Site icon Vistara News

ICC ODI RANKING | ಏಕಾಏಕಿ 45 ಸ್ಥಾನ ಬಡ್ತಿ ಪಡೆದುಕೊಂಡ ಶುಬ್ಮನ್‌ ಗಿಲ್‌

ICC ODI RANKING

ದುಬೈ : ಕಳೆದೆರಡು ಏಕ ದಿನ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತ ತಂಡದ ಯುವ ಬ್ಯಾಟರ್‌ ಶುಬ್ಮನ್‌ ಗಿಲ್‌ ICC ODI RANKING ಪಟ್ಟಿಯಲ್ಲಿ ಏಕಾಏಕಿ ೪೫ ಸ್ಥಾನ ಬಡ್ತಿ ಪಡೆದುಕೊಂಡು ೩೮ನೇ ಸ್ಥಾನಕ್ಕೇರಿದ್ದಾರೆ. ಬುಧವಾರ ಐಸಿಸಿ ನೂತನ rank ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಜಿಂಬಾಬ್ವೆ ವಿರುದ್ಧದ ಸರಣಿಯ ಮೊದಲ ಪಂದ್ಯದಲ್ಲ ಅಜೇಯ ೮೨ ರನ್‌ ಹಾಗೂ ಕೊನೇ ಪಂದ್ಯದಲ್ಲಿ ೯೭ ಎಸೆತಗಳಲ್ಲಿ ೧೩೦ ರನ್‌ ಬಾರಿಸುವುದರೊಂದಿಗೆ ಚೊಚ್ಚಲ ಶತಕದ ಸಾಧನೆಯನ್ನೂ ಮಾಡಿದ ಗಿಲ್‌ಗೆ ಭರ್ಜರಿ ಬಡ್ತಿ ಲಭಿಸಿದೆ. ಏತನ್ಮಧ್ಯೆ, ವಿರಾಟ್‌ ಕೊಹ್ಲಿ ಐದನೇ ಸ್ಥಾನದಲ್ಲೇ ಉಳಿದುಕೊಂಡಿದ್ದಾರೆ.

ವಿರಾಟ್‌ ಕೊಹ್ಲಿ ಜಿಂಬಾಬ್ವೆ ವಿರುದ್ಧದ ಸರಣಿಯಲ್ಲಿ ಆಡಲಿರಲಿಲ್ಲ. ಆದಾಗ್ಯೂ ಅವರು ೭೪೪ ಅಂಕಗಳೊಂದಿಗೆ ಐದನೇ ಸ್ಥಾನ ಕಾಪಾಡಿಕೊಂಡಿದ್ದಾರೆ. ಭಾರತ ತಂಡದ ಕಾಯಂ ಸದಸ್ಯ ರೋಹಿತ್ ಶರ್ಮ ಅವರೂ ಸರಣಿಯಲ್ಲಿ ಪಾಲ್ಗೊಂಡಿರಲಿಲ್ಲ. ಅವರಿಗೆ ಆರನೇ ಸ್ಥಾನ ಲಭಿಸಿದೆ.

ಭಾರತ ತಂಡದ ಕಾಯಂ ಸದಸ್ಯ ರೋಹಿತ್‌ ಶರ್ಮ ಅವರಿಗೆ ಆರನೇ ಸ್ಥಾನದಲ್ಲಿದ್ದಾರೆ. ಅಂತೆಯೇ ಜಿಂಬಾಬ್ವೆ ಹಾಗೂ ಅದಕ್ಕಿಂತ ಹಿಂದಿನ ವೆಸ್ಟ್‌ ಇಂಡೀಸ್‌ ಪ್ರವಾಸದ ವೇಳೆಯಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಆರಂಭಿಕ ಬ್ಯಾಟರ್‌ ಶಿಖರ್‌ ಧವನ್‌ ಅವರು ಒಂದು ಸ್ಥಾನ ಹಿಂಬಡ್ತಿ ಪಡೆದುಕೊಂಡು ೧೨ನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ ೮೯೧ ಅಂಕಗಳೊಂದಿಗೆ ಮೊದಲ ಸ್ಥಾನ ಪಡೆದುಕೊಂಡಿದ್ದರೆ, ದಕ್ಷಿಣ ಆಫ್ರಿಕಾದ ರಸ್ಸೀ ವಾನ್‌ ಡೆರ್‌ ಡಸ್ಸೆನ್ ಎರಡನೇ ಸ್ಥಾನದಲ್ಲಿದ್ದಾರೆ. ಬೌಲರ್‌ಗಳ ವಿಭಾಗದಲ್ಲಿ ನ್ಯೂಜಿಲೆಂಡ್‌ನ ವೇಗಿ ಟ್ರೆಂಟ್‌ ಬೌಲ್ಟ್‌ ಮೊದಲ ಸ್ಥಾನ ಪಡೆದುಕೊಂಡಿದ್ದು, ಅಲ್‌ರೌಂಡರ್‌ಗಳ ವಿಭಾಗದಲ್ಲಿ ಬಾಂಗ್ಲಾದೇಶದ ಶಕಿಬ್‌ ಅಲ್‌ ಹಸನ್‌ ಅಗ್ರ ಸ್ಥಾನ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | ICC ODI Ranking | ಜಿಂಬಾಬ್ವೆ ಸರಣಿ ಕ್ಲೀನ್‌ ಸ್ವೀಪ್‌ ಬಳಿಕ ಭಾರತದ ಒಡಿಐ Rank ಎಷ್ಟು?

Exit mobile version