Site icon Vistara News

ICC Odi Ranking: ಪಾಕ್​ ಆಟಗಾರನನ್ನು ಹಿಂದಿಕ್ಕಿ ಮೇಲೇರಿದ ಶುಭಮನ್​ ಗಿಲ್​

Indian cricketer shubman gill

ದುಬೈ: ಐಸಿಸಿ ನೂತನ ಏಕದಿನ ಬ್ಯಾಟಿಂಗ್​ ಶ್ರೇಯಾಂಕದಲ್ಲಿ(ICC Odi Ranking) ಭಾರತ ಯುವ ಆರಂಭಿಕ ಆಟಗಾರ ಶುಭಮನ್​ ಗಿಲ್(Shubman Gill)​ ಜೀವನ ಶ್ರೇಷ್ಠ 4ನೇ ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನ ಕ್ರಿಕೆಟ್​ ತಂಡದ ನಾಯಕ ಬಾಬರ್​ ಅಜಂ(Babar Azam) ಅಗ್ರಸ್ಥಾನ ಪಡೆದಿದ್ದಾರೆ. ವಿರಾಟ್​ ಕೊಹ್ಲಿ(Virat Kohli) ಅವರು 9ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಟಾಪ್​ 5 ನಲ್ಲಿ ಮೂವರು ಪಾಕ್​ ಆಟಗಾರರು

ಅಗ್ರ 5ರೊಳಗೆ ಪಾಕಿಸ್ತಾನದ ಆಡಗಾರರು ಕಾಣಿಸಿಕೊಂಡಿದ್ದಾರೆ. ಬಾಬರ್​ ಅಗ್ರಸ್ಥಾನ ಪಡೆದರೆ ಇಮಾಮ್​ ಉಲ್​ ಹಕ್​(752 ರೇಟಿಂಗ್​ ಅಂಕ) ಮೂರನೇ ಸ್ಥಾನ ಮತ್ತು ಫಖಾರ್​ ಜಮಾನ್​(740 ರೇಟಿಂಗ್​ ಅಂಕ)(Fakhar Zaman) 5ನೇ ಸ್ಥಾನ ಪಡೆದಿದ್ದಾರೆ. ನಾಲ್ಕನೇ ಸ್ಥಾನದಲ್ಲಿರುವ ಗಿಲ್​ಗಿಂತ ಮೂರು ರೇಟಿಂಗ್​ ಅಂಕ ಹಿಂದಿರುವ ಫಖಾರ್​ ಜಮಾನ್​ ಪ್ರಸಕ್ತ ಅಫಘಾನಿಸ್ತಾನ ವಿರುದ್ಧ ಸಾಗುತ್ತಿರುವ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದರೆ ಗಿಲ್​ ಅವರನ್ನು ಹಿಂದಿಕ್ಕಿ ಮೇಲಿನ ಸ್ಥಾನ ಪಡೆಯುವ ಅವಕಾಶವಿದೆ. ದಕ್ಷಿಣ ಆಫ್ರಿಕಾದ ರಸ್ಸಿ ವಾನ್‌ ಡರ್‌ ಡುಸೆನ್‌(777 ರೇಟಿಂಗ್​ ಅಂಕ) ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಗ್ರ 10ರಲ್ಲಿ ಇಬ್ಬರೇ ಭಾರತೀಯರು

ಟಾಪ್​ ಟೆನ್​ ಪಟ್ಟಿಯಲ್ಲಿ ಶುಭಮನ್​ ಗಿಲ್​ ಮತ್ತು ವಿರಾಟ್​ ಕೊಹ್ಲಿ ಇಬ್ಬರೇ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ವೆಸ್ಟ್​ ಇಂಡೀಸ್​ ವಿರುದ್ಧದ ಏಕದಿನ ಸರಣಿಯಲ್ಲಿ ಪಂದ್ಯವನ್ನಾಡುತ್ತಿದ್ದರೆ ಕೊಹ್ಲಿ ಟಾಪ್​ 5 ಒಳಗಡೆ ಸ್ಥಾನ ಪಡೆಯುತ್ತಿದ್ದರು. ಸದ್ಯ ಅವರು 705 ರೇಟಿಂಗ್​ ಅಂಕ ಹೊಂದಿದ್ದಾರೆ.

ಇದನ್ನೂ ಓದಿ ICC Odi Ranking: ಏಕದಿನ ಶ್ರೇಯಾಂಕದಲ್ಲಿ ಜೀವನ ಶ್ರೇಷ್ಠ ಪ್ರಗತಿ ಸಾಧಿಸಿದ ಶುಭಮನ್‌ ಗಿಲ್‌

ಸಿರಾಜ್​ ಒಂದು ಸ್ಥಾನ ಕುಸಿತ

ವಿಕೆಟ್​ ಟೇಕರ್​ ಬೌಲರ್​ ಮೊಹಮ್ಮದ್ ಸಿರಾಜ್​ ಅವರು ಒಂದು ಸ್ಥಾನ ಕುಸಿತ ಕಂಡು 670 ರೇಟಿಂಗ್​ ಅಂಕದೊಂದಿಗೆ 5ನೇ ಸ್ಥಾನ ಪಡೆದಿದ್ದಾರೆ. ವಿಂಡೀಸ್ ಏಕದಿನ​ ಸರಣಿಯಲ್ಲಿ ಶ್ರೇಷ್ಠ ಮಟ್ಟದ ಬೌಲಿಂಗ್​ ಪ್ರದರ್ಶನ ತೋರಿದ ಚೈನಾಮನ್​ ಖ್ಯಾತಿಯ ಬೌಲರ್​ ಕುಲ್​ದೀಪ್​ ಯಾದವ್​(622 ರೇಟಿಂಗ್​ ಅಂಕ) 10ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾದ ಜೋಶ್​ ಹ್ಯಾಜಲ್​ವುಡ್​ ಅಗ್ರಸ್ಥಾನ ಪಡೆದಿದ್ದಾರೆ. ಆಲ್​ ರೌಂಡರ್​ಗಳ ಪಟ್ಟಿಯಲ್ಲಿ 10ರೊಳಗೆ ಯಾವುದೇ ಟೀಮ್​ ಇಂಡಿಯಾ ಆಟಗಾರನು ಸ್ಥಾನ ಪಡೆದಿಲ್ಲ. ಬಾಂಗ್ಲಾದೇಶದ ಹಿರಿಯ ಆಟಗಾರ ಶಕೀಬ್​ ಅಲ್​ ಹಸನ್​ 371 ರೇಟಿಂಗ್​ ಅಂಕದೊಂದಿಗೆ ಅಗ್ರಸ್ಥಾನ ಅಲಂಕರಿಸಿದ್ದಾರೆ.

ಟಾಪ್​ 10 ಆಟಗಾರರು

1 ಬಾಬರ್ ಅಜಂ (ಪಾಕಿಸ್ತಾನ)- 880 ರೇಟಿಂಗ್

2 ರಸ್ಸಿ ವಾನ್‌ ಡರ್‌ ಡುಸೆನ್‌ (ದಕ್ಷಿಣ ಆಫ್ರಿಕಾ)- 777 ರೇಟಿಂಗ್

3 ಇಮಾಮ್ ಉಲ್ ಹಕ್ (ಪಾಕಿಸ್ತಾನ)- 752 ರೇಟಿಂಗ್

4 ಶುಭ​ಮನ್ ಗಿಲ್ (ಭಾರತ)- 743 ರೇಟಿಂಗ್

5 ಫಖಾರ್ ಜಮಾನ್ (ಪಾಕಿಸ್ತಾನ)- 740 ರೇಟಿಂಗ್

6 ಹ್ಯಾರಿ ಟೆಕ್ಟರ್ (ಐರ್ಲೆಂಡ್)- 726 ರೇಟಿಂಗ್

7 ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)- 726 ರೇಟಿಂಗ್

8 ಕ್ವಿಂಟನ್ ಡಿ ಕಾಕ್ (ದಕ್ಷಿಣ ಆಫ್ರಿಕಾ)- 718 ರೇಟಿಂಗ್

9 ವಿರಾಟ್ ಕೊಹ್ಲಿ (ಭಾರತ)- 705 ರೇಟಿಂಗ್

10 ಸ್ಟೀವನ್​ ಸ್ಮಿತ್ (ಆಸ್ಟ್ರೇಲಿಯಾ)- 702 ರೇಟಿಂಗ್

Exit mobile version