ಢಾಕಾ: ಇಲ್ಲಿನ ಶೇರ್ ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಮಹಿಳೆಯರ (Team India) ಮತ್ತು ಬಾಂಗ್ಲಾದೇಶ ಮಹಿಳಾ ಏಕದಿನ ಸರಣಿ ನಾಟಕೀಯವಾಗಿ ಕೊನೆಗೊಂಡಿತು. ಪಂದ್ಯ ಟೈ ಆಗುವ ಮೂಲಕ ಸರಣಿಯೂ ಟೈ ಆಯಿತು. ಏತನ್ಮಧ್ಯೆ, ಭಾರತ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ ಅವರ ವರ್ತನೆ ಚರ್ಚೆಗೆ ಕಾರಣವಾಯಿತು. ತಮಗೆ ಎಲ್ಬಿಡಬ್ಲ್ಯು ಔಟ್ ನೀಡಿದ ಅಂಪೈರ್ ಮೇಲಿನ ಕೋಪಕ್ಕೆ ವಿಕೆಟ್ ಮೇಲೆ ಬ್ಯಾಟ್ನಿಂದ ಹೊಡೆದ ಘಟನೆಯೂ ನಡೆಯಿತು. ಆದರೆ, ಅವರು ಮಾಡಿರುವ ತಪ್ಪಿಗೆ ಐಸಿಸಿ ಭರ್ಜರಿ ಶಿಕ್ಷೆಯನ್ನೇ ಪ್ರಕಟಿಸಿದೆ. ಶೇಕಡಾ 75ರಷ್ಟು ಪಂದ್ಯದ ವೇತನವನ್ನು ದಂಡದ ರೂಪದಲ್ಲಿ ವಿಧಿಸಿದೆ. ಜತೆಗೆ ಮೂರು ಡಿಮೆರಿಟ್ ಅಂಕಗಳನ್ನೂ ನೀಡಿದೆ.
Harmanpreet Kaur Hits The Stumps With Her Bat In Anger After On-Field Umpire Rules Her LBW In 3rd ODI pic.twitter.com/09SVb8mF8C
— Nibraz Ramzan (@nibraz88cricket) July 22, 2023
ಐಸಿಸಿ ಆಟಗಾರರ ನೀತಿ ಸಂಹಿತೆ ಉಲ್ಲಂಘಿಸಿದ್ದ ಹರ್ಮನ್ಪ್ರೀತ್ ಕೌರ್ ಅವರ ಸಂಪೂರ್ಣ ಪಂದ್ಯದ ಶುಲ್ಕವನ್ನು ಕಡಿತಗೊಳಿಸುವ ಸಾಧ್ಯತೆಗಳಿವೆ ಎಂದು ನಿರೀಕ್ಷೆ ಮಾಡಲಾಗಿತ್ತು. ಜತೆಗೆ ಕೆಲವು ಪಂದ್ಯಗಳಿಗೆ ಅಮಾನತು ಶಿಕ್ಷೆಯೂ ಆಗಬಹುದು ಎಂದು ಅಂದುಕೊಳ್ಳಲಾಗಿತ್ತು. ಪಂದ್ಯದ ನಂತರದ ಸಂದರ್ಶನದಲ್ಲಿ ಅಂಪೈರಿಂಗ್ ಬಗ್ಗೆ ಹರ್ಮನ್ಪ್ರೀತ್ ಟೀಕೆಗಳನ್ನು ವ್ಯಕ್ತಪಡಿಸಿದ್ದರೂ ಅದೂ ಕೂಡು ಐಸಿಸಿ ಕೆಂಗಣ್ಣಿಗೆ ಗುರಿಯಾಗಬಹುದು ಎಂದು ಅಂದುಕೊಳ್ಳಲಾಗಿತ್ತು. ಆದರೆ, ಶೇಕಡಾ 75ರಷ್ಟು ದಂಡ ವಿಧಿಸಲಾಗಿದೆ. 3 ಡಿಮೆರಿಟ್ ಅಂಕಗಳನ್ನು ನೀಡಿದೆ
ಹರ್ಮನ್ಪ್ರೀತ್ ಕೌರ್ಗೆ ಸಿಟ್ಟು ಬರಲು ಕಾರಣವೇನು?
ಯಸ್ತಿಕಾ ಭಾಟಿಯಾ ಅವರಿಗೆ ಅಂಪೈರ್ ನೀಡಿದ್ದ ಎಲ್ಬಿಡಬ್ಲ್ಯು ತೀರ್ಪು ತಪ್ಪಾಗಿದೆ ಎಂಬುದು ಭಾರತೀಯ ಪಾಳೆಯದ ಅಭಿಪ್ರಾಯವಾಗಿತ್ತು. ಪೆವಿಲಿಯನ್ಗೆ ವಾಪಸ್ ಮರಳುವಾಗ ಅಂಪೈರ್ ಅವರನ್ನು ಕೆಕ್ಕರಿಸಿ ನೋಡಿದ್ದರು.
ಇದನ್ನೂ ಓದಿ : ಸೂರ್ಯಕುಮಾರ್, ಹರ್ಮನ್ಪ್ರೀತ್ ಕೌರ್ಗೆ ವಿಸ್ಡನ್ ಗೌರವ
226 ರನ್ಗಳ ಗುರಿ ಬೆನ್ನತ್ತಿದ ಭಾರತ ಉತ್ತಮ ಸ್ಥಿತಿಯಲ್ಲಿತ್ತು. ಆದರೆ, 34ನೇ ಓವರ್ನಲ್ಲಿ ಹರ್ಮನ್ಪ್ರೀತ್ ಸಿಂಗ್ ಅವರು ನಹೀದಾ ಅಕ್ಟರ್ ಎಸೆತಕ್ಕೆ ಎಲ್ಬಿಡಬ್ಲ್ಯು ಔಟ್ ಆದರು ಚೆಂಡು ಪ್ಯಾಡ್ಗಳಿಗಿಂತ ಹೊರಗೆ ಇತ್ತು ಎಂಬುದು ಹರ್ಮನ್ಪ್ರೀತ್ ಸಿಂಗ್ ಅವರ ಅಸಮಧಾನವಾಗಿತ್ತು. ಕೋಪಗೊಂಡ ಅವರು ತಮ್ಮ ಬ್ಯಾಟ್ ನಿಂದ ಸ್ಟಂಪ್ ಗಳನ್ನು ಹೊಡೆದರು, ನಂತರ ಹೊಡೆದು ಹೊರನಡೆದರು. ಅದಕ್ಕೂ ಮೊದಲು ಅವರು ಅಂಪೈರ್ ಕಡೆಗೆ ನೋಡಿ ನಿಂದಿಸಿದ್ದರೂ ಕೂಡ.
Harmanpreet Kaur holds no bars against the umpiring. 🔥#CricketTwitter #BANvIND
— Women’s CricZone (@WomensCricZone) July 22, 2023
pic.twitter.com/thHeO4ulod
ಪಂದ್ಯದ ಬಳಿಕ ಹರ್ಮನ್ ಪ್ರೀತ್ ಕೌರ್ ನಂತರ ಅಂಪೈರಿಂಗ್ ಅನ್ನು ಕರುಣಾಜನಕ ಎಂದು ಬಣ್ಣಿಸಿದರು. ಕೆಲವು ಕೆಟ್ಟ ಅಂಪೈರಿಂಗ್ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದರು. ಇದರಿಂದ ಭಾರತ ತಂಡದ ಆಟಗಾರರು ನಿರಾಸೆಗೊಂಡಿದ್ದೇವೆ, ಎಂದು ಹೇಳಿದ್ದರು.
ಕೋಪಗೊಂಡ ಬಾಂಗ್ಲಾ ನಾಯಕಿ
ಪಂದ್ಯದ ನಂತರದ ಮಾತನಾಡಿದ ಹರ್ಮನ್ಪ್ರೀತ್ ಕೌರ್ ನೀಡಿದ ಕೆಲವು ಹೇಳಿಕೆಗಳು ಬಾಂಗ್ಲಾದೇಶ ತಂಡದ ನಾಯಕಿಗೆ ಇಷ್ಟವಾಗಲಿಲ್ಲ. ಹೀಗಾಗಿ ಅವರು ಪಂದ್ಯದ ಬಳಿಕ ನಡೆದ ಅಧಿಕೃತ ಫೋಟೋ ಸೆಷನ್ ವೇಳೆ ಅವರು ಬರಲಿಲ್ಲ.
ಕೆಲವು ಚರ್ಚೆಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ. ಏನೇ ಆಗಲಿ, ನಾನು ಫೋಟೋ ಸೆಷನ್ಗೆ ಇರಬೇಕಾಗಿತ್ತು ಭಾವಿಸಲಿಲ್ಲ. ಆದ್ದರಿಂದ ನಾನು ಅಲ್ಲಿಂದ ಹೊರಟೆ ಎಂದು ಸುಲ್ತಾನಾ ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಫೋಟೋ ಸೆಷನ್ ವೇಳೆ ಹರ್ಮನ್ಪ್ರೀತ್ ಕೌರ್ ಬಾಂಗ್ಲಾದೇಶ ಆಟಗಾರರ ಕಡೆಗೆ ತಿರುಗಿ ಅಂಪೈರ್ಗಳನ್ನು ಕೂಡ ಕರೆದುಕೊಂಡು ಬಂದಿದ್ದೀರಿ ಎಂದು ಹೇಳಿದ್ದರು. ಇದರಿಂದ ಕೆರಳಿದ ನಿಗರ್ ಸುಲ್ತಾನ ಫೋಟೋ ಸೆಷನ್ ಬಿಟ್ಟು ಹೋಗಿದ್ದರು ಎನ್ನಲಾಗಿದೆ. ಅದಕ್ಕಿಂತ ಮೊದಲು ಅವರು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದರು.