Site icon Vistara News

ICC Odi Ranking: ರೋಹಿತ್​ ಹಿಂದಿಕ್ಕಿದ ಕೊಹ್ಲಿ; ನಂ.1 ಸ್ಥಾನಕ್ಕೆ ಬಾಬರ್​-ಗಿಲ್ ಮಧ್ಯೆ​ ಪೈಪೋಟಿ

Virat Kohli broke into the top 5 once again

ದುಬೈ: ಐಸಿಸಿ ನೂತನ ಏಕದಿನ(ICC Odi Ranking) ಬ್ಯಾಟಿಂಗ್​ ಶ್ರೇಯಾಂಕದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(747 ರೇಟಿಂಗ್​ ಅಂಕ) ಅವರು ಉತ್ತಮ ಪ್ರಗತಿ ಸಾಧಿಸಿದ್ದಾರೆ. ನಾಯಕ ರೋಹಿತ್​ ಶರ್ಮ(Rohit Sharma)(725 ರೇಟಿಂಗ್​ ಅಂಕ) ಅವರನ್ನು ಹಿಂದಿಕ್ಕಿ 5ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಕೊಹ್ಲಿ(virat kohli) 8ನೇ ಸ್ಥಾನದಲ್ಲಿದ್ದರು. 

ಕಳೆದ ವಾರ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ ರೋಹಿತ್​ ಶರ್ಮ ಅವರು 5 ಸ್ಥಾನಗಳ ಏರಿಕೆ ಕಂಡು 6ನೇ ಸ್ಥಾನಕ್ಕೇರಿದ್ದರು. ಆದರೆ ಈಗ ಪ್ರಕಟಗೊಂಡ ಶ್ರೇಯಾಂಕ ಪಟ್ಟಿಯಲ್ಲಿ 2 ಸ್ಥಾನಗಳ ಕುಸಿತ ಕಂಡು 8ನೇ ಸ್ಥಾನ ಪಡೆದಿದ್ದಾರೆ. ಆದರೆ ರೇಟಿಂಗ್​ ಅಂಕ ಸುಧಾರಣೆ ಕಂಡಿದೆ. ವಿರಾಟ್​ ಕೊಹ್ಲಿ ಮತ್ತು ಆಸ್ಟ್ರೇಲಿಯಾದ ಸ್ಟಾರ್​ ಎಡಗೈ ಬ್ಯಾಟರ್​ ಡೇವಿಡ್​ ವಾರ್ನರ್​ ಅವರು ತಲಾ 747 ರೇಟಿಂಗ್​ ಅಂಕದೊಂದಿಗೆ ಜಂಟಿಯಾಗಿ 5ನೇ ಸ್ಥಾನ ಹಂಚಿಕೊಂಡಿದ್ದಾರೆ. ಕೊಹ್ಲಿ ಸದ್ಯ ಆಡಿದ 5 ಪಂದ್ಯಗಳಿಂದ 354 ರನ್​ ಬಾರಿಸಿದ್ದಾರೆ.

ನಂ.1 ಸ್ಥಾನಕ್ಕಾಗಿ ಟೀಮ್​ ಇಂಡಿಯಾದ ಯುವ ಬ್ಯಾಟರ್​ ಶುಭಮನ್​ ಗಿಲ್​ ಮತ್ತು ಪಾಕ್​ ನಾಯಕ ಬಾಬರ್​ ಅಜಂ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯಕ್ಕೆ ಬಾಬರ್​ ಅಗ್ರಸ್ಥಾನದಲ್ಲಿದ್ದಾರೆ. ಪಚಂಡ ಬ್ಯಾಟಿಂಗ್​ ನಡೆಸುತ್ತಿರುವ ದಕ್ಷಿಣ ಆಫ್ರಿಕಾ ತಂಡದ ಹೆನ್ರಿಚ್​ ಕ್ಲಾಸೆನ್(756)​ ಅವರು 4 ಸ್ಥಾನಗಳ ಏರಿಕೆ ಕಂಡು ನಾಲ್ಕನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಮೂರು ಶತಕ ಬಾರಿಸಿದ ಕ್ವಿಂಟನ್​ ಡಿ ಕಾಕ್ ಮೂರು ಸ್ಥಾನಗಳ ಏರಿಕೆ ಕಂಡು 3ನೇ ಸ್ಥಾನ ಅಲಂಕರಿಸಿದ್ದಾರೆ. ಡಿ ಕಾಕ್​ 5 ಪಂದ್ಯಗಳಿಂದ 407 ರನ್​ ಬಾರಿಸಿ ಸದ್ಯ ವಿಶ್ವಕಪ್​ನಲ್ಲಿ ಅತ್ಯಧಿಕ ರನ್​ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ ಪಾಕ್​ ವಿರುದ್ಧ ಗೆಲುವು; ಕ್ಯಾಬ್​ನಲ್ಲಿ ಲುಂಗಿ ಡ್ಯಾನ್ ಮಾಡಿ ಸಂಭ್ರಮಿಸಿದ ಆಫ್ಘನ್​ ಆಟಗಾರರು

ಅಗ್ರಸ್ಥಾನದ ಸನಿಹ ಗಿಲ್

ಕಳೆದ ವಾರ 4ನೇ ಸ್ಥಾನ​ದಲ್ಲಿದ್ದ ರಸ್ಸಿ ವಾನ್​ ಡರ್​ ಡುಸ್ಸೆನ್ 4 ಸ್ಥಾನಗಳ ಕುಸಿತ ಕಂಡು 9ನೇ ಸ್ಥಾನ ಪಡೆದಿದ್ದಾರೆ.​ ದ್ವಿತೀಯ ಸ್ಥಾನದಲ್ಲಿರುವ ಶುಭಮನ್​ ಗಿಲ್​ ಅವರು 823 ರೇಟಿಂಗ್​ ಅಂಕ ಪಡೆದಿದ್ದಾರೆ. ಅಗ್ರಸ್ಥಾನ ಪಡೆದಿರುವ ಪಾಕ್​ ನಾಯಕ ಬಾಬರ್​ ಅಜಂ ಅವರ ಅಂಕವನ್ನು ಮೀರಿ ನಿಲ್ಲಲು ಕೇವಲ 7 ಅಂಕ ಬೇಕಿದೆ. ಗಿಲ್​ ಮುಂದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್​ ತೋರ್ಪಡಿಸಿದರೆ ಅಗ್ರಸ್ಥಾನಕ್ಕೇರುವ ಅವಕಾಶ ಅವರ ಮುಂದಿದೆ. ಡೆಂಗ್ಯೂ ಜ್ವರದಿಂದ ಅವರು ಮೊದಲ ಎರಡು ಪಂದ್ಯಗಳಿಗೆ ಅಲಭ್ಯರಾಗಿದ್ದರು. ಇಲ್ಲವಾದರೆ ಈಗಾಗಲೇ ಗಿಲ್​ ಅಗ್ರಸ್ಥಾನ ಪಡೆಯುತ್ತಿದ್ದರು.

ಒಂದು ಸ್ಥಾನ ಪ್ರಗತಿ ಕಂಡ ಸಿರಾಜ್​

ಟೀಮ್​ ಇಂಡಿಯಾದ ವಿಕೆಟ್​ ಟೇಕರ್​ ಬೌಲರ್​ ಮೊಹಮ್ಮದ್​ ಸಿರಾಜ್​ ಅವರು ಬೌಲಿಂಗ್​ ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಕಳೆದ ವಾರ ಅವರು ಮೂರನೇ ಸ್ಥಾನ ಪಡೆದಿದ್ದರು. ಆಸ್ಟ್ರೇಲಿಯಾದ ವೇಗಿ ಜೋಶ್​ ಹ್ಯಾಜಲ್​ವುಡ್​ 670 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನ ಪಡೆದಿದ್ದಾರೆ. 659 ಅಂಕ ಪಡೆದು ದ್ವಿತೀಯ ಸ್ಥಾನದಲ್ಲಿದ್ದ ಕಿವೀಸ್​ನ ಟ್ರೆಂಟ್​ ಬೌಲ್ಟ್​ ಈ ಬಾರಿ 653 ಅಂಕದೊಂದಿಗೆ 5ನೇ ಸ್ಥಾನಕ್ಕೆ ಜಾರಿದ್ದಾರೆ. ಕುಲ್​ದೀಪ್​ ಯಾದವ್(632 ರೇಟಿಂಗ್​ ಅಂಕ) ಕೂಡ​ ಒಂದು ಸ್ಥಾನ ಕುಸಿತ ಕಂಡು 9ನೇ ಸ್ಥಾನ ಪಡೆದಿದ್ದಾರೆ.

Exit mobile version