ದುಬೈ: ಐಸಿಸಿ ನೂತನ ಟಿ20 ಬ್ಯಾಟಿಂಗ್(ICC T20 Rankings) ಶ್ರೇಯಾಂಕ ಪ್ರಕಟಗೊಂಡಿದ್ದು, ಟೀಮ್ ಇಂಡಿಯಾದ ಬ್ಯಾಟಿಂಗ್ ಸೆನ್ಸೇಷನಲ್ ಶುಭಮನ್ ಗಿಲ್(Shubman Gill) ಭಾರಿ ಜಿಗಿತ ಕಂಡಿದ್ದಾರೆ. ಸೂರ್ಯಕುಮಾರ್ ಯಾದವ್(Suryakumar Yadav) ಈ ಹಿಂದಿನಂತೆ ಮೊದಲ ಸ್ಥಾನದಲ್ಲೇ ಮುಂದುವರಿದಿದ್ದಾರೆ.
168ನೇ ಸ್ಥಾನದಲ್ಲಿದ್ದ ಗಿಲ್ ಏಕಾಏಕಿ 30ನೇ ಸ್ಥಾನಕ್ಕೆ ಬಂದು ನಿಲ್ಲುವ ಮೂಲಕ ಜೀವನ ಶ್ರೇಷ್ಠ ಶ್ರೇಯಾಂಕ ಗಿಟ್ಟಿಸಿದ್ದಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಅಂತಿಮ ಟಿ20 ಪಂದ್ಯದಲ್ಲಿ ಶತಕ ಬಾರಿಸಿ ಮಿಂಚಿದ ಕಾರಣ ಅವರು ಶ್ರೇಯಾಂಕ ಪಟ್ಟಿಯಲ್ಲಿ ಈ ಸಾಧನೆ ಮಾಡಿದ್ದಾರೆ.
ಟಾಪ್-10 ಪಟ್ಟಿಯಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಟೀಮ್ ಇಂಡಿಯಾದ ಆಟಗಾರರು ಸ್ಥಾನ ಪಡೆದಿಲ್ಲ. ವಿರಾಟ್ ಕೊಹ್ಲಿ(Virat Kohli) ಒಂದು ಸ್ಥಾನ ಕುಸಿತ ಕಂಡು 15ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಕೆ ಎಲ್ ರಾಹುಲ್(KL Rahul) ಎರಡು ಸ್ಥಾನ ಕುಸಿತದೊಂದಿಗೆ 27ನೇ ಸ್ಥಾನದಲ್ಲಿದ್ದಾರೆ. ಹಾಗೆಯೇ ನಾಯಕ ರೋಹಿತ್ ಶರ್ಮಾ(Rohit Sharma) 29ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಇದನ್ನೂ ಓದಿ ICC Women’s T20 World Cup: ಐಸಿಸಿ ಮಹಿಳೆಯರ ಟಿ20 ವಿಶ್ವಕಪ್; ಭಾರತಕ್ಕೆ ಮೊದಲ ಪಂದ್ಯದಲ್ಲಿ ಪಾಕ್ ಸವಾಲು
ಅಚ್ಚರಿ ಎಂದರೆ ಮಂಗಳವಾರ(ಫೆ.7) ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ ಆಸ್ಟ್ರೇಲಿಯಾ ತಂಡದ ಸ್ಫೋಟಕ ಬ್ಯಾಟರ್ ಆರನ್ ಫಿಂಚ್ ಅವರು ಟಾಪ್-10ನಲ್ಲಿ ಕಾಣಿಸಿಕೊಂಡಿದ್ದು 8 ಸ್ಥಾನ ಪಡೆದಿದ್ದಾರೆ.