ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವಿನ (Ind vs Pak) ವಿಶ್ವಕಪ್ ಪಂದ್ಯದ ನಂತರ ಮಿಕಿ ಆರ್ಥರ್ ಮಾಡಿದ ಟೀಕೆಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗಂಭೀರವಾಗಿ ಪರಿಗಣಿಸಿದೆ. ಮೆಗಾ ಮುಖಾಮುಖಿಯ ಮುಕ್ತಾಯದ ನಂತರ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಈ ಆಟವು ದ್ವಿಪಕ್ಷೀಯ ಸರಣಿಯಂತಿತ್ತು. ಇದು ಐಸಿಸಿಯ ಟೂರ್ನಿಯಂತಿರಲಿಲ್ಲ ಎಂದು ಟೀಕೆ ಮಾಡಿದ್ದರು. ಈ ಮೂಲಕ ಐಸಿಸಿ ಹಾಗೂ ಆತಿಥೇಯ ಭಾರತಕ್ಕೆ ಅವಮಾನ ಮಾಡಲು ಯತ್ನಿಸಿದ್ದರು. ಕ್ರಿಕೆಟ್ ನಿರ್ದೇಶಕರೊಬ್ಬರು ಈ ರೀತಿ ಮಾತನಾಡಿರುವುದು ಐಸಿಸಿಐ ನಿಯಮಗಳ ಉಲ್ಲಂಘನೆಯೇ ಎಂಬುದು ಈಗ ಪರಾಮರ್ಶೆಗೆ ಒಳಗಾಗಲಿದೆ. ಒಂದು ವೇಳೆ ಅವರು ಮಾತನಾಡಿದ್ದು ಐಸಿಸಿ ಘನತೆಗೆ ಕುತ್ತು ತಂದರೆ ಖಂಡಿತವಾಗಿಯೂ ಅವರು ಕಾನೂನು ಕ್ರಮವನ್ನು ಎದುರಿಸಲಿದ್ದಾರೆ.
ಅಕ್ಟೋಬರ್ 14 ರಂದು 1.3 ಲಕ್ಷ ಭಾರತೀಯರಿಗೆ ಆತಿಥ್ಯ ವಹಿಸಿದ್ದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಯಾವುದೇ ಪಾಕಿಸ್ತಾನಿ ಅಭಿಮಾನಿಗಳು ಇಲ್ಲದಿರುವುದು ಆರ್ಥರ್ ಅವರಿಗೆ ಈ ಹೇಳಿಕೆ ನೀಡಲು ಪ್ರೇರೇಪಿಸಿತ್ತು. ಮೆನ್ ಇನ್ ಗ್ರೀನ್ ಗೆ ಈ ನೆಲದಲ್ಲಿ ಯಾವುದೇ ಬೆಂಬಲವಿಲ್ಲ ಎಂದು ಅವರು ಹೇಳಿದ್ದಾರೆ. ಬೆರಳೆಣಿಕೆಯಷ್ಟು ಪಾಕಿಸ್ತಾನಿ ಪತ್ರಕರ್ತರು ಮಾತ್ರ ಐಸಿಸಿ ವಿಶ್ವಕಪ್ಗೆ ತಮ್ಮ ವೀಸಾಗಳನ್ನು ಅನುಮೋದಿಸಿದ್ದರು. ಪ್ರೇಕ್ಷಕರಿಗೆ ಇಲ್ಲಿಗೆ ಬರಲು ಅವಕಾಶ ಸಿಕ್ಕಿರಲಿಲ್ಲ. ಇದನ್ನು ಆರ್ಥರ್ ಆಕ್ಷೇಪಿಸಿದ್ದರು.
” ನಮ್ಮ ಮೇಲೆ ಪರಿಣಾಮ ಬೀರುವುದಿಲ್ಲ ಎಂದರೆ ನಾನು ಸುಳ್ಳು ಹೇಳುತ್ತೇನೆ” ಎಂದು ಆರ್ಥರ್ ಪಂದ್ಯದ ನಂತರ ಹೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇದು ಐಸಿಸಿ ಟೂರ್ನಿಯಂತೆ ಕಾಣಲಿಲ್ಲ. ಇದು ದ್ವಿಪಕ್ಷೀಯ ಸರಣಿಯಂತೆ ತೋರಿತು. ಇದು ಬಿಸಿಸಿಐ ಕಾರ್ಯಕ್ರಮದಂತೆ ಭಾಸವಾಯಿತು ಎಂದು ಮಿಕಿ ಆರ್ಥರ್ ಹೇಳಿದ್ದರು.
ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಶನಿವಾರ ಪಾಕಿಸ್ತಾನ ವಿರುದ್ಧ ಭಾರತ ಸಮಗ್ರ ಗೆಲುವು ದಾಖಲಿಸಿದ ನಂತರ ಪಾಕಿಸ್ತಾನ ತಂಡದ ನಿರ್ದೇಶಕ ಮಿಕಿ ಆರ್ಥರ್ ಅಸಮಾಧಾನ ವ್ಯಕ್ತಪಡಿಸಿದ್ದರು. ಅಭಿಮಾನಿ ಬಳಗದ ಏಕಪಕ್ಷೀಯ ಸ್ವರೂಪವನ್ನು ಪ್ರಶ್ನಿಸಿದ್ದರು ವಿಶ್ವದ ಅತಿದೊಡ್ಡ ಸ್ಟೇಡಿಯಂ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ-ಪಾಕಿಸ್ತಾನ ನಡುವೆ ಪಂದ್ಯ ನಡೆಯಿತು. ‘ಮೆನ್ ಇನ್ ಬ್ಲೂ’ ಅನ್ನು ಬೆಂಬಲಿಸಲು ತವರಿನ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ಅವರ ಕಣ್ಣು ಕುಕ್ಕಿತ್ತು.
ಇದನ್ನೂ ಓದಿ : ICC World Cup 2023 : ಗೆಲುವಿನ ಜತೆಗೆ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಸಂತಸದ ಸುದ್ದಿ
ಆರ್ಥರ್ ಅವರ ಟೀಕೆಯ ನಂತರ ಐಸಿಸಿ ಗ್ರೆಗ್ ಬಾರ್ಕ್ಲೇ ತಮ್ಮ ಹೇಳಿಕೆಯನ್ನು ನೀಡಿದ್ದಾರೆ. “ನಾವು ನಡೆಸುವ ಪ್ರತಿಯೊಂದು ಟೂರ್ನಿಯಲ್ಲಿ ವಿವಿಧ ಭಾಗಗಳಿಂದ ಯಾವಾಗಲೂ ಟೀಕೆಗಳು ಇರುತ್ತವೆ. ಬಹುಶಃ ನಾವು ನಿರ್ಲಕ್ಷ್ಯ ಮಾಡುವ ಸಂಗತಿಗಳು ಅವರು. ಅಥವಾ ಇನ್ನಷ್ಟು ಕೆಲಸ ಮಾಡಲು ಪ್ರಯತ್ನಿಸುವ ವಿಷಯಗಳಾಗಿರುತ್ತವೆ. ಆದ್ದರಿಂದ ಈ ವಿಷಯಗಳು ಪ್ರಾರಂಭದಲ್ಲಿ ಮಾತ್ರ ಇರುತ್ತವೆ. ನಾವು ಏನು ಉತ್ತಮವಾಗಿ ಮಾಡಬಹುದು, ನಾವು ವಿಶ್ವಕಪ್ಗಳನ್ನು ಹೇಗೆ ಸುಧಾರಿಸಬಹುದು ಎಂದು ಹೇಳಿಕೆ ನೀಡಿದ್ದರು.
“ನಾವು ಅದನ್ನು ಹೇಗಿದೆಯೋ ಹಾಗೆಯೇ ತೆಗೆದುಕೊಳ್ಳುತ್ತೇವೆ, ಟೂರ್ನಿಯ ಅಂತ್ಯಕ್ಕೆ ಹೋಗುತ್ತೇವೆ. ಇದು ಇನ್ನೂ ಅತ್ಯುತ್ತಮ ವಿಶ್ವಕಪ್ ಆಗುವುದು ಖಚಿತ ಎಂದು”ಎಂದು ಅವರು ಹೇಳಿದ್ದಾರೆ.
ರಿಜ್ವಾನ್ ವಿರುದ್ಧವೂ ದೂರು
ಅಕ್ಟೋಬರ್ 6ರಂದು ಹೈದರಾಬಾದ್ನಲ್ಲಿ ನಡೆದ ಪಾಕಿಸ್ತಾನ (Pakistan Cricket Team) ಮತ್ತು ನೆದರ್ಲೆಡ್ಸ್ ನಡುವಿನ ಪಂದ್ಯದ ವೇಳೆ ಮೊಹಮ್ಮದ್ ರಿಜ್ವಾನ್ ಅವರು ಮೈದಾನದಲ್ಲೇ ನಮಾಜ್ ಮಾಡಿ ತೊಂದರೆ ಎದುರಿಸುವಂತಾಗಿದೆ. ಪಾಕಿಸ್ತಾನದ ವಿಕೆಟ್ ಕೀಪರ್ ವಿರುದ್ಧ ಸುಪ್ರೀಂ ಕೋರ್ಟ್ ವಕೀಲ ವಿನೀತ್ ಜಿಂದಾಲ್ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಗೆ ದೂರು ನೀಡಿದ್ದಾರೆ. ಧಾರ್ಮಿಕ ಆಚರಣೆಗಳ ಮೂಲಕ ರಿಜ್ವಾನ್ ಕ್ರೀಡಾ ಮನೋಭಾವಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಜಿಂದಾಲ್ ತಮ್ಮ ದೂರಿನಲ್ಲಿ ಬರೆದುಕೊಂಡಿದ್ದಾರೆ.
ಕುತೂಹಲಕಾರಿ ಸಂಗತಿಯೆಂದರೆ, ವಿನೀತ್ ಜಿಂದಾಲ್ ಈ ಹಿಂದೆ ಪಾಕಿಸ್ತಾನದ ನಿರೂಪಕ ಮತ್ತು ವೀಕ್ಷಕ ವಿವರಣೆಗಾರ್ತಿ ಝೈನಬ್ ಅಬ್ಬಾಸ್ ವಿರುದ್ಧ ದೂರು ದಾಖಲಿಸಿದ್ದರು, ಅವರ ಹಿಂದೂ ಹಾಗೂ ಭಾರತ ವಿರೋಧಿ ಹೇಳಿಕೆಗಳನ್ನು ಆಕ್ಷೇಪಿಸಿ ದೂರು ನೀಡಿದ್ದರು. ಹೀಗಾಗ ಝೈನಾಬ್ ಹೆದರಿ ಭಾರತದಿಂದ ವಾಪಸ್ ಹೋಗಿದ್ದರು.
2021 ರ ಟಿ 20 ವಿಶ್ವಕಪ್ನಲ್ಲಿ ಭಾರತದ ವಿರುದ್ಧದ ವಿಶ್ವ ಕಪ್ ಪಂದ್ಯದ ವೇಳೆ ಮೊಹಮ್ಮದ್ ರಿಜ್ವಾನ್ ಪಂದ್ಯದ ಮಧ್ಯದಲ್ಲಿ ನಮಾಜ್ ಮಾಡಿದ್ದರು. ಆ ವಿಶ್ವ ಕಪ್ ದುಬೈನದಲ್ಲಿ ನಡೆದಿದ್ದ ಕಾರಣ ಹೆಚ್ಚು ವಿವಾದಕ್ಕೆ ಒಳಗಾಗಿರಲಿಲ್ಲ. ಆದರೀಗ ಭಾರತದಲ್ಲಿ ನಡೆಯುತ್ತಿರುವ ಕಾರಣ ಸಮಸ್ಯೆ ಎದುರಾಗಿದೆ.ral Series’ remark