Site icon Vistara News

ICC T20 Ranking : ಹತ್ತರೊಳಗೆ ಸೂರ್ಯನಿಗೂ ಸ್ಥಾನ

ICC T20 Ranking

ದುಬೈ: ಭಾರತ ಸೀಮಿತ ಓವರ್‌ಗಳ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್‌ ಸೂರ್ಯಕುಮಾರ್‌ ಯಾದವ್‌ , ಇತ್ತೀಚೆಗೆ ಬಿಡುಗಡೆಯಾಗಿರುವ ICC T20 Ranking ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.

ಸೂರ್ಯಕುಮಾರ್‌ ಅವರು ಜುಲೈ ೧೦ರಂದು ನಡೆದ ಇಂಗ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಸ್ಫೋಟಕ 117 ರನ್‌ ಬಾರಿಸಿದ್ದರು. ಈ ಮೂಲಕ ಅವರು ಭಾರತ ತಂಡದ ಪರ ಟಿ೨೦ ಮಾದರಿಯಲ್ಲಿ ಶತಕ ಬಾರಿಸಿದ ಐದನೇ ಬ್ಯಾಟರ್‌ ಎನಿಕೊಂಡಿದ್ದರು. ಈ ಸಾಧನೆಯ ಹಿನ್ನೆಲೆಯಲ್ಲಿ ಅವರು Ranking ಪಟ್ಟಿಯಲ್ಲಿ ಏಕಾಏಕಿ ೪೪ ಸ್ಥಾನಗಳ ಬಡ್ತಿ ಪಡೆದುಕೊಂಡಿದ್ದಾರೆ. ಒಟ್ಟಾರೆ ೭೩೨ ರೇಟಿಂಗ್‌ ಪಾಯಿಂಟ್ಸ್‌ಗಳನ್ನು ಪಡೆಯುವ ಮೂಲಕ ಐದನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ.

೮೧೮ ರೇಟಿಂಗ್ಸ್‌ ಅಂಕಗಳನ್ನು ತಮ್ಮದಾಗಿಸಿಕೊಂಡಿರುವ ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಮ್‌ Ranking ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದ್ದಾರೆ. ಪಾಕ್‌ ತಂಡದ ವಿಕೆಟ್‌ಕೀಪರ್‌ ಬ್ಯಾಟರ್‌ ಮೊಹಮ್ಮದ್‌ ರಿಜ್ವಾನ್‌ (೭೯೪) ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಏಡೆನ್‌ ಮಾರ್ಕ್ರಮ್‌ (೭೫೭ ರೇಟಿಂಗ್‌ ಪಾಯಿಂಟ್‌) ಮೂರನೇ ಸ್ಥಾನ ತಮ್ಮದಾಗಿಸಿಕೊಂಡಿದ್ದಾರೆ. ಇಂಗ್ಲೆಂಡ್‌ನ ಡೇವಿಡ್‌ ಮಲಾನ್‌ (೭೫೪ ಅಂಕಗಳು) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಅಬ್ಬರಿಸಿದ್ದ ಸೂರ್ಯ

ಇಂಗ್ಲೆಂಡ್‌ ವಿರುದ್ಧದ ಮೂರನೇ ಪಂದ್ಯದಲ್ಲಿ ಸೂರ್ಯಕುಮಾರ್‌ ೪೮ ಎಸೆತಗಳಲ್ಲಿ ಶತಕ ಬಾರಿಸಿದ್ದ ಸೂರ್ಯಕುಮಾರ್‌ ೫೫ ಎಸೆತಗಳಲ್ಲಿ ೧೧೭ ರನ್‌ ಕಲೆ ಹಾಕಿದ್ದರು. ಸೂರ್ಯಕುಮಾರ್‌ ಅವರ ಅಮೋಘ ಹೋರಾಟದ ಹೊರತಾಗಿಯೂ ಇಂಗ್ಲೆಂಡ್‌ ನೀಡಿದ್ದ ೨೧೬ ರನ್‌ಗಳ ಗುರಿಯನ್ನು ಬೆನ್ನಟ್ಟಲು ವಿಫಲಗೊಂಡ ಭಾರತ ತಂಡ ೧೭ ರನ್‌ಗಳಿಂದ ಸೋಲೊಪ್ಪಿಕೊಂಡಿತ್ತು. ಆದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ತಂಡ ಸರಣಿಯನ್ನು ೨-೧ ರಿಂದ ಕೈವಶ ಮಾಡಿಕೊಂಡಿತ್ತು.

ಇದನ್ನೂ ಓದಿ: INDvsENG t20 : ಟಿ20 ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ ಐದನೇ ಭಾರತೀಯ ಆಟಗಾರ ಸೂರ್ಯಕುಮಾರ್‌

Exit mobile version