ದುಬೈ: ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮ(Rohit Sharma) ಅವರು ನೂತನ ಏಕದಿನ ಬ್ಯಾಟಿಂಗ್(ICC ODI Rankings) ಶ್ರೇಯಾಂಕದಲ್ಲಿ 2ನೇ ಸ್ಥಾನಕ್ಕೇರಿದ್ದಾರೆ. ಅಗ್ರ ಸ್ಥಾನದಲ್ಲಿರುವ ಪಾಕಿಸ್ತಾನದ ಬಾಬರ್ ಅಜಂ(Babar Azam) ಅವರಿಗಿಂತ ಕೇವಲ 59 ಅಂಕಗಳ ಹಿನ್ನಡೆಯಲ್ಲಿದ್ದಾರೆ. ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸೆರಣಿಯಲ್ಲಿ ರೋಹಿತ್, 157 ರನ್ ಗಳಿಸಿದ್ದರು. ಇದು ಅವರ ಶ್ರೇಯಾಂಕ ಪ್ರಗತಿಗೆ ಕಾರಣ.
ಈ ಹಿಂದೆ 2ನೇ ಸ್ಥಾನದಲ್ಲಿದ್ದ ಯುವ ಬ್ಯಾಟರ್ ಶುಭಮನ್ ಗಿಲ್(763 ರೇಟಿಂಗ್ ಅಂಕ) ಒಂದು ಸ್ಥಾನಗಳ ಕುಸಿತ ಕಂಡು ಮೂರಕ್ಕೆ ಇಳಿದಿದ್ದಾರೆ. ವಿರಾಟ್ ಕೊಹ್ಲಿ(746 ರೇಟಿಂಗ್ ಅಂಕ) ನಾಲ್ಕನೇ ಸ್ಥಾನಿಯಾಗಿದ್ದಾರೆ. ಒಟ್ಟಾರೆ ಮೂರು ಭಾರತೀಯ ಬ್ಯಾಟರ್ಗಳು ಟಾಪ್ 10ನಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿತೀಯ ಸ್ಥಾನದಲ್ಲಿರುವ ರೋಹಿತ್(765), ಅಗ್ರಸ್ಥಾನಿ ಬಾಬರ್(824) ರೇಟಿಂಗ್ ಅಂಕ ಹೊಂದಿದ್ದಾರೆ. ಲಂಕಾ ಸರಣಿಯ 2 ಪಂದ್ಯಗಳಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಕೆ.ಎಲ್ ರಾಹುಲ್ (644 ರೇಟಿಂಗ್ ಅಂಕ) ಒಂದು ಸ್ಥಾನ ಕುಸಿದು 22ನೇ ಸ್ಥಾನ ಪಡೆದಿದ್ದಾರೆ.
ಚೈನಾಮನ್ ಖ್ಯಾತಿಯ ಸ್ಪಿನ್ನರ್ ಕುಲ್ದೀಪ್ ಯಾದವ್ ಬೌಲಿಂಗ್ ಶ್ರೇಯಾಂಕದಲ್ಲಿ ನಾಲ್ಕನೇ ಸ್ಥಾನ ಪಡೆಯುವ ಮೂಲಕ ಭಾರತದ ಅಗ್ರ ಶ್ರೇಯಾಂಕದ ಏಕದಿನ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ಲಂಕಾ ವಿರುದ್ಧ ಏಕದಿನ ಆಡದ ಜಸ್ಪ್ರೀತ್ ಬುಮ್ರಾ 645 ರೇಟಿಂಗ್ ಅಂಕದೊಂದಿಗೆ 8ನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್, ಆಸ್ಟ್ರೇಲಿಯಾದ ವೇಗಿ ಜೋಶ್ ಹ್ಯಾಜಲ್ವುಡ್ ಮತ್ತು ಆ್ಯಡಂ ಝಂಪಾ ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಆಲ್ರೌಂಡರ್ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜಾ 16ನೇ ಸ್ಥಾನಿಯಾಗಿದ್ದಾರೆ. ಅಫಘಾನಿಸ್ತಾನದ ಹಿರಿಯ ಆಟಗಾರ ಮೊಹಮ್ಮದ್ ನಬಿ ಅಗ್ರಸ್ಥಾನ ಪಡೆದಿದ್ದಾರೆ. ಹಾರ್ದಿಕ್ ಪಾಂಡ 4 ಸ್ಥಾನಗಳ ಕುಸಿತದೊಂದಿಗೆ 27ನೇ ಸ್ಥಾನ ಪಡೆದಿದ್ದಾರೆ. ಲಂಕಾ ವಿರುದ್ಧದ ಏಕದಿನ ಸರಣಿಯನ್ನಾಡುತ್ತಿದ್ದರೆ ಪ್ರಗತಿ ಸಾಧಿಸಬಹುದಿತ್ತು.
ಇದನ್ನೂ ಓದಿ Duleep Trophy 2024: ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ; ಕೊಹ್ಲಿ, ರೋಹಿತ್ ಭಾಗವಹಿಸುವ ನಿರೀಕ್ಷೆ
ಟಾಪ್ 5 ಬ್ಯಾಟರ್ಗಳು
ಬಾಬರ್ ಅಜಂ-ಪಾಕಿಸ್ತಾನ
ರೋಹಿತ್ ಶರ್ಮ-ಭಾರತ
ಶುಭಮನ್ ಗಿಲ್-ಭಾರತ
ವಿರಾಟ್ ಕೊಹ್ಲಿ-ಭಾರತ
ಹ್ಯಾರಿ ಟೆಕ್ಟರ್-ಐರ್ಲೆಂಡ್
ಟಾಪ್ 5 ಬೌಲರ್ಗಳು
ಕೇಶವ್ ಮಹಾರಾಜ್-ದಕ್ಷಿಣ ಆಫ್ರಿಕಾ
ಜೋಶ್ ಹ್ಯಾಜಲ್ವುಡ್-ಆಸ್ಟ್ರೇಲಿಯಾ
ಆ್ಯಡಂ ಜಂಪಾ-ಆಸ್ಟ್ರೇಲಿಯಾ
ಕುಲ್ದೀಪ್ ಯಾದವ್-ಭಾರತ
ಬರ್ನಾರ್ಡ್ ಸ್ಕೋಲ್ಟ್ಜ್-ನಮೀಬಿಯಾ
ಟಾಪ್ 5 ಆಲ್ರೌಂಡರ್
ಮೊಹಮ್ಮದ್ ನಬಿ-ಅಫಘಾನಿಸ್ತಾನ
ಶಕಿಲ್ ಅಲ್ ಹಸನ್-ಬಾಂಗ್ಲಾದೇಶ
ಸಿಕಂದರ್ ರಾಜಾ-ಜಿಂಬಾಬ್ವೆ
ಅಸ್ಸಾದ್ ವಾಲಾ-ಪಪುವಾ ನ್ಯೂಗಿನಿಯಾ
ರಶೀದ್ ಖಾನ್-ಅಫಘಾನಿಸ್ತಾನ