Site icon Vistara News

WTC Final 2023 : ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದ ಅತ್ಯಾಕರ್ಷಕ ಪ್ರೋಮೊ ಹೀಗಿದೆ

Virat kohli and Rahul dravid

#image_title

ದುಬೈ: ಜೂನ್ 7ರಂದು ಲಂಡನ್​ನ ಓವಲ್​​ನಲ್ಲಿ ಪ್ರಾರಂಭವಾಗಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಹುನಿರೀಕ್ಷಿತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ 2023 (ಡಬ್ಲ್ಯುಟಿಸಿ) ಫೈನಲ್​ ಪಂದ್ಯಕ್ಕಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಪ್ರೋಮೊ ವೀಡಿಯೊವನ್ನು ಬಿಡುಗಡೆ ಮಾಡಿದೆ. ಎರಡು ವರ್ಷಗಳ ಡಬ್ಲ್ಯುಟಿಸಿ ಋತುವಿನಲ್ಲಿ ಎರಡೂ ತಂಡಗಳ ಗಮನಾರ್ಹ ಪ್ರದರ್ಶನದ ಇಣುಕುನೋಟಗಳನ್ನು ಈ ಪ್ರೋಮೊ ಹೊಂದಿದೆ. ಎರಡೂ ತಂಡಗಳು ದೀರ್ಘ ಅವಧಿಕ ಕ್ರಿಕೆಟ್​ನ ವಿಶ್ವ ಕಪ್​ಗಾಗಿ ಸೆಣಸುತ್ತಿರುವ ಹಿನ್ನೆಲೆಯಲ್ಲಿ ಐಸಿಸಿ ಎರಡೂ ತಂಡಗಳ ಬಲವನ್ನು ತೋರಿಸುವ ವಿಡಿಯೊವನ್ನು ಬಿಡುಗಡೆ ಮಾಡಿದೆ.

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಡಬ್ಲ್ಯುಟಿಸಿ ಫೈನಲ್​ನಲ್ಲಿ ಎರಡನೇ ಬಾರಿಗೆ ಕಣಕ್ಕಿಳಿಯುತ್ತಿದೆ. 2019-21ರಲ್ಲಿ ಅವಧಿಯಲ್ಲಿ ನಡೆದ ಉದ್ಘಾಟನಾ ಆವೃತ್ತಿಯ ಡಬ್ಲ್ಯುಟಿಸಿಯಲ್ಲೂ ಟೀಮ್​ ಇಂಡಿಯಾ ಫೈನಲ್​​ಗೇರಿತ್ತು. ಅಲ್ಲಿ ನ್ಯೂಜಿಲೆಂಡ್​ ತಂಡಕ್ಕೆ ಮುಖಾಮುಖಿಯಾಗಿತ್ತು. ಆದರೆ, ಕೇನ್​ ವಿಲಿಯಮ್ಸನ್​ ನೇತೃತ್ವದ ತಂಡವು ಸೌತಾಂಪ್ಟನ್​ನಲ್ಲಿ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿ ಟ್ರೋಫಿಗೆ ಮುತ್ತಿಟ್ಟಿತ್ತು.

ಇದನ್ನೂ ಓದಿ : WTC Final 2023 : ವಿಶ್ವ ಟೆಸ್ಟ್ ಚಾಂಪಿಯನ್​ಷಿಪ್​ ಫೈನಲ್: ತಂಡದ ಪಟ್ಟಿ ಸಲ್ಲಿಸಿದ ಭಾರತ, ಆಸ್ಟ್ರೇಲಿಯಾ

ಭಾರತ ತಂಡ ದ್ವಿಪಕ್ಷೀಯ ಸರಣಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೊರಾತಾಗಿಯೂ ಕಳೆದ ಹತ್ತು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಪದಕ ಗೆಲ್ಲಲು ವಿಫಲಗೊಂಡಿದೆ. 2013ರ ಚಾಂಪಿಯನ್ಸ್ ಟ್ರೋಫಿಯೇ ಭಾರತ ತಂಡದ ಪಾಲಿಗೆ ಕೊನೇ ಐಸಿಸಿ ಕಿರೀಟ. ಅಲ್ಲಿ ಇಂಗ್ಲೆಂಡ್​ ತಂಡವನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿತ್ತು. ಇದೀಗ ಮತ್ತೊಂದು ಬಾರಿ ಅವಕಾಶ ಬಂದೊದಗಿದೆ. ಕಳೆದ ಮಾರ್ಚ್​​ನಲ್ಲಿ ನಡೆದ ಬಾರ್ಡರ್- ಗವಾಸ್ಕರ್ ಟ್ರೋಫಿ ಟೆಸ್ಟ್​ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡವನ್ನು 2-1 ಅಂತರದಿಂದ ಸೋಲಿಸಿದ್ದು, ಅದೇ ಜಿದ್ದಿನೊಂದಿಗೆ ಆಡಿ ಗೆಲುವು ಸಾಧಿಸುವುದು ಭಾರತದ ಅಭಿಲಾಷೆಯಾಗಿದೆ.

ನಿರೀಕ್ಷೆಗಳೇನು?

ವಿಶ್ವದ ಇಬ್ಬರು ಶ್ರೇಷ್ಠ ಬ್ಯಾಟರ್​​ಗಳಾದ ವಿರಾಟ್ ಕೊಹ್ಲಿ ಮತ್ತು ಸ್ಟೀವ್ ಸ್ಮಿತ್ ಈ ಸರಣಿಯಲ್ಲಿ ಮಿಂಚುವ ನಿರೀಕ್ಷೆಗಳಿವೆ. ಅವರಿಬ್ಬರ ಯಶಸ್ಸು ತಂಡಗಳ ಯಶಸ್ಸಿನಲ್ಲಿ ದೊಡ್ಡ ಪಾಲು ಪಡೆಯಲಿದೆ. ವೃತ್ತಿಜೀವನದಲ್ಲಿ, ಇಬ್ಬರೂ ಕಳೆದ ಕೆಲವು ವರ್ಷಗಳಿಂದ ಯಶಸ್ಸಿನ ಗ್ರಾಫ್​ನಲ್ಲಿ ಹಲವು ಏರಿಳಿತಗಳನ್ನು ಕಂಡಿದ್ದಾರೆ. ಇದೀಗ ಮತ್ತೊಂದು ಬಾರಿ ವಿಶ್ವ ವೇದಿಕೆಯಲ್ಲಿ ಮಿಂಚುವ ಅವಕಾಶ ಪಡೆದುಕೊಂಡಿದ್ದಾರೆ.

ಸ್ಮಿತ್ ಟೆಸ್ಟ್ ಕ್ರಿಕೆಟ್​​ನಲ್ಲಿ 169 ಇನಿಂಗ್ಸ್​​ಗಳಲ್ಲಿ ನಾಲ್ಕು ದ್ವಿಶತಕಗಳು, 30 ಶತಕಗಳು ಮತ್ತು 37 ಅರ್ಧಶತಕಗಳೊಂದಿಗೆ 8792 ರನ್ ಗಳಿಸಿದ್ದಾರೆ. ಕೊಹ್ಲಿ 183 ಇನಿಂಗ್ಸ್​​ಗಳಲ್ಲಿ ಏಳು ದ್ವಿಶತಕಗಳು, 28 ಶತಕಗಳು ಮತ್ತು 28 ಅರ್ಧಶತಕಗಳೊಂದಿಗೆ 8416 ರನ್ ಗಳಿಸಿದ್ದಾರೆ.

Exit mobile version