Site icon Vistara News

ICC ODI Team of the year: ಐಸಿಸಿ ವರ್ಷದ ಏಕದಿನ ತಂಡ; ಟೀಮ್​ ಇಂಡಿಯಾದ ಸಿರಾಜ್- ಶ್ರೇಯಸ್​ಗೆ ಸ್ಥಾನ

ICC ODI Team of the year

ದುಬೈ: ಐಸಿಸಿ ವರ್ಷದ ಅತ್ಯುತ್ತಮ ಏಕದಿನ ತಂಡ (ICC ODI Team of the year) ಮಂಗಳವಾರ ಪ್ರಕಟಗೊಂಡಿದೆ. ಈ ತಂಡದಲ್ಲಿ ಟೀಮ್​ ಇಂಡಿಯಾದ ಮೊಹಮ್ಮದ್​ ಸಿರಾಜ್​ ಮತ್ತು ಶ್ರೇಯಸ್​ ಅಯ್ಯರ್​ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಈ ತಂಡಕ್ಕೆ ಪಾಕಿಸ್ತಾನ ಕ್ರಿಕೆಟ್​ ತಂಡದ ಬಾಬರ್​ ಅಜಂ ನಾಯಕನಾಗಿದ್ದಾರೆ.

ಕ್ಯಾಲೆಂಡರ್ ವರ್ಷದಲ್ಲಿ ಒಟ್ಟಾರೆ ಪ್ರದರ್ಶನದ ಆಧಾರದ ಮೇಲೆ ಐಸಿಸಿ 11 ಆಟಗಾರರ ತಂಡವನ್ನು ಪ್ರತಿ ವರ್ಷವೂ ಆಯ್ಕೆ ಮಾಡುತ್ತದೆ. ಇದೀಗ 2022ರ ಸಾಲಿನ ಏಕದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿನ 11 ಆಟಗಾರರ ತಂಡವನ್ನು ಐಸಿಸಿ ಆಯ್ಕೆ ಮಾಡಿದೆ. ವರ್ಷದ ಅತ್ಯುತ್ತಮ ಏಕದಿನ ತಂಡದಲ್ಲಿ 7 ದೇಶಗಳ 11 ಆಟಗಾರರು ಸ್ಥಾನ ಪಡೆದಿದ್ದಾರೆ. ಅಚ್ಚರಿಯ ಎಂದರೆ ಏಕದಿನ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡದ ಒಬ್ಬ ಆಟಗಾರನೂ ಸ್ಥಾನ ಪಡೆದಿಲ್ಲ. ಜತೆಗೆ ರೋಹಿತ್​ ಮತ್ತು ವಿರಾಟ್​ ಕೊಹ್ಲಿಯೂ ಸ್ಥಾನ ಪಡೆಯುಲ್ಲಿ ವಿಫಲರಾಗಿದ್ದಾರೆ.

ಬಾಬರ್ ಅಜಂ ಕಳೆದ ವರ್ಷ ಏಕದಿನ ಪಂದ್ಯಗಳಲ್ಲಿ 87ಕ್ಕೂ ಅಧಿಕ ಸರಾಸರಿಯಲ್ಲಿ 679 ರನ್ ಗಳಿಸಿದ್ದರ ಸಾಧನೆಗಾಗಿ ಐಸಿಸಿ ವರ್ಷದ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ. ಭಾರತೀಯ ಆಟಗಾರರಲ್ಲಿ ಸ್ಥಾನ ಪಡೆದ ಶ್ರೇಯಸ್ ಅಯ್ಯರ್ 4ನೇ ಸ್ಥಾನದಲ್ಲಿದ್ದರೆ. ಸಿರಾಜ್ ವೇಗದ ಬೌಲರ್ ಆಗಿ ಆಯ್ಕೆಯಾಗಿದ್ದಾರೆ. ಸದ್ಯ ಸಿರಾಜ್​ ಆಡುತ್ತಿರುವ ಎಲ್ಲ ಪಂದ್ಯದಲ್ಲಿಯೂ ಶ್ರೇಷ್ಠ ಪ್ರದರ್ಶನ ತೋರುವ ಮೂಲಕ ಗಮನ ಸೆಳೆಯುತ್ತಿದ್ದಾರೆ.

ಐಸಿಸಿ ವರ್ಷದ ಏಕದಿನ ತಂಡ

ಬಾಬರ್ ಅಜಂ (ನಾಯಕ- ಪಾಕಿಸ್ತಾನ), ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ),ಶೈ ಹೋಪ್ (ವೆಸ್ಟ್ ಇಂಡೀಸ್),ಶ್ರೇಯಸ್ ಅಯ್ಯರ್ (ಭಾರತ),ಟಾಮ್ ಲ್ಯಾಥಮ್ (ನ್ಯೂಜಿಲ್ಯಾಂಡ್), ಸಿಕಂದರ್ ರಾಜಾ (ಜಿಂಬಾಬ್ವೆ), ಮೆಹಿದಿ ಹಸನ್ ಮಿರಾಜ್ (ಬಾಂಗ್ಲಾದೇಶ), ಅಲ್ಜಾರಿ ಜೋಸೆಫ್ (ವೆಸ್ಟ್ ಇಂಡೀಸ್), ಮೊಹಮ್ಮದ್ ಸಿರಾಜ್ (ಭಾರತ), ಟ್ರೆಂಟ್ ಬೌಲ್ಟ್ (ನ್ಯೂಜಿಲ್ಯಾಂಡ್​​), ಆ್ಯಡಂ ಜಂಪಾ (ಆಸ್ಟ್ರೇಲಿಯಾ).

Exit mobile version