Site icon Vistara News

ICC Rankings: ಅಗ್ರ ಸ್ಥಾನ ಕಳೆದುಕೊಂಡ ಟೀಮ್​ ಇಂಡಿಯಾ ವೇಗಿ ಮೊಹಮ್ಮದ್ ಸಿರಾಜ್

Mohammed Siraj narrates the funny moment of the day he was selected for Test cricket

Mohammed Siraj narrates the funny moment of the day he was selected for Test cricket

ದುಬೈ: ನೂತನ ಐಸಿಸಿ ಏಕದಿನ ಬೌಲಿಂಗ್​ ಶ್ರೇಯಾಂಕ(ICC Rankings) ಪಟ್ಟಿ ಬುಧವಾರ(ಮಾರ್ಚ್​ 22) ಪ್ರಕಟಗೊಂಡಿದೆ. ಟೀಮ್​ ಇಂಡಿಯಾದ ವೇಗಿ ಮೊಹಮ್ಮದ್​ ಸಿರಾಜ್(Mohammed Siraj) ಅವರು ಈ ನೂತನ ಶ್ರೇಯಾಂಕದಲ್ಲಿ ಕುಸಿತ ಕಾಣುವ ಮೂಲಕ ಅಗ್ರ ಸ್ಥಾನದಿಂದ ಕೆಳಗಿಳಿದಿದ್ದಾರೆ.

ಕಳೆದ ಒಂದು ತಿಂಗಳಿನಿಂದ ನಂಬರ್ 1 ಸ್ಥಾನ ಕಾಯ್ದುಕೊಂಡಿದ್ದ ಮೊಹಮ್ಮದ್ ಸಿರಾಜ್ ಇದೀಗ 2 ಸ್ಥಾನ ಕುಸಿತ ಕಾಣುವ ಮೂಲಕ ಮೂರನೇ ಸ್ಥಾನಕ್ಕೆ ಜಾರಿದ್ದಾರೆ. ಆಸ್ಟ್ರೇಲಿಯಾದ ವೇಗಿ ಜೋಶ್​ ಹ್ಯಾಜಲ್​ವುಡ್​(Josh Hazlewood) ಮತ್ತೆ ಅಗ್ರ ಸ್ಥಾನಕ್ಕೇರಿದ್ದಾರೆ. ಜನವರಿ 25 ರಂದು ಐಸಿಸಿ ಪ್ರಕಟಿಸಿದ್ದ ಏಕದಿನ ಬೌಲರ್​ ಶ್ರೇಯಾಂಕದಲ್ಲಿ ಸಿರಾಜ್ ಅಗ್ರಸ್ಥಾನ ಪಡೆದಿದ್ದರು. ಶ್ರೀಲಂಕಾ ಹಾಗೂ ನ್ಯೂಜಿಲ್ಯಾಂಡ್​ ವಿರುದ್ಧದ ಏಕದಿನ ಸರಣಿಯಲ್ಲಿ ಅಮೋಗ ಪ್ರದರ್ಶನ ನೀಡಿದ್ದ ಸಿರಾಜ್ ಒಟ್ಟು 5 ಪಂದ್ಯಗಳಿಂದ 14 ವಿಕೆಟ್ ಕಬಳಿಸಿದ್ದರು. ಈ ಮೂಲಕ ಅಗ್ರ ಸ್ಥಾನ ಸಂಪಾದಿಸಿದ್ದರು.

ಇದನ್ನೂ ಓದಿ ICC Test Championship; ಕಿವೀಸ್​ ವಿರುದ್ಧ ಲಂಕಾಗೆ ಸೋಲು; ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಿಸಿದ ಭಾರತ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಸಿರಾಜ್ ನಿರೀಕ್ಷಿತ ಪ್ರದರ್ಶನ ತೋರವಲ್ಲಿ ವಿಫಲವಾದ ಕಾರಣ ನೂತನ ಶ್ರೇಯಾಂಕ ಪಟ್ಟಿಯಲ್ಲಿ ಕುಸಿತ ಕಂಡರು. ಆಸೀಸ್ ವಿರುದ್ಧದ ಮೂರು ಪಂದ್ಯಗಳಲ್ಲಿ ಸಿರಾಜ್​ ಕೇಲವ 5 ವಿಕೆಟ್​ ಮಾತ್ರ ಪಡೆದಿದ್ದಾರೆ. ಸದ್ಯ ಅವರು 702 ರೇಟಿಂಗ್​ ಅಂಕ ಹೊಂದಿದ್ದಾರೆ. ಮಿಚೆಲ್​ ಸ್ಟಾರ್ಕ್​ ಕೂಡ ಸಮಾನ ಅಂಕ ಪಡೆದಿದ್ದಾರೆ ಒಂದೊಮ್ಮೆ ಸ್ಟಾರ್ಕ್​ ಪ್ರಸಕ್ತ ಸಾಗುತ್ತಿರುವ ಭಾರತ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿಕೆಟ್​ ಪಡೆದು ಮಿಂಚಿದರೆ ಸಿರಾಜ್​ ನಾಲ್ಕನೇ ಸ್ಥಾನಕ್ಕೆ ಕುಸಿಯುವ ಸಾಧ್ಯತೆ ಇದೆ. ಇನ್ನು ಈ ಪಟ್ಟಿಯಲ್ಲಿ ನ್ಯೂಜಿಲ್ಯಾಂಡ್​ನ ಹಿರಿಯ ವೇಗಿ ಟ್ರೆಂಟ್​ ಬೌಲ್ಟ್(Trent Boult)​ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.

Exit mobile version