Site icon Vistara News

ICC Odi Ranking: ಏಕದಿನ ಶ್ರೇಯಾಂಕದಲ್ಲಿ ಜೀವನ ಶ್ರೇಷ್ಠ ಪ್ರಗತಿ ಸಾಧಿಸಿದ ಶುಭಮನ್‌ ಗಿಲ್‌

shubman gill health update

ದುಬೈ: ವೆಸ್ಟ್‌ಇಂಡೀಸ್‌ ವಿರುದ್ಧದ ಏಕದಿನ ಸರಣಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಭಾರತ ತಂಡದ ಯುವ ಆಟಗಾರರು ಐಸಿಸಿ ಶ್ರೇಯಾಂಕ ಪಟ್ಟಿಯಲ್ಲಿ(ICC Odi Ranking) ಪ್ರಗತಿ ಸಾಧಿಸಿದ್ದಾರೆ. ಆರಂಭಿಕ ಆಟಗಾರ ಶುಭಮನ್‌ ಗಿಲ್‌(Shubman Gill) ನೂತನ ಬ್ಯಾಟಿಂಗ್‌ ಶ್ರೇಯಾಂಕದಲ್ಲಿ ತನ್ನ ಜೀವನ ಶ್ರೇಷ್ಠ 5ನೇ ಸ್ಥಾನಕ್ಕೇರಿದ್ದಾರೆ. ಇಶಾನ್​ ಕಿಶನ್(Ishan Kishan) 9 ಸ್ಥಾನ ಮೇಲಕ್ಕೇರಿ 36ನೇ ಸ್ಥಾನ ಪಡೆದಿದ್ದಾರೆ.

ವೆಸ್ಟ್​ ಇಂಡೀಸ್​ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಗಿಲ್​ 85 ರನ್‌ ಸಹಿತ ಒಟ್ಟಾರೆ ಮೂರು ಪಂದ್ಯಗಳಿಂದ 126 ರನ್‌ ಗಳಿಸಿದ್ದರು. ಇದೇ ಕಾರಣದಿಂದ 743 ರೇಟಿಂಗ್‌ ಅಂಕಗಳೊಂದಿಗೆ ಐದನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ(Babar Azam) 886 ಅಂಕ ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ.

ಟಾಪ್​ 5ರಲ್ಲಿ ಮೂವರು ಪಾಕ್​ ಆಟಗಾರರು

ಬ್ಯಾಟಿಂಗ್​ ಶ್ರೇಯಾಂಕ ಪಟ್ಟಿಯಲ್ಲಿ ಟಾಪ್​ 5ರೊಳಗೆ ಪಾಕಿಸ್ತಾನದ ಒಟ್ಟು ಮೂರು ಮಂದಿ ಆಟಗಾರರು ಪ್ರಾಬಲ್ಯ ಮೆರೆದಿದ್ದಾರೆ. ಬಾಬರ್​ ಅಜಂ ಅಗ್ರಸ್ಥಾನದಲ್ಲಿದ್ದರೆ, ಫಖಾರ್​ ಜಮಾನ್​(755 ರೇಟಿಂಗ್​ ಅಂಕ), ಇಮಾಮ್​ ಉಲ್​-ಹಕ್​(745 ರೇಟಿಂಗ್​ ಅಂಕ) ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಇಮಾಮ್‌ ಉಲ್‌ ಹಕ್‌ ಅವರು ಶುಭಮನ್​ ಗಿಲ್​ ಅವರಿಗಿಂತ ಕೇವಲ ಎರಡಂಕ ಮುಂದಿದ್ದಾರೆ.

ಟಾಪ್​ 10ನಲ್ಲಿ ಇಬ್ಬರೇ ಭಾರತೀಯರು

ಶುಭಮನ್​ ಗಿಲ್​ ಅವರನ್ನು ಹೊರತುಪಡಿಸಿ ಅಗ್ರ 10ರೊಳಗೆ ಸ್ಥಾನ ಪಡೆದಿರುವ ಭಾರತೀಯ ಆಟಗಾರನೆಂದರೆ ಅದು ವಿರಾಟ್​ ಕೊಹ್ಲಿ. ವಿಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಆಡದ ಕಾರಣ ಕೊಹ್ಲಿ ಸದ್ಯ 705 ಅಂಕಗಳೊಂದಿಗೆ 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಮ್​ ಇಂಡಿಯಾದ ನಾಯಕ ರೋಹಿತ್​ ಶರ್ಮ(693) 11ನೇ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ ICC Wtc Points Table: ದಂಡ ಬಿದ್ದ ಪರಿಣಾಮ ವಿಶ್ವ ಟೆಸ್ಟ್​ ಅಂಕಪಟ್ಟಿಯಲ್ಲಿ ಕುಸಿತ ಕಂಡ ಇಂಗ್ಲೆಂಡ್,ಆಸೀಸ್​

ಕುಲ್​ದೀಪ್​ ಉತ್ತಮ ಪ್ರಗತಿ

ಹಲವು ಸರಣಿಗಳ ಬಳಿಕ ವಿಂಡೀಸ್​ ಪ್ರವಾಸದಲ್ಲಿ ಅವಕಾಶ ಲಭಿಸಿದ ಕುಲ್​ದೀಪ್​ ಯಾದವ್​ ಬೌಲರ್‌ಗಳ ಪಟ್ಟಿಯಲ್ಲಿ ಉತ್ತಮ ಏರಿಕೆ ಕಂಡಿದ್ದಾರೆ. ಮೂರು ಪಂದ್ಯಗಳಿಂದ 7 ವಿಕೆಟ್‌ ಪಡೆದಿರುವ ಕುಲದೀಪ್‌ ನೂತನ ಶ್ರೇಯಾಂಕದಲ್ಲಿ 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಶಾರ್ದೂಲ್​ ಠಾಕೂರ್ ಕೂಡ ಏರಿಕೆ ಕಂಡಿದ್ದು​ 30ನೇ ಸ್ಥಾನದಲ್ಲಿದ್ದಾರೆ. ಮೊಹಮ್ಮದ್​ ಸಿರಾಜ್​ 670 ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾದ ಜೋಶ್​ ಹ್ಯಾಜಲ್​ವುಡ್​ ಅಗ್ರಸ್ಥಾ ಅಲಂಕರಿಸಿದ್ದಾರೆ.

ಆಲ್​ರೌಂಡರ್​ಗಳ ಪಟ್ಟಿಯಲ್ಲಿ ಟಾಪ್​ 10ನಲ್ಲಿ ಯಾವೊಬ್ಬ ಭಾರತೀಯ ಆಟಗಾರನು ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ. ಬಾಂಗ್ಲಾದೇಶ ತಂಡ ಹಿರಿಯ ಅನುಭವಿ ಆಟಗಾರ ಶಕಿಬ್​ ಅಲ್​ ಹಸನ್​ ಅಗ್ರಸ್ಥಾ ಪಡೆದಿದ್ದಾರೆ. ಜಿಂಬಾಬ್ವೆ ತಂಡದ ಸಿಕಂದರ್​ ರಾಜಾ 287 ರೇಟಿಂಗ್​ ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ. ಹಾರ್ದಿಕ್​ ಪಾಂಡ್ಯ 5 ಸ್ಥಾನಗಳ ಜಿಗಿತ ಕಂಡು 11ನೇ ಸ್ಥಾನದಲ್ಲಿದ್ದಾರೆ.

Exit mobile version