ದುಬೈ: ಇಂಗ್ಲೆಂಡ್(IND vs EMG) ವಿರುದ್ಧದ ಟೆಸ್ಟ್ ಸರಣಿಯ 2ನೇ ಮತ್ತು ಮೂರನೇ ಟೆಸ್ಟ್ನಲ್ಲಿ ಸತತ ದ್ವಿಶತಕ ಸಿಡಿಸಿದ ಭಾರತದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್(Yashasvi Jaiswal) ಐಸಿಸಿ ನೂತನ ಟೆಸ್ಟ್ ಶ್ರೇಯಾಂಕದಲ್ಲಿ(ICC Test Rankings) 14 ಸ್ಥಾನ ಮೇಲೇರಿ 15ನೇ ಸ್ಥಾನಕ್ಕೆ ತಲುಪಿದ್ದಾರೆ. ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಕೂಡ ಪ್ರಗತಿ ಸಾಧಿಸಿದ್ದಾರೆ. ಇಂಗ್ಲೆಂಡ್‌ನ ಬೆನ್ ಡಕೆಟ್ 12 ಸ್ಥಾನ ಮೇಲೇರಿ 13ನೇ ಸ್ಥಾನಕ್ಕೆ ತಲುಪಿದ್ದಾರೆ. ಕೇನ್ ವಿಲಿಯಮ್ಸನ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಪ್ರಾಬಲ್ಯವನ್ನು ಮುಂದುವರೆಸಿ ಅಗ್ರಸ್ಥಾನದಲ್ಲೇ ಮುಂದುವರಿದಿದ್ದಾರೆ.
ಸದ್ಯ ಇಂಗ್ಲೆಂಡ್ ವಿರುದ್ಧ ಸಾಗುತ್ತಿರುವ ಟೆಸ್ಟ್ನಲ್ಲಿ 6 ಇನಿಂಗ್ಸ್ ಆಡಿರುವ ಜೈಸ್ವಾಲ್ 545 ರನ್ ಗಳಿಸಿದ್ದಾರೆ. ರಾಂಚಿಯಲ್ಲಿ ನಡೆಯಲಿರುವ ನಾಲ್ಕನೇ ಟೆಸ್ಟ್ನಲ್ಲಿಯೂ ಹಲವು ದಾಖಲೆಗಳನ್ನು ಬರೆಯುವ ವಿಶ್ವಾಸದಲ್ಲಿದ್ದಾರೆ. ಅಮೋಘ ಪ್ರದರ್ಶನದ ಮೂಲಕ ತಮ್ಮ ಆಲ್ ರೌಂಡ್ ಸಾಮರ್ಥ್ಯ ಪ್ರದರ್ಶಿಸಿದ ರವೀಂದ್ರ ಜಡೇಜಾ ಕೂಡ ಶ್ರೇಯಾಂಕದಲ್ಲಿ ಪ್ರಗತಿ ಸಾಧಿಸಿದ್ದಾರೆ.
Top 5 Highest Ranked Indian Batter in ICC Test Batting rankings:
— CricketMAN2 (@ImTanujSingh) February 21, 2024
1. Virat Kohli (7).
2. Rohit Sharma (12).
3. Rishabh Pant (14).
4. Yashasvi Jaiswal (15).
5. Ravindra Jadeja (34).
– Yashasvi Jaiswal moves to No.15 position in the rankings…!!!! ⭐ pic.twitter.com/Zkjq0MU4sE
ಜಡೇಜಾ ರಾಜ್ಕೋಟ್ನ ಮೊದಲ ಇನಿಂಗ್ಸ್ನಲ್ಲಿ 112 ರನ್ ಗಳಿಸಿದ್ದರು. ಅವರ ಈ ಪ್ರದರ್ಶನದಿಂದ ಬ್ಯಾಟಿಂಗ್ ಶ್ರೇಯಾಂಕದಲ್ಲಿ 41 ನೇ ಸ್ಥಾನದಿಂದ 34 ನೇ ಸ್ಥಾನಕ್ಕೆ ಜಿಗಿದಿದ್ದಾರೆ. ಇನು ಈ ಪಂದ್ಯದಲ್ಲಿ 7 ವಿಕೆಟ್ ಕಿತ್ತು ಮಿಂಚಿದ ಪರಿಣಾಮ ಬೌಲಿಂಗ್ ಶ್ರೇಯಾಂಕದಲ್ಲಿಯೂ ಮೂರು ಸ್ಥಾನಗಳ ಪ್ರಗತಿ ಸಾಧಿಸಿ ಆರನೇ ಸ್ಥಾನ ಪಡೆದಿದ್ದಾರೆ. ಆಲ್ರೌಂಡರ್ಗಳ ಪಟ್ಟಿಯಲ್ಲಿ 469 ರೇಟಿಂಗ್ ಅಂಕ ಪಡೆದಿರುವ ಜಡೇಜ ತಮ್ಮ ಅಗ್ರಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಇದನ್ನೂ ಓದಿ Ind vs Eng : ನಾಲ್ಕನೇ ಟೆಸ್ಟ್ಗೆ ಜಸ್ಪ್ರಿತ್ ಬುಮ್ರಾ ಬಿಡುಗಡೆ , ರಾಹುಲ್ ಔಟ್
ಭಾರತ ತಂಡದ ನಾಯಕ ರೋಹಿತ್ ಶರ್ಮಾ ಕೂಡ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ ಕಾರಣ ಒಂದು ಸ್ಥಾನಗಳ ಏರಿಕೆ ಕಂಡು ಸದ್ಯ 731 ರೇಟಿಂಗ್ ಅಂಕದೊಂದಿಗೆ 12ನೇ ಸ್ಥಾನದಲ್ಲಿದ್ದಾರೆ. ವೈಯಕ್ತಿಕ ಕಾರಣ ನೀಡಿ ಇಂಗ್ಲೆಂಡ್ ಸರಣಿಯಿಂದ ಹೊರಗುಳಿದಿರುವ ವಿರಾಟ್ ಕೊಹ್ಲಿ 7ನೇ ಸ್ಥಾನದಲ್ಲಿದ್ದಾರೆ.
500 ವಿಕೆಟ್ಗಳ ಸರದಾರನಾದ ಆರ್.ಅಶ್ವಿನ್ ಅವರು ಒಂದು ಸ್ಥಾನ ಮೇಲೇರಿ ಬೌಲಿಂಗ್ ಶ್ರೇಯಾಂಕಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಜಸ್ಪ್ರೀತ್ ಬುಮ್ರಾ ಮೊದಲ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ.
ಟಾಪ್ 5 ಬ್ಯಾಟರ್ಗಳು
1. ಕೇನ್ ವಿಲಿಯಮ್ಸನ್- 893 ರೇಟಿಂಗ್ ಅಂಕ
2. ಸ್ಟೀವನ್ ಸ್ಮಿತ್-818 ರೇಟಿಂಗ್ ಅಂಕ
3. ಡ್ಯಾರಿಲ್ ಮಿಚೆಲ್-780 ರೇಟಿಂಗ್ ಅಂಕ
4. ಬಾಬರ್ ಅಜಂ-768 ರೇಟಿಂಗ್ ಅಂಕ
5. ಜೋ ರೂಟ್-766 ರೇಟಿಂಗ್ ಅಂಕ
ಟಾಪ್ 5 ಬೌಲರ್ಗಳು
1. ಜಸ್ಪ್ರೀತ್ ಬುಮ್ರಾ-876 ರೇಟಿಂಗ್ ಅಂಕ
2. ರವಿಚಂದ್ರನ್ ಅಶ್ವಿನ್-839 ರೇಟಿಂಗ್ ಅಂಕ
3. ಕಗಿಸೊ ರಬಾಡ-834 ರೇಟಿಂಗ್ ಅಂಕ
4. ಪಾಟ್ ಕಮಿನ್ಸ್-828 ರೇಟಿಂಗ್ ಅಂಕ
5. ಜೋಶ್ ಹ್ಯಾಜಲ್ವುಡ್-818 ರೇಟಿಂಗ್ ಅಂಕ