Site icon Vistara News

ICC Rankings: ರಶೀದ್​ ಖಾನ್​ ಟಿ20 ನಂ.1 ಬೌಲರ್​

ICC Rankings: Rashid Khan T20 No.1 Bowler

ICC Rankings: Rashid Khan T20 No.1 Bowler

ದುಬೈ: ಐಸಿಸಿ ನೂತನ ಟಿ20 ಬೌಲರ್​ಗಳ ಶ್ರೇಯಾಂಕ(ICC Rankings) ಪಟ್ಟಿಯನ್ನು ಪ್ರಕಟಿಸಿದ್ದು, ಅಫಘಾನಿಸ್ತಾನ ಸ್ಪಿನ್ನರ್​ ರಶೀದ್​ ಖಾನ್(Rashid Khan)​ ನಂ.1 ಸ್ಥಾನ ಪಡೆದಿದ್ದಾರೆ. ಈ ಹಿಂದೆ ಅಗ್ರ ಸ್ಥಾನದಲ್ಲಿದ್ದ ಶ್ರೀಲಂಕಾ ತಂಡದ ವನಿಂದು ಹಸರಂಗ(Wanindu Hasaranga) ಒಂದು ಸ್ಥಾನಗಳ ಕುಸಿತ ಕಂಡು ದ್ವಿತೀಯ ಸ್ಥಾನಕ್ಕೆ ಜಾರಿದ್ದಾರೆ.

ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ ಕಾರಣ ರಶೀದ್​ ಖಾನ್​ ಅಗ್ರ ಸ್ಥಾನಕ್ಕೇರಿದ್ದಾರೆ. ಸದ್ಯ ಅವರು 710 ರೇಟಿಂಗ್​ ಅಂಕ ಹೊಂದಿದ್ದಾರೆ. ಹಸರಂಗ (695), ಫಝಲ್​ಹಕ್ ಫಾರೂಕಿ ಮೂರನೇ ಮತ್ತು ಜೋಶ್​ ಹ್ಯಾಝಲ್​ವುಡ್ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆದರೆ ಭಾರತದ ಯಾವುದೇ ಬೌಲರ್​ ಕೂಡ ಅಗ್ರ 10ರಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದಾರೆ. 635 ಅಂಕ ಹೊಂದಿರುವ ಅರ್ಶ್​ದೀಪ್​ ಸಿಂಗ್​ 14ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಬ್ಯಾಟಿಂಗ್​ ವಿಭಾಗದಲ್ಲಿ ಟೀಮ್​ ಇಂಡಿಯಾ ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್(suryakumar yadav)​ ಮೊದಲ ಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ಟಾಪ್-10 ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾದ ಆಟಗಾರರು ಸ್ಥಾನ ಪಡೆದಿಲ್ಲ. ವಿರಾಟ್ ಕೊಹ್ಲಿ(Virat Kohli) 2 ಸ್ಥಾನ ಕುಸಿತ ಕಂಡು 16ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ ICC Rankings: ಅಗ್ರ ಸ್ಥಾನ ಕಳೆದುಕೊಂಡ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

ಕೆ ಎಲ್ ರಾಹುಲ್(KL Rahul) ಮೂರು ಸ್ಥಾನ ಕುಸಿತದೊಂದಿಗೆ 28ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ(Rohit Sharma) 31ನೇ ಸ್ಥಾನಕ್ಕೆ ಕುಸಿದಿದ್ದಾರೆ. ಟೀಮ್​ ಇಂಡಿಯಾದ ಬ್ಯಾಟಿಂಗ್​ ಸೆನ್ಸೇಷನಲ್ ಶುಭಮನ್​ ಗಿಲ್(Shubman Gill) 33ನೇ ಸ್ಥಾನ ಪಡೆದಿದ್ದಾರೆ.

ಅಚ್ಚರಿ ಎಂದರೆ ಫೆಬ್ರವರಿಯಲ್ಲಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರನ್​ ಫಿಂಚ್​ ಅವರು ಟಾಪ್​-10ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಸದ್ಯ 680 ರೇಟಿಂಗ್​ ಅಂಕದೊಂದಿಗೆ 9 ಸ್ಥಾನ ಪಡೆದಿದ್ದಾರೆ. ಪಾಕಿಸ್ತಾನದ ವಿಕೆಟ್​ ಕೀಪರ್ ಕಮ್​​ ಬ್ಯಾಟರ್​ ಈ ಯಾದಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದಾರೆ.

Exit mobile version