾಯಕ್ಕೆ ಒಂದು ದಾರಿ ಬೇಕಾಗಿತ್ತು. ಹೀಗಾಗಿ ಅವರು ಲಾಹೋರ್‌ನ ಲಂಡಾ ಬಜಾರ್‌ನಲ್ಲಿ ಸೆಕೆಂಡ್‌ ಹ್ಯಾಂಡ್ ವಸ್ತುಗಳ ಅಂಗಡಿ ಇಟ್ಟುಕೊಂಡಿದ್ದಾರೆ.

ಅಸಾದ್‌ ಅವರ ಅಂಗಡಿಗೆ ಭೇಟಿ ನೀಡಿದ್ದ ಪಾಕಿಸ್ತಾನದ ಪಾಕ್‌ ಟಿವಿ ಸಂದರ್ಶನ ಮಾಡಿತ್ತು. ಈ ವೇಳೆ ಅವರು ಮತ್ತೆಂದೂ ಕ್ರಿಕೆಟ್ ಕ್ಷೇತ್ರಕ್ಕೆ ಕಾಲಿಡುವುದಿಲ್ಲ ಎಂದು ಹೇಳಿದ್ದಾರೆ.

“ಹಲವಾರು ಪಂದ್ಯಗಳಿಗೆ ನಾನು ಅಂಪೈರಿಂಗ್‌ ಮಾಡಿದ್ದೇನೆ. ಈಗ ಕ್ರೀಡೆಯ ಜತೆಗಿನ ಸಂಪರ್ಕ ಕಡಿದುಕೊಂಡಿದ್ದೇನೆ. ಇನ್ನೇನೂ ಉಳಿದಿಲ್ಲ,” ಎಂದು ಟಿವಿ ಸಂದರ್ಶದಲ್ಲಿ ಅವರು ಹೇಳಿದ್ದಾರೆ.

೨೦೧೩ರಿಂದ ನಾನು ಕ್ರಿಕೆಟ್‌ನಿಂದ ಸಂಪರ್ಕ ಕಳೆದುಕೊಂಡಿದ್ದೇನೆ. ಒಂದು ಬಾರಿ ಅವಕಾಶ ಕಳೆದುಕೊಂಡು ಕ್ಷೇತ್ರಕ್ಕೆ ಮತ್ತೆಂದೂ ಹೋಗುವುದಿಲ್ಲ,” ಎಂದು ಅಸಾದ್‌ ಹೇಳಿದ್ದಾರೆ.

“ನನ್ನ ಕುರಿತು ಮಹಿಳೆಯೊಬ್ಬರು ದೂರು ನೀಡಿದ ನಂತರದ ಆವೃತ್ತಿಯಲ್ಲೂ ನಾನು ಅಂಪೈರಿಂಗ್‌ ಮಾಡಿದ್ದೇನೆ. ೨೦೧೬ರಲ್ಲಿ ಬಿಸಿಸಿಐ ನನ್ನ ಮೇಲೆ ನಿಷೇಧ ಹೇರಿತು. ಈ ಬಗ್ಗೆ ನನಗೆ ಯಾವುದೇ ಬೇಸರವಿಲ್ಲ. ಅಂತೆಯೇ ಕ್ರಿಕೆಟ್‌ ಆಡುವ ವೇಳೆ ಮತ್ತು ನಂತರದ ದಿನಗಳಲ್ಲಿ ನಾನು ಸಾಕಷ್ಟು ಹಣವನ್ನು ನೋಡಿದ್ದೇನೆ. ಹೀಗಾಗಿ ಈ ವ್ಯಾಪಾರ ಮಾಡುವುದಕ್ಕೆ ನನಗೆ ಯಾವುದೇ ಬೇಸರವಿಲ್ಲ,” ಎಂದು ಅಸಾದ್‌ ಹೇಳಿದ್ದಾರೆ.

ಲಂಡಾ ಬಜಾರ್‌ ಹಳೆ ವಸ್ತುಗಳಿಗೆ ಜನಪ್ರಿಯ

ಅಸಾದ್ ಅವರ ಅಂಗಡಿಯಲ್ಲಿ ಹಳೆ ಪ್ಯಾಂಟ್, ಶರ್ಟ್‌ಗಳು, ಗೊಂಬೆಗಳು ಸೇರಿದಂತೆ ಬಳಸಿದ ಸಾಕಷ್ಟು ವಸ್ತುಗಳಿವೆ. ಲಾಹೋರ್‌ನ ಲಂಡಾ ಬಜಾರ್‌ ಹಳೆಯ ವಸ್ತುಗಳ ಮಾರಾಟದ ಅಂಗಡಿಗಳಿಗೆ ಜನಪ್ರಿಯ. ಜನರು ಹಳೆ ವಸ್ತುಗಳನ್ನು ಹುಡುಕಿಕೊಂಡ ಇಲ್ಲಿಗೆ ಬರುವ ಜತೆಗೆ ಬೇರೆ ವಸ್ತುಗಳ ಜತೆ ವಿನಿಮಯ ಕೂಡ ಮಾಡಿಕೊಳ್ಳುತ್ತಾರೆ.

ಇನ್ನೂ ಇದೆ| IPL2022| ಅಂಪೈರ್‌ ʼನೋಬಾಲ್‌ʼ ನೀಡಿಲ್ಲ;ರೊಚ್ಚಿಗೆದ್ದ ರಿಷಭ್

Exit mobile version