Site icon Vistara News

Team India : ಬಾಂಗ್ಲಾ ಸರಣಿ ವೇಳೆ ದುರ್ವರ್ತನೆ; ಹರ್ಮನ್​ಪ್ರೀತ್ ಕೌರ್​ ಬ್ಯಾನ್​?

harmanpreet kaur

ನವ ದೆಹಲಿ: ಭಾರತ ಹಾಗೂ ಬಾಂಗ್ಲಾದೇಶ ನಡುವಿನ 3ನೇ ಏಕದಿನ ಪಂದ್ಯದಲ್ಲಿ ದುರ್ವರ್ತನೆ ತೋರಿದ ಭಾರತ ತಂಡದ ನಾಯಕಿ ಹರ್ಮನ್ ಪ್ರೀತ್ ಕೌರ್ ಗೆ ಐಸಿಸಿ ನಿಷೇಧ ಹೇರುವ ಸಾಧ್ಯತೆ ಇದೆ. ಪಂದ್ಯದ ಸಮಯದಲ್ಲಿ ಅಂಪೈರ್​ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ವೇಳೆ ಭಾರತೀಯ ನಾಯಕಿ ತನ್ನ ಬ್ಯಾಟ್ ಅನ್ನು ಸ್ಟಂಪ್​ಗೆ ಬಡಿದಿದ್ದರು. ಇದ ಕಾರಣಕ್ಕೆ 35ರ ಹರೆಯದ ಆಟಗಾರ್ತಿಗೆ 4 ಡಿಮೆರಿಟ್ ಅಂಕಗಳನ್ನು ನೀಡಲಾಗಿತ್ತು. ಇದೀಗ ಅವರಿಗೆ ಕನಿಷ್ಠ ಎರಡು ಪಂದ್ಯಗಳ ಅಮಾನತು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ. ಇದರಿಂದಾಗಿ ಏಷ್ಯನ್ 2023ರಲ್ಲಿ ಅವರಿಗೆ ಭಾಗವಹಿಸಲು ಸಾಧ್ಯವಿಲ್ಲ ಎನ್ನಲಾಗಿದೆ.

3ನೇ ಏಕದಿನ ಪಂದ್ಯದ ವೇಳೆ ಹರ್ಮನ್ ಪ್ರೀತ್ ಕೌರ್ ತೋರಿದ ವರ್ತನೆಗೆ ನಾಲ್ಕು ಡಿಮೆರಿಟ್ ಅಂಕಗಳನ್ನು ನೀಡಲಾಗಿದೆ. ಭಾರತೀಯ ನಾಯಕಿ ಬ್ಯಾಟ್​ ಮಾಡುವ ವೇಳೆ ಅಂಪೈರ್ ಎಲ್​ಬಿಡಬ್ಲ್ಯು ಔಟ್​ ನೀಡಿದ್ದರು. ಇದರಿಂದ ಕೋಪಗೊಂಡ ಅವರು ಮೈದಾನದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದರು. ಬಳಿಕ ತಮ್ಮ ಬ್ಯಾಟ್​ನಿಂದ ಸ್ಟಂಪ್ ಮೇಲೆ ಹೊಡಿದ್ದರು. ಪಂದ್ಯದ ನಂತರ ಮಾತನಾಡುವಾಗ ಅಂಪೈರಿಂಗ್ ಬಗ್ಗೆಯೂ ಟೀಕೆ ವ್ಯಕ್ತಪಡಿಸಿದ್ದರು.

ಕೆಲವು ಕೆಟ್ಟ ಅಂಪೈರಿಂಗ್ ತೀರ್ಪ ನೀಡಲಾಗಿದೆ. ಅಂಪೈರ್​ಗಳು ನೀಡಿದ ಕೆಲವು ನಿರ್ಧಾರಗಳ ಬಗ್ಗೆ ನಾವು ನಿಜವಾಗಿಯೂ ನಿರಾಶೆಗೊಂಡಿದ್ದೇವೆ. ಅಲ್ಲಿ ನಡೆಯುತ್ತಿದ್ದ ಅಂಪೈರಿಂಗ್ ರೀತಿಯನ್ನು ನೋಡಿ ನಮಗೆ ತುಂಬಾ ಆಶ್ಚರ್ಯವಾಯಿತು. ಮುಂದಿನ ಬಾರಿ ನಾವು ಬಾಂಗ್ಲಾದೇಶಕ್ಕೆ ಬಂದಾಗಲೆಲ್ಲಾ, ನಾವು ಈ ರೀತಿಯ ಅಂಪೈರಿಂಗ್ ಅನ್ನು ಎದುರಿಸಬೇಕಾಗುತ್ತದೆ ಎಂಬುದೇ ಬೇಸರದ ವಿಷಯ. ಅದಕ್ಕೆ ಅನುಗುಣವಾಗಿ ನಾವು ನಮ್ಮನ್ನು ಸಿದ್ಧಪಡಿಸಿಕೊಳ್ಳಬೇಕು ಎಂದು ಹರ್ಮನ್​ಪ್ರೀತ್​ ಕೌರ್ ಹೇಳಿದ್ದರು.

ಕೊನೆಗೊಳ್ಳದ ಕೋಪ

ಹರ್ಮನ್ ಪ್ರೀತ್ ಕೋಪ ಅಲ್ಲಿ ನಿಲ್ಲಲಿಲ್ಲ. ಫೋಟೋ ಸೆಷನ್​ ವೇಳೆ ಹರ್ಮನ್​ಪ್ರೀತ್​ ಬಾಂಗ್ಲಾದೇಶ ನಾಯಕಿಗೆ ಅಂಪೈರ್​ಗಳನ್ನು ಆಹ್ವಾನಿಸಿ ಎಂದು ಹೇಳುವ ಮೂಲಕ ಕಿಚಾಯಿಸಿದ್ದರು . ವರದಿಗಳ ಪ್ರಕಾರ, ಭಾರತೀಯ ನಾಯಕಿ ನೀವು ಇಲ್ಲಿ ಮಾತ್ರ ಏಕೆ ಇದ್ದೀರಿ? ಅಂಪೈರ್​​​ಗಳ ಪಂದ್ಯವನ್ನು ಸಮಗೊಳಿಸಿದ ನೀವು ಕೂಡ ಬನ್ನಿ. ನಿಮ್ಮೊಂದಿಗೆ ಫೋಟೋ ತೆಗೆದುಕೊಳ್ಳುವುದೂ ಉತ್ತಮ ಎಂದು ಹರ್ಮನ್​ಪ್ರೀತ್​ ಹೇಳಿದ್ದರು. ಈ ಮೂಲಕವೂ ಅವರು ಉಲ್ಲಂಘನೆ ಮಾಡಿದ್ದರು. ಇದರಿಂದ ಬೇಸರಗೊಂಡ ಬಾಂಗ್ಲಾದೇಶ ನಾಯಕಿ ನಿಗರ್ ಸುಲ್ತಾನಾ ತನ್ನ ದೇಶದ ಆಟಗಾರ್ತಿಯರನ್ನು ಫೋಟೋ ಸೆಷನ್​ ಮಾಡದೇ ವಾಪಸ್​ ಕರೆದೊಯ್ದಿದ್ದರು.

ಇದನ್ನೂ ಓದಿ : WOMENS IPL | ದೇಶೀಯ ಆಟಗಾರ್ತಿಯರಿಗೆ ಮಹಿಳಾ ಐಪಿಎಲ್​ ಉತ್ತಮ ವೇದಿಕೆ; ಹರ್ಮನ್​ಪ್ರೀತ್ ಕೌರ್ ವಿಶ್ವಾಸ

ಈ ಎಲ್ಲ ತಪ್ಪುಗಳಿಗಾಗಿ ಐಸಿಸಿ ನಿಯಮಗಳ ಪ್ರಕಾರ ನಾಲ್ಕು ಡಿಮೆರಿಟ್ ಅಂಕಗಳನ್ನು ಹರ್ಮನ್​ಪ್ರೀತ್ ಕೌರ್​ಗೆ ವಿಧಿಸಲಾಗಿತ್ತು. ಇದೀಗ ಎರಡು ಪಂದ್ಯಗಳಿಂದ ನಿಷೇಧ ಶಿಕ್ಷೆಯೂ ನೀಡಲಾಗಿದೆ. ಹೀಗಾಗಿ ಅವರು ಏಷ್ಯಾ ಕಪ್​ನ ಪಂದ್ಯದಲ್ಲಿ ಆಡುವುದು ಅಸಾಧ್ಯ ಎಂದು ಹೇಳಲಾಗಿದೆ.

Exit mobile version