Site icon Vistara News

ICC ODI Rankings: ನ್ಯೂಜಿಲ್ಯಾಂಡ್​ ವಿರುದ್ಧ ಅಂತಿಮ ಏಕದಿನ ಪಂದ್ಯ ಗೆದ್ದರೆ ಭಾರತಕ್ಕೆ ನಂ.1 ಶ್ರೇಯಾಂಕ

ICC ODI Rankings

ದುಬೈ: ಆತಿಥೇಯ ಭಾರತ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಈಗಾಗಲೇ 2 ಪಂದ್ಯಗಳನ್ನು ಸೋತಿರುವ ನ್ಯೂಜಿಲ್ಯಾಂಡ್​ ಸರಣಿ ಸೋಲು ಕಂಡಿದೆ. ಇದೀಗ ಕಿವೀಸ್​ ಈ ಸೋಲಿನಿಂದ ಐಸಿಸಿ(ICC ODI Rankings) ಏಕದಿನ ಶ್ರೇಯಾಂಕದಲ್ಲಿ ಹಿನ್ನಡೆ ಅನುಭವಿಸಿದೆ. ಮೊದಲ ಸ್ಥಾನದಿಂದ ದ್ವಿತೀಯ ಸ್ಥಾನಕ್ಕೆ ಜಾರಿದೆ.

ರಾಯ್​ಪುರದಲ್ಲಿ ನಡೆದ ದ್ವಿತೀಯ ಏಕದಿನ ಪಂದ್ಯದಲ್ಲಿ ಕಿವೀಸ್​ ಕೇವಲ 108 ರನ್​ಗಳಿಗೆ ಆಲೌಟ್​ ಆಗಿ ಹೀನಾಯ ಸೋಲಕಂಡಿತು. ಈ ಸೋಲಿನಿಂದ ನ್ಯೂಜಿಲ್ಯಾಂಡ್ ತಂಡವು ಅಂಕ ಕಳೆದುಕೊಂಡಿದೆ. ಸದ್ಯ ಕಿವೀಸ್​ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ.

ಸದ್ಯ ಭಾರತ, ಇಂಗ್ಲೆಂಡ್ ಮತ್ತು ನ್ಯೂಜಿಲ್ಯಾಂಡ್ ತಂಡಗಳು ತಲಾ 113 ಅಂಕಗಳನ್ನು ಹೊಂದಿದೆ. ಆದರೆ ಪಾಂಯಿಂಟ್​​ ಆಧಾರದಲ್ಲಿ ಇಂಗ್ಲೆಂಡ್ ಮೊದಲ ಸ್ಥಾನ ಪಡೆದಿದೆ. ಭಾರತ ಮೂರನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ 112 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ. 106 ಅಂಕಗಳೊಂದಿಗೆ ಪಾಕಿಸ್ಥಾನವು ಐದನೇ ಸ್ಥಾನದಲ್ಲಿದೆ.

ಭಾರತಕ್ಕಿದೆ ಅಗ್ರ ಸ್ಥಾನಕ್ಕೇರುವ ಅವಕಾಶ

ನ್ಯೂಜಿಲ್ಯಾಂಡ್​ ವಿರುದ್ಧದ ಅಂತಿಮ ಏಕದಿನ ಪಂದ್ಯ ಗೆದ್ದರೆ ಟೀಮ್​ ಇಂಡಿಯಾ ಏಕದಿನ ಶ್ರೇಯಾಂಕದಲ್ಲಿ ಅಗ್ರ ಸ್ಥಾನಕ್ಕೇರಲಿದೆ. ಹೀಗಾಗಿ ಭಾರತ ಅಂತಿಮ ಶಕ್ತಿ ಮೀರಿ ಹೋರಾಡಬೇಕಿದೆ. ಸದ್ಯ ಟಿ20ಯಲ್ಲಿ ನಂ.1 ಮತ್ತು ಟೆಸ್ಟ್‌ನಲ್ಲಿ ನಂ.2 ಆಗಿರುವ ಕಾರಣ ಭಾರತಕ್ಕೆ ಮೂರು ಸ್ವರೂಪಗಳಲ್ಲಿ ನಂ.1 ಸ್ಥಾನ ಪಡೆಯುವ ಅವಕಾಶವಿದೆ. 126 ಅಂಕಗಳೊಂದಿಗೆ ಆಸ್ಟ್ರೇಲಿಯಾ ಟೆಸ್ಟ್‌ ನಲ್ಲಿ ನಂ.1 ಸ್ಥಾನದಲ್ಲಿದೆ. 11 ಅಂಕಗಳಿಂದ ಭಾರತ ಹಿಂದಿದೆ. ಫೆಬ್ರವರಿ 9 ರಿಂದ ಭಾರತದಲ್ಲಿ ನಡೆಯಲಿರುವ 4 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ ಆಸೀಸ್​ಗೆ ಸೋಲುಣಿಸಿದರೆ ಟೆಸ್ಟ್​ನಲ್ಲಿಯೂ ಭಾರತ ನಂ.1 ಆಗುವುದ ಅವಕಾಶವಿದೆ.

ಇದನ್ನೂ ಓದಿ | IND VS NZ: ಮೈದಾನಕ್ಕೆ ನುಗ್ಗಿದ ಅಭಿಮಾನಿ; ಗಾಬರಿಯಾದ ರೋಹಿತ್ ಶರ್ಮಾ; ವಿಡಿಯೊ ವೈರಲ್​

Exit mobile version