Site icon Vistara News

ICC Rankings: ಏಕದಿನ ಶ್ರೇಯಾಂಕದಲ್ಲಿ ಕುಸಿತ ಕಂಡ ಭಾರತ

BCCI plans to rest India's key players for series against Afghanistan

#image_title

ದುಬಾೖ: ಐಸಿಸಿ ನೂತನ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್​ ಇಂಡಿಯಾಕ್ಕೆ ಹಿನ್ನಡೆಯಾಗಿದೆ. ದ್ವಿತೀಯ ಸ್ಥಾನದಲ್ಲಿದ್ದ ಭಾರತ ಮೂರನೇ ಸ್ಥಾನಕ್ಕೆ ಕುಸಿದಿದೆ. ಭಾರತದ ಬದ್ಧ ಎದುರಾಳಿ ಪಾಕಿಸ್ತಾನ ತಂಡ ದ್ವಿತೀಯ ಸ್ಥಾನಕ್ಕೇರಿದೆ.

ನೂತನ ಏಕದಿನ ಶ್ರೇಯಾಂಕದಲ್ಲಿ ಆಸ್ಟ್ರೇಲಿಯಾ ತಂಡ ನಂ.1 ಸ್ಥಾನದಲ್ಲಿಯೇ ಮುಂದುವರಿದಿದೆ. ಈ ಹಿಂದೆ 113 ರೇಟಿಂಗ್​ ಅಂಕ ಹೊಂದಿದ್ದ ಆಸೀಸ್​ ಇದೀಗ ನೂತನ ಶ್ರೇಯಾಂಕದಲ್ಲಿ 118ಕ್ಕೇರಿಸಿದೆ. ಪಾಕಿಸ್ತಾನ ಮತ್ತು ಭಾರತಕ್ಕಿಂತ ಸ್ವಲ್ಪ ಮುನ್ನಡೆ ಗಳಿಸಿ 116 ಅಂಕ ಹೊಂದಿದೆ. ಭಾರತ 115 ಅಂಕದೊಂದಿಗೆ ಮೂರನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಿವೀಸ್​ ವಿರುದ್ಧದ ಸರಣಿಯಲ್ಲಿ 4 ಪಂದ್ಯ ಗೆದ್ದ ತಕ್ಷಣ ಪಾಕಿಸ್ತಾನ ತಂಡ ಅಗ್ರಸ್ಥಾನಕ್ಕೆ ಏರಿತ್ತು. ಆದರೆ ಅಂತಿಮ ಪಂದ್ಯದಲ್ಲಿ ಸೋತ ಕಾರಣ ಮತ್ತೆ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಇಳಿದಿತ್ತು. ಇದೀಗ ನೂತನ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದಿದೆ.

ಇದನ್ನೂ ಓದಿ ICC World Cup 2023: ಭಾರತ-ಪಾಕ್ ಪಂದ್ಯಕ್ಕೆ ಡೇಟ್​ ಫಿಕ್ಸ್​;​ ಕಿವೀಸ್​-ಇಂಗ್ಲೆಂಡ್​ಗೆ ಮೊದಲ ಪಂದ್ಯ

ಟಿ20,ಟೆಸ್ಟ್​ ಕ್ರಿಕೆಟ್​ನಲ್ಲಿ ಭಾರತ ನಂ.1

ಟಿ20 ಶ್ರೇಯಾಂಕದಲ್ಲಿ ಭಾರತ ತಂಡ ನಂ.1 ಸ್ಥಾನ ಪಡೆದಿದೆ. ಸದ್ಯ ಭಾರತ 267 ರೇಟಿಂಗ್​ ಅಂಕ ಪಡೆದಿದೆ. ದ್ವಿತೀಯ ಸ್ಥಾನದಲ್ಲಿ ವಿಶ್ವ ವಿಜೇತ ಇಂಗ್ಲೆಂಡ್​ ತಂಡ ಕಾಣಿಸಿಕೊಂಡಿದೆ. ಇಂಗ್ಲೆಂಡ್​ 259 ರೇಟಿಂಗ್​ ಅಂಕ ಹೊಂದಿದೆ. ನ್ಯೂಜಿಲ್ಯಾಂಡ್​ ಮೂರನೇ ಸ್ಥಾನದಲ್ಲಿದೆ. ಟೆಸ್ಟ್​ ಕ್ರಿಕೆಟ್​ನಲ್ಲಿಯೂ ಭಾರತ ನಂ.1 ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿದೆ.

ಭಾರತ ಮತ್ತು ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್​ ಪಂದ್ಯ ಜೂನ್‌ 7 ರಿಂದ 11ರವರೆಗೆ ಲಂಡನ್​ನ ದಿ ಓವಲ್‌ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಆಸ್ಟ್ರೇಲಿಯಾ ಗೆದ್ದರೆ ಅಗ್ರಸ್ಥಾನದ ಜತೆಗೆ ಚಾಂಪಿಯನ್​ ಪಟ್ಟ ಅಲಂಕರಿಸಲಿದೆ. ಒಂದೊಮ್ಮೆ ಭಾರತ ಗೆದ್ದರೆ ಅಗ್ರಸ್ಥಾನದಲ್ಲೇ ಮುಂದುವರಿಯಲಿದೆ.​

Exit mobile version