Site icon Vistara News

ದಂಡದ ಬರೆ ಜತೆಗೆ ಡಬ್ಲ್ಯುಟಿಸಿ ಪಾಯಿಂಟ್ಸ್ ಟೇಬಲ್​ನಲ್ಲಿಯೂ ಕುಸಿತ ಕಂಡ ಭಾರತ

team india cricket

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ವಿರುದ್ಧದ(IND vs SA) ಮೊದಲ ಟೆಸ್ಟ್​ ಪಂದ್ಯದಲ್ಲಿ ಸೋಲಿನ ಆಘಾತ ಮಾತ್ರವಲ್ಲದೆ ದಂಡದ ಬಿಸಿಯೂ ಕೂಡ ಟೀಮ್​ ಇಂಡಿಯಾಕ್ಕೆ ಮುಟ್ಟಿದೆ. ನಿಗದಿತ ಅವಧಿಯೊಳಗೆ ಓವರ್​ ಪೂರ್ಣಗೊಳಿಸಿದ ಕಾರಣಕ್ಕೆ ಭಾರತ ತಂಡಕ್ಕೆ ಐಸಿಸಿ ದಂಡ ವಿಧಿಸಿದೆ.

ಮೂರೇ ದಿನಕ್ಕೆ ಮುಕ್ತಾಯ ಕಂಡ ಟೆಸ್ಟ್​ ಪಂದ್ಯದಲ್ಲಿ ಭಾರತ ಇನಿಂಗ್ಸ್ ಹಾಗೂ 32 ರನ್ ಅಂತರದ ಸೋಲಿಗೆ ತುತ್ತಾಗಿತ್ತು. ಐಸಿಸಿ ವಿಧಿಸಿದ ದಂಡದ ಪ್ರಕಾರ ಭಾರತ ತಂಡದ ಆಟಗಾರರು ಈ ಪಂದ್ಯದ ಶುಲ್ಕದ ಶೇ 10ರಷ್ಟನ್ನು ನೀಡಬೇಕಿದೆ. ನಾಯಕ ರೋಹಿತ್ ಶರ್ಮಾ ದಂಡ ಪಾವತಿಸಲು ಸಮ್ಮತಿಸಿದ್ದಾರೆ ಎಂದು ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕುಸಿತ

ಈ ಸೋಲಿನಿಂದಾಗಿ ಭಾರತ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (ಡಬ್ಲ್ಯುಟಿಸಿ) ಅಂಕಪಟ್ಟಿಯಲ್ಲಿ(World Test Championship (2023-2025) Points table) ಭಾರಿ ಕುಸಿತ ಕಂಡಿದೆ. ಗೆಲುವು ಕಂಡ ದಕ್ಷಿಣ ಆಫ್ರಿಕಾ ಏಳನೇ ಸ್ಥಾನದಿಂದ ಮೊದಲ ಸ್ಥಾನಕ್ಕೆ ಏರಿದೆ. ಮೊದಲ ಸ್ಥಾನದಲ್ಲಿದ್ದ ಭಾರತ ಐದನೇ ಸ್ಥಾನಕ್ಕೆ ಕುಸಿದಿದೆ.

ಭಾರತ ದ್ವಿತೀಯ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಮತ್ತೆ ಮೇಲಕ್ಕೆ ಏರಬುದಾಗಿದೆ. ಇಲ್ಲಿಯೂ ಸೋಲು ಕಂಡರೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೆ ರೇಸ್‌ನಲ್ಲಿರಲು ಟೀಮ್ ಇಂಡಿಯಾ ಇನ್ನಿಲ್ಲದ ಕಸರತ್ತು ನಡೆಸಬೇಕಾದಿತು. ಇದೇ ವರ್ಷ ನಡೆದಿದ್ದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್ ಫೈನಲ್​ ಪ್ರವೇಶಕ್ಕೂ ಭಾರತ ಕೊನೆಯ ಕ್ಷಣದಲ್ಲಿ ಹರಸಾಹಸ ಪಟ್ಟು ಬೇರೆ ತಂಡ ಸೋಲು ಮತ್ತು ಗೆಲುವಿನ ಲೆಕ್ಕಾಚಾರದ ಮೂಲಕ ಫೈನಲ್​ ಪ್ರವೇಶ ಪಡೆದಿತ್ತು. ಆದರೆ ಫೈನಲ್​ನಲ್ಲಿ ಆಸೀಸ್​ ವಿರುದ್ಧ ಹೀನಾಯವಾಗಿ ಸೋತು ದ್ವಿತೀಯ ಬಾರಿಯೂ ಕಪ್​ ಗೆಲ್ಲುವಲ್ಲಿ ವಿಫಲವಾಗಿತ್ತು. ಭಾರತ ತಂಡದ ಸೋಲಿನಿಂದಾಗಿ ಬಾಂಗ್ಲಾದೇಶ ನಾಲ್ಕನೇ ಮತ್ತು ಗೆಲುವಿನ ಶೇಕಡಾವಾರು 50 ಇರುವ ನ್ಯೂಜಿಲ್ಯಾಂಡ್​ ದ್ವಿತೀಯ ಸ್ಥಾನಕ್ಕೇರಿದೆ.

ಇದನ್ನೂ ಓದಿ IND vs SA: ಸೋಲಿನ ಬೆನ್ನಲ್ಲೇ ಟೀಮ್​ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ವೇಗಿ

ಭಾರತದ ಗೆಲುವಿನ ಶೇಕಡಾವಾರು 67 ರಿಂದ 38.89ಕ್ಕೆ ಇಳಿದಿದೆ. ಹಾಗಾಗಿ 6ನೇ ಸ್ಥಾನಕ್ಕೆ ಕುಸಿಯಿತು. ಆಸ್ಟ್ರೇಲಿಯಾ ಶೇಕಡಾ 50 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ವೆಸ್ಟ್ ಇಂಡೀಸ್ 16.67 ಶೇಕಡಾದೊಂದಿಗೆ ಏಳನೇ ಮತ್ತು ಇಂಗ್ಲೆಂಡ್ 15 ಶೇಕಡಾದೊಂದಿಗೆ ಎಂಟನೇ ಸ್ಥಾನದಲ್ಲಿದೆ.

ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ದಂಡ ಪಾವತಿಸಲು ಸಮ್ಮತಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಅಂಕಪಟ್ಟಿಯಲ್ಲಿ ಭಾರತ ಆರನೇ ಸ್ಥಾನಕ್ಕೆ ಕುಸಿದಿದೆ. 38.89ರ ಜಯದ ಶೇಕಡಾವಾರು ಹೊಂದಿದೆ. ಮತ್ತೊಂದೆಡೆ ಮೊದಲ ಸರಣಿ ಆಡುತ್ತಿರುವ ದಕ್ಷಿಣ ಆಫ್ರಿಕಾ ಅಗ್ರಸ್ಥಾನದಲ್ಲಿದೆ.

Exit mobile version