Site icon Vistara News

World Cup 2023 : ವಿಶ್ವ ಕಪ್​ ತಾಣಗಳ ಪರಿಶೀಲನೆಗೆ ಬಂದಿದೆ ಐಸಿಸಿ ತಂಡ, ಯಾಕೆ ಈ ಭೇಟಿ?

Wankhede Stadium

ನವದೆಹಲಿ: ಐಸಿಸಿ ವಿಶ್ವಕಪ್ 2023ಕ್ಕೆ (World Cup 2023) ಇನ್ನು ಕೇವಲ ಎರಡು ತಿಂಗಳುಗಳು ಬಾಕಿ ಇದೆ. ಐಸಿಸಿ (ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಅಧಿಕಾರಿಗಳ ತಂಡವು ಎಲ್ಲಾ 12 ಸ್ಥಳಗಳನ್ನು ಪರಿಶೀಲಿಸಲು ಭಾರತಕ್ಕೆ ಆಗಮಿಸಿದೆ. ಐಸಿಸಿ ನಿಯೋಗವು ಅಭ್ಯಾಸ ಪಂದ್ಯಗಳು ಸೇರಿದಂತೆ ಎಲ್ಲಾ ಸ್ಥಳಗಳನ್ನು ಪರಿಶೀಲಿನೆ ನಡೆಸಲಿದೆ. ಅಗತ್ಯವಿದ್ದರೆ ಬದಲಾವಣೆಗಳನ್ನು ಸೂಚಿಸಲಿದೆ. ತಂಡವು ಮುಂಬಯಿಯಿಂದ ಪರಿಶೀಲನೆ ಆರಂಭಿಸಿದೆ. ಅಲ್ಲಿಂದ ಅಹಮದಾಬಾದ್​ಗೆ ಹೋಗಿದೆ. ಈ ತಾಣದಲ್ಲಿ ಭಾರತ ಮತ್ತು ಪಾಕಿಸ್ತಾನ ಮತ್ತು ಫೈನಲ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಅವರ ಮುಂದಿನ ತಾಣ ಹೈದರಾಬಾದ್. ಪಾಕಿಸ್ತಾನ ತಂಡ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ವಿಶ್ವಕಪ್ 2023 ಅಕ್ಟೋಬರ್ 5ರಂದು ಆರಂಭವಾಗಲಿದೆ. ಅಹಮದಾಬಾದ್​​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಅಭ್ಯಾಸ ಪಂದ್ಯಗಳು ಸೆಪ್ಟೆಂಬರ್ 29ರಂದು ಪ್ರಾರಂಭವಾಗಲಿದ್ದು, ಅಕ್ಟೋಬರ್ 3ರಂದು ಕೊನೆಗೊಳ್ಳಲಿವೆ.

ಐಸಿಸಿ ತಂಡವು ಜುಲೈ 25ರಂದು ವಾಂಖೆಡೆ ಕ್ರೀಡಾಂಗಣದ ವೀಕ್ಷಣೆಗಾಗಿ ಮುಂಬೈಗೆ ಭೇಟಿ ನೀಡಿತು. ಅವರು ಸಿದ್ಧತೆಗಳಿಂದ ತೃಪ್ತರಾಗಿದ್ದರು. ಭಾರತದಲ್ಲಿ ಮಾನ್ಸೂನ್ ಹೆಚ್ಚಿನ ಸ್ಥಳಗಳ ಮೇಲೆ ಪರಿಣಾಮ ಬೀರಿದೆ. ಆದರೆ ಇನ್ನೂ ಎರಡು ತಿಂಗಳು ಬಾಕಿ ಇರುವಾಗ, ಕೆಲಸ ಪೂರ್ಣಗೊಳ್ಳುತ್ತದೆ ಎಂಬ ವಿಶ್ವಾಸವನ್ನು ಬಿಸಿಸಿಐ ಹೊಂದಿದೆ.

ಇದನ್ನೂ ಓದಿ : World Cup 2023 : ವಿಶ್ವ ಕಪ್​ ವೇಳೆ ಪ್ರೇಕ್ಷರಿಗೆ ಉಚಿತ ಕುಡಿಯುವ ನೀರು!

ಐಸಿಸಿ ನಿಯೋಗ ನಮ್ಮ ಯೋಜನೆಯಿಂದ ತುಂಬಾ ಖುಷಿ ಪಟ್ಟಿದೆ. ನಮ್ಮ ಕಡೆಯಿಂದ ಪರಿಹರಿಸಲು ಉಳಿದಿರುವ ಏಕೈಕ ವಿಷಯವೆಂದರೆ ಟಿಕೆಟಿಂಗ್ ಬೆಲೆಯನ್ನು ನಿರ್ಧರಿಸುವುದು. ಸೋಮವಾರ ಅಪೆಕ್ಸ್ ಕೌನ್ಸಿಲ್ ಸಭೆಯನ್ನು ಕರೆದಿದ್ದೇವೆ. ಅದರಂತೆ ನಾವು ಬಿಸಿಸಿಐಗೆ ಮಾಹಿತಿ ನೀಡುತ್ತೇವೆ ಎಂದು ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಕ್ರಿಕ್​​ಬಜ್​ಗೆ ತಿಳಿಸಿದ್ದಾರೆ.

ನಿಯೋಗವು ಜುಲೈ 26, 27 ಮತ್ತು 28 ರಂದು ಕ್ರಮವಾಗಿ ಚೆನ್ನೈ, ತಿರುವನಂತಪುರಂ ಮತ್ತು ಬೆಂಗಳೂರಿಗೆ ಭೇಟಿ ನೀಡಿತು. ಎಂಎ ಚಿದಂಬರಂ ಕ್ರೀಡಾಂಗಣ ಮತ್ತು ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಸಿದ್ಧತೆಗಳ ಬಗ್ಗೆ ಐಸಿಸಿ ತಂಡಗಳು ಸಂತೋಷಪಟ್ಟರೆ ತಿರುವನಂತಪುರದ ಗ್ರೀನ್​​ಫೀಲ್ಡ್​ ಕ್ರೀಡಾಂಗಣದಲ್ಲಿ ಕೆಲವು ಬದಲಾವಣೆಗಳನ್ನು ಸೂಚಿಸಿವೆ. ತಿರುವನಂತಪುರಂ ಎರಡು ಅಭ್ಯಾಸ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಗ್ರೀನ್ ಫೀಲ್ಡ್ ಕ್ರೀಡಾಂಗಣವು ಕಾರ್ಪೊರೇಟ್ ಬಾಕ್ಸ್​​ನ ಆಟಗಾರರ ಪ್ರದೇಶಗಳಲ್ಲಿ ಕೆಲವು ಮಾರ್ಪಾಡುಗಳನ್ನು ಹೊಂದಬೇಕೆಂದು ಐಸಿಸಿ ತಂಡ ಬಯಸಿದೆ.

ಅವರು ನಮ್ಮ ಸೌಲಭ್ಯಗಳ ಬಗ್ಗೆ ತೃಪ್ತಿ ಹೊಂದಿದ್ದಾರೆ. ಅವರ ಮನಸ್ಸಿನಲ್ಲಿ ಏನಾದರೂ ಇದ್ದರೆ ಅವರಿಂದ ಕೇಳಲು ನಾವು ಕಾಯುತ್ತಿದ್ದೇವೆ. ಅವರು ನಮಗೆ ಪತ್ರ ಬರೆಯುತ್ತಾರೆ,” ಎಂದು ತಮಿಳುನಾಡು ಕ್ರಿಕೆಟ್ ಅಸೋಸಿಯೇಷನ್ (ಟಿಎನ್​ಸಿಎ) ಅಧಿಕಾರಿಯೊಬ್ಬರು ಕ್ರಿಕ್​ಬಜ್​​ಗೆ ತಿಳಿಸಿದ್ದಾರೆ.

ಹೆಚ್ಚಿನ ಕ್ರೀಡಾಂಗಣಗಳಲ್ಲಿ ಪ್ರಸ್ತುತ ಔಟ್ ಫೀಲ್ಡ್ ಕೆಲಸಗಳು ನಡೆಯುತ್ತಿವೆ. ಐಸಿಸಿಯ ಪರಿಶೀಲನೆಯು ಕಾರ್ಯಾಚರಣೆಯ ವಿಷಯಗಳನ್ನು ಸುಧಾರಿಸುವತ್ತ ಇದೆ. ಐಸಿಸಿ ಮೈದಾನದ ಒಳಗೆ ಆಟಗಾರರ ಭದ್ರತೆ ಮತ್ತು ಪಂದ್ಯದ ಅಧಿಕೃತ ಪ್ರದೇಶಗಳಲ್ಲಿ ನಿರ್ದಿಷ್ಟ ಬೇಡಿಕೆಗಳನ್ನು ಇಟ್ಟಿದ.ಎ ಅಗತ್ಯವಿರುವ ಯಾವುದೇ ಬದಲಾವಣೆಗಳನ್ನು ಸೂಚಿಸಲು ತಜ್ಞರು ಐಸಿಸಿ ತಂಡದೊಂದಿಗೆ ಇದ್ದಾರೆ. ಒಂದು ವಾರದಲ್ಲಿ ಉಳಿದ ಎಲ್ಲಾ ಸ್ಥಳಗಳ ಭೇಟಿ ಮುಗಿಸಲಿದೆ ಎಂದು ಮೂಲಗಳು ತಿಳಿಸಿವೆ.

ವಿಶ್ವಕಪ್ 2023 ಸ್ಥಳಗಳು

1) ಅಹ್ಮದಾಬಾದ್: ನರೇಂದ್ರ ಮೋದಿ ಸ್ಟೇಡಿಯಂ
2) ಬೆಂಗಳೂರು: ಎಂ ಚಿನ್ನಸ್ವಾಮಿ ಕ್ರೀಡಾಂಗಣ
3) ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣ
4) ದೆಹಲಿ: ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂ
5) ಧರ್ಮಶಾಲಾ: ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
6) ಲಕ್ನೋ: ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಕ್ರೀಡಾಂಗಣ
7) ಹೈದರಾಬಾದ್: ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಉಪ್ಪಲ್
8) ಪುಣೆ: ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣ
9) ಕೋಲ್ಕತಾ: ಈಡನ್ ಗಾರ್ಡನ್ಸ್
10) ಮುಂಬಯಿ: ವಾಂಖೆಡೆ ಕ್ರೀಡಾಂಗಣ
11) ಗುವಾಹಟಿ: ಬರ್ಸಪಾರಾ ಕ್ರಿಕೆಟ್ ಸ್ಟೇಡಿಯಂ (ಅಭ್ಯಾಸ ಮಾತ್ರ)
12) ತಿರುವನಂತಪುರಂ: ಗ್ರೀನ್ಫೀಲ್ಡ್ ಇಂಟರ್ನ್ಯಾಷನಲ್ ಸ್ಟೇಡಿಯಂ (ಅಭ್ಯಾಸ ಮಾತ್ರ)

Exit mobile version