Site icon Vistara News

Icc Odi Ranking | ಏಕದಿನ ರ‍್ಯಾಂಕಿಂಗ್‌; ನಂ. 1 ಸ್ಥಾನದಿಂದ ಕೆಳಗಿಳಿದ ವಿಶ್ವ ಚಾಂಪಿಯನ್​ ಇಂಗ್ಲೆಂಡ್​

england odi cricket

ದುಬೈ: ಆಸ್ಟ್ರೇಲಿಯಾ ವಿರುದ್ಧದ ಏಕದಿನ ಕ್ರಿಕೆಟ್​ ಸರಣಿಯನ್ನು 3-0 ಅಂತರದಿಂದ ಹೀನಾಯವಾಗಿ ಸೋತ ಇಂಗ್ಲೆಂಡ್‌ ತಂಡ ನೂತನ ಐಸಿಸಿ ಏಕ ದಿನ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನವನ್ನು ಕಳೆದುಕೊಂಡಿದೆ. ನ್ಯೂಜಿಲ್ಯಾಂಡ್​ ತಂಡ ಮತ್ತೆ ನಂ.1 ಸ್ಥಾನ ವಶಪಡಿಸಿಕೊಂಡಿದೆ.​

ಕಳೆದ ಎರಡು ವರ್ಷಗಳಿಂದ ನ್ಯೂಜಿಲ್ಯಾಂಡ್‌ ಮತ್ತು ಇಂಗ್ಲೆಂಡ್‌ ನಡುವೆ ಅಗ್ರ ಸ್ಥಾನಕ್ಕಾಗಿ ತೀವ್ರ ಸ್ಪರ್ಧೆ ಏರ್ಪಟ್ಟಿತ್ತು. 2021ರ ಮೇ ತಿಂಗಳಲ್ಲಿ ಅಗ್ರಸ್ಥಾನಕ್ಕೇರಿದ್ದ ನ್ಯೂಜಿಲ್ಯಾಂಡ್‌ 2022ರ ಸೆಪ್ಟಂಬರ್‌ ತನಕ ನಂಬರ್‌ ವನ್‌ ಸ್ಥಾನವನ್ನು ಅಲಂಕರಿಸಿತ್ತು. ಬಳಿಕ ಇಂಗ್ಲೆಂಡ್​ ಈ ಸ್ಥಾನವನ್ನು ವಶಪಡಿಸಿಕೊಂಡಿತ್ತು. ಇದೀಗ ಮತ್ತೆ ಕಿವೀಸ್​ ಅಗ್ರಸ್ಥಾನವನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ.

ಹಾಲಿ ಏಕದಿನ ವಿಶ್ವ ಚಾಂಪಿಯನ್‌ ಆಗಿರುವ ಇಂಗ್ಲೆಂಡ್‌ ತಂಡ ಆಸ್ಟ್ರೇಲಿಯಾ ವಿರುದ್ಧದ ಸರಣಿ ಮೊದಲು 119 ಅಂಕ ಹೊಂದಿತ್ತು. ಇದೀಗ ಸರಣಿ ಸೋತ ಕಾರಣ ಆರು ಅಂಕದ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಜಾರಿದೆ. ಆಸ್ಟ್ರೇಲಿಯಾ ಮತ್ತು ಭಾರತ ತಲಾ 112 ಅಂಕ ಹೊಂದಿದೆ. ಆದರೆ ಸಮಗ್ರ ಅಂಕಗಳ ಆಧಾರದಲ್ಲಿ ಭಾರತ 3ನೇ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನ ಪಡೆದಿದೆ.

ಭಾರತಕ್ಕಿದೆ ನಂ.1 ಸ್ಥಾನಕ್ಕೇರುವ ಅವಕಾಶ

ಸದ್ಯ ಮೂರನೇ ಸ್ಥಾನದಲ್ಲಿರುವ ಭಾರತ ತಂಡಕ್ಕೆ ಅಗ್ರ ಸ್ಥಾನಕ್ಕೇರುವ ಅವಕಾಶವಿದೆ. ಇದಕ್ಕಾಗಿ ನ್ಯೂಜಿಲ್ಯಾಂಡ್​ ವಿರುದ್ಧದ 3 ಪಂದ್ಯಗಳ ಏಕ ದಿನ ಸರಣಿಯನ್ನು ಗೆಲ್ಲಬೇಕಿದೆ. ಸದ್ಯ 113 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಮೊದಲನೇ ಸ್ಥಾನದಲ್ಲಿರುವ ಕಿವೀಸ್​ ತಂಡವನ್ನು ಮಣಿಸುವಲ್ಲಿ ಟೀಮ್​ ಇಂಡಿಯಾ ಮೇಲುಗೈ ಸಾಧಿಸಿದರೆ 6 ಅಂಕಗಳನ್ನು ಕಲೆಹಾಕುವುದರೊಂದಿಗೆ ಒಟ್ಟು 118 ರೇಟಿಂಗ್ ಪಾಯಿಂಟ್​ಗಳೊಂದಿಗೆ ಮೊದಲ ಸ್ಥಾನಕ್ಕೆ ಏರಲಿದೆ.

ಇದನ್ನೂ ಓದಿ | IND VS BANGLA | ಬಾಂಗ್ಲಾ ಸರಣಿಗೆ ಭಾರತ ತಂಡ ಪ್ರಕಟ; ರವೀಂದ್ರ ಜಡೇಜಾ ಅಲಭ್ಯ

Exit mobile version