Site icon Vistara News

ICC Men’s Test Team Rankings: ಅಗ್ರಸ್ಥಾನದಿಂದ ಕುಸಿತ ಕಂಡ ಭಾರತ; ವಿಶ್ವ ಚಾಂಪಿಯನ್​ ಆಸೀಸ್​ ನಂ.1

icc men's test team rankings

ದುಬೈ: ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ಐಸಿಸಿ(ICC Men’s Test Team Rankings) ವಾರ್ಷಿಕ ಪರಿಷ್ಕರಣೆ ಮಾಡಿದ್ದು, ಈ ಮೊದಲು ಅಗ್ರಸ್ಥಾನದಲ್ಲಿದ್ದ ಭಾರತ ಒಂದು ಸ್ಥಾನಗಳ ಕುಸಿತ ಕಂಡು ಎರಡನೇ ಸ್ಥಾನಕ್ಕೆ ಜಾರಿದೆ. ಎರಡನೇ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಮೊದಲ ಸ್ಥಾನಕ್ಕೇರಿದೆ. ಇಂಗ್ಲೆಂಡ್ (105), ದಕ್ಷಿಣ ಆಫ್ರಿಕಾ (103), ನ್ಯೂಜಿಲ್ಯಾಂಡ್​ (96), ಪಾಕಿಸ್ತಾನ (89), ಶ್ರೀಲಂಕಾ (83), ವೆಸ್ಟ್ ಇಂಡೀಸ್ (82) ಮತ್ತು ಬಾಂಗ್ಲಾದೇಶ (53) ಈ ಹಿಂದಿನ ಸ್ಥಾನದಲ್ಲೇ ಮುಂದುವರಿದೆ.

ನೂತನ ಶ್ರೇಯಾಂಕ ಪಟ್ಟಿ ಪ್ರಕಾರ ಆಸ್ಟ್ರೇಲಿಯಾ 124 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಭಾರತ 120 ಅಂಕದೊಂದಿದೆ 2ನೇ ಸ್ಥಾನಿಯಾಗಿದೆ. ಕಳೆದ ವರ್ಷ ಓವಲ್‌ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್​ನಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತ್ತು. ಆಸ್ಟ್ರೇಲಿಯಾ 209 ರನ್‌ಗಳ ಗೆಲುವು ಸಾಧಿಸಿತ್ತು. ಇದೇ ಕಾರಣದಿಂದ ಆಸೀಸ್​ ತಂಡ ಅಗ್ರಸ್ಥಾನಕ್ಕೇರಿದೆ. ಈ ನೂತನ ಶ್ರೇಯಾಂಕಗಳ ನವೀಕರಣವು ಮೇ 2021 ರ ನಂತರ ತಂಡಗಳ ಪ್ರದರ್ಶನಗಳನ್ನು ಪರಿಗಣಿಸುತ್ತದೆ.


ಟಾಪ್​ 10 ತಂಡಗಳು


1.ಆಸ್ಟ್ರೇಲಿಯಾ- 30 ಪಂದ್ಯ, 124 ರೇಟಿಂಗ್​ ಅಂಕ

2. ಭಾರತ-26 ಪಂದ್ಯ, 120 ರೇಟಿಂಗ್​ ಅಂಕ

3. ಇಂಗ್ಲೆಂಡ್​- 30 ಪಂದ್ಯ, 105 ರೇಟಿಂಗ್​ ಅಂಕ

4. ದಕ್ಷಿಣ ಆಫ್ರಿಕಾ-18 ಪಂದ್ಯ, 103 ರೇಟಿಂಗ್​ ಅಂಕ

5. ನ್ಯೂಜಿಲ್ಯಾಂಡ್​-22 ಪಂದ್ಯ, 96 ರೇಟಿಂಗ್​ ಅಂಕ

6. ಪಾಕಿಸ್ತಾನ-17 ಪಂದ್ಯ, 89 ರೇಟಿಂಗ್​ ಅಂಕ

7. ಶ್ರೀಲಂಕಾ-18 ಪಂದ್ಯ, 83 ರೇಟಿಂಗ್​ ಅಂಕ

8. ವೆಸ್ಟ್​ ಇಂಡೀಸ್​-19 ಪಂದ್ಯ, 82 ರೇಟಿಂಗ್​ ಅಂಕ

9. ಬಾಂಗ್ಲಾದೇಶ-17 ಪಂದ್ಯ, 53 ರೇಟಿಂಗ್​ ಅಂಕ

10. ಜಿಂಬಾಬ್ವೆ-2 ಪಂದ್ಯ, 23 ರೇಟಿಂಗ್​ ಅಂಕ

ಇದನ್ನೂ ಓದಿ IPL 2024 Points Table: ರೋಚಕ 1 ರನ್ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಹೈದರಾಬಾದ್​

ಅಗ್ರಸ್ಥಾನದಲ್ಲೇ ಮುಂದುವರಿದ ಸೂರ್ಯ


ಬುಧವಾರ ಪ್ರಕಟಗೊಂಡಿದ್ದ ಐಸಿಸಿ ನೂತನ ಟಿ20(T20 Rankings) ಬ್ಯಾಟಿಂಗ್​ ಶ್ರೇಯಾಂಕ ಪಟ್ಟಿಯಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್​ ಅಜಂ(babar azam) ಒಂದು ಸ್ಥಾನಗಳ ಪ್ರಗತಿ ಸಾಧಿಸಿದ್ದರು. ಟೀಮ್​ ಇಂಡಿಯಾದ ಸೂರ್ಯಕುಮಾರ್​ ಯಾದವ್(861 ರೇಟಿಂಗ್​ ಅಂಕ)​ ತಮ್ಮ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.

ಬಾಬರ್​ ನ್ಯೂಜಿಲ್ಯಾಂಡ್​ ವಿರುದ್ಧದ ತವರಿನ ಟಿ20 ಪಂದ್ಯದಲ್ಲಿ ಆಡಿದ ನಾಲ್ಕು ಇನಿಂಗ್ಸ್​ಗಳಿಂದ ಒಂದು ಅರ್ಧಶತಕ ಮತ್ತು ಒಳಗೊಂಡಂತೆ ಒಟ್ಟು 125 ರನ್​ ಬಾರಿಸಿದ್ದರು. ಇದು ಬ್ಯಾಟರ್‌ಗಳಿಗಾಗಿ ನವೀಕರಿಸಿದ ಟಿ20 ಶ್ರೇಯಾಂಕಗಳ ಪಟ್ಟಿಯಲ್ಲಿ ಬಾಬರ್ ಒಂದು ಸ್ಥಾನವನ್ನು ಸುಧಾರಿಸಲು ನೆರವಾಯಿತು. ಬಾಬರ್​ 10 ರೇಟಿಂಗ್​ ಅಂಗಳ ಪ್ರಗತಿಯೊಂದಿಗೆ ಸದ್ಯ 763 ರೇಟಿಂಗ್​ ಅಂಕ ಗಳಿಸಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಸರಿ ಸುಮಾರು ಒಂದು ವರ್ಷಕ್ಕಿಂತಲೂ ಅಧಿಕವಾಗಿ ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿ ನಂ.1 ಸ್ಥಾನ ಕಾಯ್ದುಕೊಂಡಿರುವ ಟೀಮ್​ ಇಂಡಿಯಾದ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್​(suryakumar yadav) ಈ ಬಾರಿಯೂ ಅಗ್ರಸ್ಥಾನದಲ್ಲೇ ಮುಂದುವರಿಸಿದ್ದಾರೆ. ಆಸೀಸ್​ ವಿರುದ್ಧದ ಟಿ20 ಸರಣಿಯಲ್ಲಿ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅವರು ತಮ್ಮ ಚೊಚ್ಚಲ ನಾಯಕತ್ವದಲ್ಲ ಭಾರತಕ್ಕೆ ಟಿ20 ಸರಣಿಯನ್ನು ಗೆದ್ದು ಕೊಟ್ಟ ಸಾಧನೆ ಮಾಡಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಗಾಯಗೊಂಡು ಬಳಿಕ ಯಾವುದೇ ಸರಣಿ ಆಡಿಲ್ಲ. ಇದೇ ಜೂನ್​ನಲ್ಲಿ ನಡೆಯುವ ಟಿ20 ವಿಶ್ವಕಪ್​ ಕಪ್​ ಮೂಲಕ ಮತ್ತೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಲಿದ್ದಾರೆ.

Exit mobile version